Kannada News Now

1.8M Followers

BIGG NEWS : SSLC ಪರೀಕ್ಷಾ ದಿನಾಂಕ ನಿಗಧಿ : ಜೂನ್ 25ರಿಂದ ಜುಲೈ.4ವರೆಗೆ ಪರೀಕ್ಷೆ

18 May 2020.3:12 PM

ಬೆಂಗಳೂರು : ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನೂ ಕೊನೆಗೂ ಜೂನ್ 25ರಿಂದ ಜುಲೈ.4ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇವತ್ತಿನ ಪತ್ರಿಕಾ ಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಉಮಾಶಂಕರ್ ಅವರು, ಆಯುಕ್ತರಾದ ಜಗದೀಶ್ ಸೇರಿದಂತೆ ಅನೇಕರಿದ್ದಾರೆ. ಮಾರ್ಚ್ 27ರಿಂದ ಏಪ್ರಿಲ್ 9ರವರೆಗೆ ನಡೆಯಬೇಕಿತ್ತು. ಆದ್ರೇ ಲಾಕ್ ಡೌನ್ ನಿಂದಾಗಿ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿರಲಿಲ್ಲ. ಈ ಬಗ್ಗೆ ಅನೇಕ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ.

ಕಳೆದ ಮೊನ್ನೆಯಷ್ಟೇ ವಿಧಾನ ಪರಿಷತ್ ನ ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರದ ಎಂ ಎಲ್ ಸಿ ಗಳ ಜೊತೆಗೂ ಮಾತುಕತೆ ನಡೆಸಿದ್ದಾನೆ. ಮಾಜಿ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರೊಂದಿಗೆ, ಗುರುರಾಜ್ ಖರ್ಜಗಿಯವರೊಂದಿಗೆ, ಬಿಎಲ್ ಶಂಕರ್ ಜೊತೆಗೆ, ಡಾ.ಎಂ.ಕೆ.ಶ್ರೀಧರ್, ಬರಗೂರು ರಾಮಚಂದ್ರಪ್ಪ, ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ಅನೇಕರೊಂದಿಗೆ ಮಾತನಾಡಿದ್ದೇನೆ ಎಂದರು.

ಅನೇಕರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆಗೆ ಹೋಗಿದ್ದೇನೆ. ವಿದ್ಯಾರ್ಥಿಗಳು, ಪೋಷಕರಿಂದ ಮಾಹಿತಿ ಪಡೆದಿದ್ದೇನೆ. ಅವರೆಲ್ಲರೂ ಬಾಕಿ ಉಳಿದ ಪಿಯುಸಿ ಪರೀಕ್ಷೆ, ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 43720 ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಆರೋಗ್ಯ ಇಲಾಖೆಯ ಅಗತ್ಯ ಮಾಹಿತಿ, ಶಾರೀರಿಕ ಅಂತರ ಕಾಯ್ದು ಕೊಂಡು ಹಾಸನದ ವ್ಯವಸ್ಥೆ ಮಾಡಲಿದ್ದೇವೆ. ಪ್ರತಿ ವಿದ್ಯಾರ್ಥಿ ಮಾಸ್ಕ್ ಉಚಿತವಾಗಿ ಸ್ಕೌಟ್ ಮತ್ತು ಗೈಡ್ಸ್ ನೀಡಲಿದೆ. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ನೀಡಲು ಎಂಎನ್ಸಿ ಕಂಪನಿಗಳು ಮುಂದೆ ಬಂದಿವೆ. ಅವನ್ನು ಈಗಾಗಲೇ ನೀಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಅನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಡೆಸಲಿದ್ದಾರೆ.

2879 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು 43,720 ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಸ್ಕೌಟ್ ಅಂಡ್ ಗೈಡ್ಸ್ ವಾಲಂಟರಿಯಾಗಿ ಮುಂದೆಬಂದು ಮಾಹಿತಿ ನೀಡಲಿದೆ. ಒಂದು ವೇಳೆ ವಿದ್ಯಾರ್ಥಿಗಳ ಆರೋಗ್ಯ ಅನಾರೋಗ್ಯದಿಂದ ಕೂಡಿದ್ದರೇ, ಅವರಿಗೆ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುತ್ತದೆ. ಪರೀಕ್ಷೆ ಪ್ರಾರಂಭ ಆಗೋದಕ್ಕೂ ಮೊದಲು ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸರ್ ಸಿಂಪಡಿಸಲಾಗುತ್ತದೆ.

ನಮ್ಮ ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಎಸ್ ಸಿ ಎಸ್ ಟಿ ಹಾಸ್ಟೆಲ್, ಮೊರಾರ್ಜಿ ಶಾಲೆಗಳನ್ನು ಕ್ವಾರಂಟೈನ್ ಗೆ ಬಳಕೆ ಮಾಡಲಾಗಿದೆ. ಈ ಹಾಸ್ಟೆಲ್ ನಲ್ಲಿ ಯಾರ್ ಯಾರ್ ಉಳಿದಿದ್ದಾರೆ, ಅಂತಹ ವಿದ್ಯಾರ್ಥಿಗಳಿಗೆ ಈ ತಿಂಗಳ 25ನೇ ತಾರೀಕಿನ ಒಳಗಾಗಿ ಪರೀಕ್ಷೆ ಎಲ್ಲಿ ತೆಗೆದುಕೊಳ್ಳಲಿದ್ದೇವೆ ಎನ್ನುವ ಬಗ್ಗೆ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ, ವಿವರ ಕೊಡಬೇಕು ಎಂದು ತಿಳಿಸಲಾಗಿದೆ.

ಚಂದನ ವಾಹಿನಿಯಲ್ಲಿ ಎಪ್ರಿಲ್ 29ರಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ತರಗತಿ ಆರಂಭಿಸಿದ್ದೇವೆ. ಅದಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಬಂದಿದೆ. ಕನ್ನಡ ಮತ್ತು ಇಂಗ್ಲೀಷ್ ಮೀಡಿಯಂ ವರೆಗೂ ಪುನರ್ ಮನನ ಕ್ಲಾಸ್ ಚಂದನ ವಾಹಿನಿಯಲ್ಲಿ ನಡೆಯಲಿದೆ. ಇದಲ್ಲದೇ ಮಾದರಿ ಪ್ರಶ್ನೆ ಪತ್ರಿಕೆ ಉತ್ತರ ಬರೆಯೋದು ಹೇಗೆ ಎನ್ನುವುದನ್ನು ಮೂರು ದಿಗಳ ಕಾಲ ಪ್ರಸಾರ ಮಾಡಲಾಗುತ್ತಿದೆ.

8 ಲಕ್ಷದ 48 ಸಾವಿರದ 196 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬಹಳಷ್ಟು ಚರ್ಚೆ ಮಾಡಿ, ದಿನಾಂಕವನ್ನು ನಿರ್ಧರಿಸಿದ್ದೇವೆ. ಜೂನ್ 25ರಿಂದ 4 ಜುಲೈವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿರುವುದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.

-ವಸಂತ ಬಿ ಈಶ್ವರೆಗೆರೆ


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags