Oneindia

1.1M Followers

RBI ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

22 May 2020.12:04 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ವಿವಿಧ ಘೋಷಣೆ, ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೊರೊನಾದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರು ಮತ್ತು ದೇಶದ ಆರ್ಥಿಕತೆ ಕುರಿತಾಗಿ ಅವರ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾವವಾದ ಪ್ರಮುಖಾಂಶಗಳ ವಿವರ ಹೀಗಿವೆ.

* ರೆಪೋ ದರ (ವಾಣಿಜ್ಯ ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಿಂದ ಪಡೆದ ಸಾಲಕ್ಕೆ ನೀಡುವ ಬಡ್ಡಿ ದರ ನಿರ್ಧಾರ ಆಗುವುದು ರೆಪೋ ದರದ ಮೇಲೆ) 40 ಬೇಸಿಸ್ ಪಾಯಿಂಟ್ ಕಡಿತ ಮಾಡಿದ್ದು, 4.4 ಪರ್ಸೆಂಟ್ ನಿಂದ 4 ಪರ್ಸೆಂಟ್ ಗೆ ಇಳಿಕೆ.

EMI ಪಾವತಿಯಿಂದ ಮತ್ತೆ 3 ತಿಂಗಳು ವಿನಾಯಿತಿ ನೀಡಿದ RBI

* ರಿವರ್ಸ್ ರೆಪೋ ದರ (ವಾಣಿಜ್ಯ ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಪಡೆದ ಮೊತ್ತಕ್ಕೆ ನೀಡುವ ಬಡ್ಡಿ) 3.35 ಪರ್ಸೆಂಟ್ ಗೆ ಇಳಿಕೆ.

* ವಿವಿಧ ಅವಧಿಯ ಸಾಲಗಳ ಮೇಲಿನ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳು, ಆಗಸ್ಟ್ 31ರ ತನಕ ವಿನಾಯಿತಿ.

* ಭಾರತದ ಜಿಡಿಪಿಗೆ ದೊಡ್ಡ ಮಟ್ಟದ ಹೊಡೆತ ಬೀಳಬಹುದು. ಆರ್ಥಿಕ ವರ್ಷ 2021ಕ್ಕೆ ನೆಗೆಟಿವ್ ಬೆಳವಣಿಗೆ ನಿರೀಕ್ಷೆ.

* ಶಿಪ್ ಮೆಂಟ್ ನಂತರದ ಮತ್ತು ಪೂರ್ವದ ಗರಿಷ್ಠ ಸಾಲದ ಅವಧಿ ಹನ್ನೆರಡು ತಿಂಗಳಿಂದ ಹದಿನೈದು ತಿಂಗಳಿಗೆ ಏರಿಕೆ.

* EXIM ಬ್ಯಾಂಕ್ ಗೆ ಆರ್ ಬಿಐನಿಂದ 15 ಸಾವಿರ ಕೋಟಿ ರುಪಾಯಿ.

* ಬ್ಯಾಂಕ್ ಗಳು ಗುಂಪು ಎಕ್ಸ್ ಪೋಷರ್ ಮಿತಿ ಈವರೆಗೆ ಇದ್ದ 25 ಪರ್ಸೆಂಟ್ ನಿಂದ 30 ಪರ್ಸೆಂಟ್ ಗೆ ಏರಿಕೆ.

* ಕಾರ್ಯ ನಿರ್ವಹಣೆ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಆಗಿ ಪಡೆದ ಮೊತ್ತವನ್ನು ಟರ್ಮ್ ಲೋನ್ ಆಗಿ ಬದಲಾಯಿಸಿ, ಮರುಪಾವತಿಗೆ 2021ರ ಮಾರ್ಚ್ ತನಕ ಅವಕಾಶ.

* ಬೇಳೆಕಾಳುಗಳ ಬೆಲೆಯಲ್ಲಿನ ಏರಿಕೆ ಆತಂಕಕ್ಕೆ ಕಾರಣವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೂಡಲೇ ಮಾರಾಟ ಶುರು ಮಾಡುವುದರಿಂದ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಇಳಿಕೆ.

* ಆಮದು- ರಫ್ತು ವ್ಯವಹಾರಕ್ಕೂ ಪೂರಕವಾದ ಘೋಷಣೆಗಳು.

source: goodreturns.in

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags