News18 ಕನ್ನಡ

400k Followers

UPSC Recruitment: ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ ಯುಪಿಎಸ್​ಸಿ; ಇಲ್ಲಿದೆ ಮಾಹಿತಿ

29 Aug 2022.2:04 PM

ಕೇಂದ್ರ ಲೋಕ ಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕೇಂದ್ರ ಗುಪ್ತಚರ ಅಧಿಕಾರಿ, ವಿಜ್ಞಾನಿ ಹುದ್ದೆಗಳು ಸೇರಿದಂತೆ ಒಟ್ಟು 19 ಹುದ್ದೆಗಳ ಭರ್ತಿಗೆ ಅರ್ಜಿ ಹೊರಡಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರಿಗೆ ತಯಾರಿ ನಡೆಸುತ್ತಿರುವ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 15 ಆಗಿದೆ.

ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಸಂಸ್ಥೆಯ ಹೆಸರು: ಕೇಂದ್ರ ಲೋಕ ಸೇವಾ ಆಯೋಗ
ಹುದ್ದೆಯ ಹೆಸರು: ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ, ವಿಜ್ಞಾನಿ
ಹುದ್ದೆಗಳ ಸಂಖ್ಯೆ: 19
ಉದ್ಯೋಗ ಸ್ಥಳ: ನವದೆಹಲಿ - ಕೋಲ್ಕತ್ತಾ - ಹೈದರಾಬಾದ್ - ಅಖಿಲ ಭಾರತ
ವೇತನ: ಯುಪಿಎಸ್​ಸಿ ನಿಯಮಗಳ ಪ್ರಕಾರ

ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿ
ಮಾನವಶಾಸ್ತ್ರಜ್ಞ1ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗರಿಷ್ಟ 38 ವರ್ಷ
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ4ಎಂಎಸ್ಸಿಗರಿಷ್ಟ 30 ವರ್ಷ
ವಿಜ್ಞಾನಿ ಬಿ (ಬ್ಯಾಲಿಸ್ಟಿಕ್ಸ್)1ಭೌತಶಾಸ್ತ್ರ / ಗಣಿತ / ಅನ್ವಯಿಕ ಗಣಿತ / ನ್ಯಾಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗರಿಷ್ಟ 35 ವರ್ಷ
ವಿಜ್ಞಾನಿ ಬಿ (ಫೊರೆನ್ಸಿಕ್ ಎಲೆಕ್ಟ್ರಾನಿಕ್ಸ್)3ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ಫೋರೆನ್ಸಿಕ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಗರಿಷ್ಟ 35 ವರ್ಷ
ವಿಜ್ಞಾನಿ ಬಿ (ಫೊರೆನ್ಸಿಕ್ ಸೈಕಾಲಜಿ)3ಸೈಕಾಲಜಿ/ಕ್ರಿಮಿನಾಲಜಿ, ಫೊರೆನ್ಸಿಕ್ ಸೈನ್ಸ್/ಸೈಕಾಲಜಿ/ಕ್ರಿಮಿನಾಲಜಿಯಲ್ಲಿ ಸ್ನಾತಕೋತ್ತರ ಪದವಿಗರಿಷ್ಟ 35 ವರ್ಷ
ಪುನರ್ವಸತಿ ಅಧಿಕಾರಿ4ಸಮಾಜಕಾರ್ಯ/ಸಮಾಜಶಾಸ್ತ್ರ/ಶಿಕ್ಷಣ/ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗರಿಷ್ಟ 30 ವರ್ಷ
ಉಪ ಮಹಾನಿರ್ದೇಶಕರು/ಪ್ರಾದೇಶಿಕ ನಿರ್ದೇಶಕರು3ವಿದೇಶಿ ಭಾಷಾ ಕೋರ್ಸ್‌ನೊಂದಿಗೆ ಡಿಪ್ಲೊಮಾ, ಪದವಿಗರಿಷ್ಟ 50 ವರ್ಷ


ವಯೋಮಿತಿ ಸಡಿಲಿಕೆ:
ಪ.ಜಾ, ಪ.ಪಂ ಅಭ್ಯರ್ಥಿಗಳು: 5 ವರ್ಷಗಳು
ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

ಇದನ್ನು : ಎಸ್​ಎಸ್​ಎಲ್​ಸಿ ಆದವರಿಗೆ ಭರ್ಜರಿ ಅವಕಾಶ; ಬೆಳಗಾವಿ ಜಿಲ್ಲಾ ಪಂಚಾಯತ್​ನಲ್ಲಿದೆ ಕೆಲಸ

ಅರ್ಜಿ ಶುಲ್ಕ:
ಪ.ಜಾ, ಪ.ಪಂ, ವಿಕಲಚೇತನ, ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 25 ರೂ

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27 ಆಗಸ್ಟ್​​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್​​ 2022
ಸಂಪೂರ್ಣವಾಗಿ ಸಲ್ಲಿಸಿದ ಆನ್‌ಲೈನ್ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: 16 ಸೆಪ್ಟೆಂಬರ್ 2022

ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: upsc.gov.in

ಇದನ್ನು : ಕೆನರಾ ಬ್ಯಾಂಕ್​ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲಿ ಕೆಲಸ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

-ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ

- ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.

-ನಿಮ್ಮ ವರ್ಗಕ್ಕೆ ಅನುಸಾರವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಡೇಟ್​ ಮಾಡಿ

-ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags