Inspirational News

802k Followers

ಕೋರಿಕೆ ವರ್ಗಾವಣೆಗಳಿಗೆ ಅರ್ಹ ಶಿಕ್ಷಕರ ಪಟ್ಟಿ ತಯಾರಿಸುವಾಗ ಅನುಸರಿಸಬೇಕಾದ ಕ್ರಮಾನುಗತ ಆದ್ಯತೆ ಶಿಕ್ಷಕರ ವಿವರ

13 Jun 2020.07:29 AM

ದಿನಾಂಕ 27-03-2020ರಂದು ಸರಕಾರದಿಂದ ಪ್ರಕಟಿಸಲಾದ ಶಿಕ್ಷಕರ ವರ್ಗಾವಣೆ ನಿಯಂತ್ರಣ ಅಧಿನಿಯಮ-2020ರ ವಿವರ

ಕೋರಿಕೆ ವರ್ಗಾವಣೆಗಳಿಗೆ ಅರ್ಹ ಶಿಕ್ಷಕರ ಪಟ್ಟಿ ತಯಾರಿಸುವಾಗ ಅನುಸರಿಸಬೇಕಾದ ಕ್ರಮಾನುಗತ ಆದ್ಯತೆ ಶಿಕ್ಷಕರ ವಿವರ :

ಶಿಕ್ಷಕ ಅಥವಾ ಆತನ ಪತ್ನಿ ಅಥವಾ ಆತನ ಮಕ್ಕಳು ತೀವ್ರತರವಾದ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕರು.
(TERMINALLY ILL CASE TEACHERS)
ಶಿಕ್ಷಕ ಅಥವಾ ಆತನ ಪತ್ನಿ ಅಥವಾ ಆತನ ಮಕ್ಕಳು ಅಂಗವೈಕಲ್ಯದಿಂದ ಬಳಲುತ್ತಿರುವ ಶಿಕ್ಷಕರು.
(PH OR DISABILITY TEACHERS)
12 ವರ್ಷದೊಳಗಿನ ಅವಲಂಬಿತ ಮಕ್ಕಳನ್ನು ಹೊಂದಿರುವ ವಿಧುವೆ ಅಥವಾ ವಿಧುರ ಅಥವಾ ವಿಚ್ಛೇದಿತ ಶಿಕ್ಷಕರು.
ಭಾರತೀಯ ರಕ್ಷಣಾದಳಗಳು ಅಥವಾ ಅರೆ ಮಿಲಿಟರಿ ದಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕ ಅಥವಾ ನಿವೃತ್ತಿ ಹೊಂದಿದ ಅಥವಾ ಶಾಶ್ವತವಾಗಿ ಅಣಗವೈಕಲ್ಯರಾದ ಅಥವಾ ಮೃತ ಸೈನಿಕರ ಪತಿ ಅತವಾ ಪತ್ನಿಯಾಗಿರುವ ಶಿಕ್ಷಕರು.


ರಾಜ್ಯ ಅಥವಾ ಕೇಂದ್ರ ಸರಕಾರಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪತಿ ಅಥವಾ ಪತ್ನಿಯಾಗಿರುವ ಶಿಕ್ಷಕರು.
ಮಹಿಳಾ ಶಿಕ್ಷಕರಾಗಿದ್ದಲ್ಲಿ 50 ವರ್ಷಗಳು ಹಾಗೂ ಪುರುಷ ಶಿಕ್ಷಕರಾಗಿದ್ದಲ್ಲಿ 55 ವರ್ಷಗಳನ್ನು ಮೀರಿದ ಶಿಕ್ಷಕರು.
ಗರ್ಭಿಣಿ ಶಿಕ್ಷಕಿ ಅಥವಾ ಒಂದು ವರ್ಷದೊಳಗಿನ ಮಗು ಹೊಂದಿರುವ ಮಹಿಳಾ ಶಿಕ್ಷಕರು.

ವಿಶೇಷ ಸೂಚನೆ :
ಸದರಿ ಮೇಲಿನ ಏಳು ಆದ್ಯತೆಗಳನ್ನು ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರವೇ ಕ್ಲೇಮು ಮಾಡತಕ್ಕದ್ದು.
ಈ ಮೇಲಿನ ಏಳು ಆದ್ಯತಾ ಪ್ರಕಣಗಳಲ್ಲಿ ಕ್ರಮ ಸಂಖ್ಯೆ (1) ರಿಂದ (4)ರವರೆಗೆ ಬರುವ ಆದ್ಯತೆಗಳನ್ನು ಮಾತ್ರ ಕೋರಿಕೆ  ವರ್ಗಾವಣೆಗಳನ್ನು ಲೆಕ್ಕ ಹಾಕುವಾಗ ಅವುಗಳನ್ನು ಹೊರತು ಪಡಿಸಿಯೇ ನಿರ್ದಿಷ್ಟಪಡಿಸಿದ ಶೇಕಡಾ ಮಿತಿಯನ್ನು ಲೆಕ್ಕ ಹಾಕತಕ್ಕದ್ದು.
ಈ ಮೇಲಿನ ಆದ್ಯತಾ ಪ್ರಕರಣ (5)ರನ್ವಯ ವರ್ಗಾವಣೆ ಬಯಸುವ ಶಿಕ್ಷಕರು ತಮ್ಮ ಪತಿ ಅಥವಾ ಪತ್ನಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿಗೇ ವರ್ಗಾವಣೆ ಪಡೆಯಲು ಅನುಮತಿಸುವುದು.
ಈ ಮೇಲಿನ ಆದ್ಯತಾ ಪ್ರಕರಣ (5)ರನ್ವಯ ವರ್ಗಾವಣೆ ಬಯಸುವ ಶಿಕ್ಷಕರಿಬ್ಬರೂ ಒಂದೇ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೇ ಅಂಥಹ ಶಿಕ್ಷಕರು ಸದರಿ ಆದ್ಯತೆಯಡಿಯಲ್ಲಿ ವರ್ಗಾವಣೆಗೆ ಅನರ್ಹರು.

 

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Inspirational News

#Hashtags