Digit

53k Followers

Aadhaar Update: ಇನ್ಮುಂದೆ ಆಧಾರ್ ಇಲ್ಲದಿದ್ದರೆ ಸಬ್ಸಿಡಿ ಹಣ ಸಿಗೋದಿಲ್ಲ! UIDAI ನಿರ್ಧಾರ

17 Aug 2022.10:49 AM

ಆಧಾರ್ (Aadhaar) ಅನ್ನು ರಚಿಸುವ ಸಂಸ್ಥೆಯಾದ ಯುಐಡಿಎಐ (UIDAI) ಆಧಾರ್ (Aadhaar) ಸಬ್ಸಿಡಿ (Subsidies) ನಿಮಗಳಲ್ಲಿ ಬದಲಾವಣೆಗೊಳಿಸಿದೆ. ಸಹಾಯಧನವನ್ನು ಪಡೆಯುವವರು ಆಧಾರ್ ಹೊಂದಿರುವುದು ಕಡ್ಡಾಯಗೊಳಿಸಲಿದೆ. UIDAI ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಸರ್ಕಾರಿ ಸಬ್ಸಿಡಿಗಳು (Subsidies) ಮತ್ತು ಪ್ರಯೋಜನಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವಂತೆ ಸುತ್ತೋಲೆ ಹೊರಡಿಸಿದೆ.

ಅಂತಹ ಪರಿಸ್ಥಿತಿಯಲ್ಲಿ ನೀವು ಆಧಾರ್ (Aadhaar) ಸಂಖ್ಯೆ ಅಥವಾ ನೋಂದಣಿ ಸ್ಲಿಪ್ ಅನ್ನು ಹೊಂದಿಲ್ಲದಿದ್ದರೆ ನೀವು ಸರ್ಕಾರದ ಸಬ್ಸಿಡಿಗಳು (Subsidies) ಮತ್ತು ಪ್ರಯೋಜನಗಳ ಲಾಭವನ್ನು ಪಡೆಯಲು ಅರ್ಹರಾಗಿರುವುದಿಲ್ಲ.


ಶೇಕಡಾ 99% ಜನರು ಆಧಾರ್ (Aadhaar) ಹೊಂದಿದ್ದಾರೆ:

ಆಧಾರ್ (Aadhaar) ಸಂಖ್ಯೆ ಹೊಂದಿಲ್ಲದ ಮತ್ತು ಸರ್ಕಾರ ನೀಡುವ ಸಬ್ಸಿಡಿ (Subsidies) ಮತ್ತು ಸವಲತ್ತುಗಳ ಲಾಭ ಪಡೆಯುತ್ತಿರುವವರಿಗೆ ಆಧಾರ್ ನಿಯಮಗಳನ್ನು ಬಿಗಿಗೊಳಿಸಲು ಈ ಸುತ್ತೋಲೆ ಹೊರಡಿಸಲಾಗಿದೆ. ದೇಶದ 99% ಪ್ರತಿಶತ ವಯಸ್ಕರು ಆಧಾರ್ ಸಂಖ್ಯೆಯನ್ನು ಹೊಂದಿದ್ದಾರೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಯು ವಿಶಿಷ್ಟವಾದ 12-ಅಂಕಿಯ ಆಧಾರ್ (Aadhaar) ಸಂಖ್ಯೆಯನ್ನು ಹೊಂದಿದ್ದು ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳ ಯಶಸ್ವಿ ಪರಿಶೀಲನೆಯ ಮೇಲೆ ನಿವಾಸಿಗಳಿಗೆ ಹಂಚಲಾಗುತ್ತದೆ. ಇದನ್ನು ಆನ್ಲೈನ್ ಮತ್ತು ಆಫ್ಲೈನ್ ಪರಿಶೀಲನೆಗಾಗಿ ಬಳಸಬಹುದು ಮತ್ತು ಪರಿಶೀಲನೆಯ ವಿಷಯದಲ್ಲಿ ಏಕರೂಪತೆಯನ್ನು ಒದಗಿಸುತ್ತದೆ.


ಆಧಾರ್ (Aadhaar) ಇಲ್ಲದವರಿಗೆ ಈ ನಿಯಮ ಇರಲಿದೆ:

ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಅಡಿಯಲ್ಲಿ ನಾಗರಿಕರಿಗೆ ಸಹಾಯಧನವನ್ನು ಒದಗಿಸುತ್ತದೆ. UIDAI ಹೊರಡಿಸಿದ ಸುತ್ತೋಲೆಯ ಪ್ರಕಾರ ಆಧಾರ್ ಕಾಯಿದೆಯ ಸೆಕ್ಷನ್ 7 ರಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆ ಇದೆ. ಇದು ಆಧಾರ್ ಸಂಖ್ಯೆಯನ್ನು ಹೊಂದಿರದ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನು ನೀಡದ ಹೊರತು ಆಧಾರ್ ನೋಂದಣಿ ಗುರುತಿನ (ಇಐಡಿ) ಹಂಚಿಕೆ ಮಾಡಲು ಅನುಕೂಲವಾಗಿಸುತ್ತದೆ. ಇದರ ಸಂಖ್ಯೆ/ಸ್ಲಿಪ್ನೊಂದಿಗೆ ಸರ್ಕಾರಿ ಪ್ರಯೋಜನಗಳು, ಸಬ್ಸಿಡಿಗಳು (Subsidies) ಮತ್ತು ಸೇವೆಗಳನ್ನು ಪಡೆಯಬಹುದು.


ಆಧಾರ್ನಿಂದಾಗಿ ಸರ್ಕಾರದ ಪ್ರಯೋಜನ ಸುಲಭ:

ಇದರರ್ಥ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳು, ಪ್ರಯೋಜನಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಆಧಾರ್ (Aadhaar) ನೋಂದಣಿ ಗುರುತಿನ (EID) ಸಂಖ್ಯೆ ಅಥವಾ ಸ್ಲಿಪ್ ಅಗತ್ಯವಿರುತ್ತದೆ. ಆಧಾರ್ನಿಂದಾಗಿ ಕಲ್ಯಾಣ ಸೇವೆಗಳನ್ನು ಪಡೆಯುವಲ್ಲಿ ಜನರ ಅನುಭವ ಸುಧಾರಿಸಿದೆ. ಆಧಾರ್ನಿಂದಾಗಿ ಸರ್ಕಾರಿ ಯೋಜನೆಗಳಲ್ಲಿ ರಿಗ್ಗಿಂಗ್ ಅಥವಾ ಪ್ರಯೋಜನಗಳನ್ನು ಪಡೆಯದ ಸಮಸ್ಯೆ ಕೊನೆಗೊಂಡಿದೆ. ಮಧ್ಯವರ್ತಿಗಳ ಪಾತ್ರವನ್ನು ಕಡಿಮೆ ಮಾಡಲು ಮತ್ತು ಕೆಳಮಟ್ಟದ ಆರ್ಥಿಕ ಸ್ತರಕ್ಕೆ ಸೇರಿದ ಜನರು ಸಬ್ಸಿಡಿಗಳು (Subsidies) ಮತ್ತು ಇತರ ಪ್ರಯೋಜನಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ನೇರ ಪ್ರಯೋಜನಗಳ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ತಂದಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Digit kannada

#Hashtags