Kannada News Now

1.8M Followers

Job Alert: 'ಉಪನ್ಯಾಸಕರ ಹುದ್ದೆ' ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿಸುದ್ದಿ: ರಾಜ್ಯ ಸರ್ಕಾರದಿಂದ 778 ಹುದ್ದೆ ಭರ್ತಿಗೆ ಗ್ರೀನ್ ಸಿಗ್ನಲ್

24 Aug 2022.7:26 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಪದವಿಪೂರ್ವ ಕಾಲೇಜುಗಳಲ್ಲಿ ( Pre-University College ) ಖಾಲಿ ಇರುವಂತ ವಿವಿಧ ವಿಷಯಗಳ 778 ಹುದ್ದೆಗಳ ಭರ್ತಿಗೆ ಅನುಮತಿ ನೀಡಿದೆ. ಈ ಮೂಲಕ ಉಪನ್ಯಾಸಕರ ಹುದ್ದೆಯ ( Lecturer Recruitment ) ನಿರೀಕ್ಷೆಯಲ್ಲಿದ್ದಂತವರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.

BIG NEWS: ರಾಜ್ಯ ಸರ್ಕಾರದಿಂದ 21 ಟ್ರಸ್ಟ್, ಪ್ರತಿಷ್ಠಾನಗಳಿಗೆ ನೂತನ ಅಧ್ಯಕ್ಷ, ಸದಸ್ಯರ ನೇಮಿಸಿ ಆದೇಶ

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ( PU College ) ಖಾಲಿ ಇರುವ ವಿವಿಧ ವಿಷಯಗಳ ಉಪನ್ಯಾಸಕರ ( Lecturer Jobs ) ಖಾಲಿ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.

BIG BREAKING NEWS: ನಾಳೆ ಸುಪ್ರೀಂ ಕೋರ್ಟ್ ನಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ತೀರ್ಪಿನ ವಿರುದ್ಧದ ಅರ್ಜಿಯ ವಿಚಾರಣೆ | Money Laundering Act Verdict

ಅಂದಹಾಗೇ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವಂತ ಒಟ್ಟು 778 ವಿವಿಧ 10 ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಲಾಗಿದೆ.

ಹೀಗಿದೆ ವಿಷಯವಾರು ಉಪನ್ಯಾಸಕರ ಖಾಲಿ ಹುದ್ದೆ ವಿವರ

  1. ಕನ್ನಡ - 100 ಹುದ್ದೆ
  2. ಇಂಗ್ಲೀಷ್ - 120
  3. ಇತಿಹಾಸ - 120
  4. ಅರ್ಥಶಾಸ್ತ್ರ - 180
  5. ಭೂಗೋಳಶಾಸ್ತ್ರ - 20
  6. ವಾಣಿಜ್ಯ ಶಾಸ್ತ್ರ - 80
  7. ಸಮಾಜಶಾಸ್ತ್ರ -75
  8. ರಾಜ್ಯಶಾಸ್ತ್ರ - 75
  9. ಮನಶಾಸ್ತ್ರ -02
  10. ಗಣಕ ವಿಜ್ಞಾನ - 06

ಹೀಗೆ ಒಟ್ಟು 778 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳೋದಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಉಪನ್ಯಾಸಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿಯನ್ನು ನೀಡಿದೆ.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags