Zee News ಕನ್ನಡ

353k Followers

ನಿಮ್ಮ ಹೆಸರಿನಲ್ಲಿ ಮನೆ ಇದ್ದರೆ ವೃದ್ಧಾಪ್ಯದಲ್ಲಿ ಪಿಂಚಣಿ ಸಿಗುತ್ತದೆ! ಕೇವಲ ಈ ಕೆಲಸ ಮಾಡಬೇಕು

24 Aug 2022.3:54 PM

ವದೆಹಲಿ: ನಿವೃತ್ತಿಯ ನಂತರ ಸಂಬಳ ನಿಲ್ಲುತ್ತದೆ ಮತ್ತು ಖಾಸಗಿ ಉದ್ಯೋಗ ಮಾಡುವವರಿಗೆ ಪಿಂಚಣಿ ಕೂಡ ಸಿಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಉದ್ಯೋಗದಲ್ಲೂ ಗುತ್ತಿಗೆ ಪ್ರವೃತ್ತಿ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿವೃತ್ತಿಯ ನಂತರ ಜನರು ಹೇಗೆ ಬದುಕಬೇಕೆಂದು ಯೋಚಿಸುತ್ತಾರೆ.

ಪ್ರಸ್ತುತ ಮನೆಯ ಖರ್ಚುಗಳನ್ನು ಹೇಗೆ ನಿರ್ವಹಿಸುವುದು ಅನ್ನೋದು ದೊಡ್ಡ ತಲೆನೋವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಬ್ಯಾಂಕ್‌ಗಳು ಹೊಸ ಯೋಜನೆಯೊಂದಿಗೆ ಬಂದಿವೆ. ಇದರಡಿ ನೀವು ಉತ್ತಮ ಪಿಂಚಣಿ ಪಡೆಯಬಹುದು. ಈ ಯೋಜನೆಯ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ.

ಈ ರೀತಿ ಪಿಂಚಣಿ ಪಡೆಯಬಹುದು

ಈ ಯೋಜನೆಯ ಹೆಸರು 'ರಿಸರ್ವ್ ಅಡಮಾನ ಸಾಲ ಯೋಜನೆ'(Reserve Mortgage Loan Scheme). ಈ ಯೋಜನೆಯಲ್ಲಿ ಮನೆಯನ್ನು ಬ್ಯಾಂಕ್‌ನಲ್ಲಿ ಅಡಮಾನ ಇಡಬೇಕು. ಇಲ್ಲಿ ಬ್ಯಾಂಕ್ ನಿಮ್ಮ ಮನೆಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದರ್ಥವಲ್ಲ. ಮನೆ ನಿಮ್ಮ ಬಳಿಯೇ ಇರುತ್ತದೆ. ಇದರ ನಂತರ ವೃದ್ಧ ದಂಪತಿಗೆ ಸಹಕಾರಿಯಾಗಲು ಬ್ಯಾಂಕ್ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ನೀಡುವುದನ್ನು ಮುಂದುವರಿಸುತ್ತದೆ. ಈ ಯೋಜನೆಯು ಗೃಹ ಸಾಲಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವ ರೀತಿಯಲ್ಲಿ ನೀವು ಅದನ್ನು ಅರ್ಥಮಾಡಿಕೊಳ್ಳಬಹುದು. ಗೃಹ ಸಾಲದಲ್ಲಿ ನೀವು ಪ್ರತಿ ತಿಂಗಳು ಹಣವನ್ನು ಠೇವಣಿ ಮಾಡಬೇಕಾಗುತ್ತದೆ. ಆದರೆ ಈ ಯೋಜನೆಯಲ್ಲಿ ಬ್ಯಾಂಕ್ ನಿಮಗೆ ಪ್ರತಿ ತಿಂಗಳು ಹಣ ಪಾವತಿಸುತ್ತದೆ.

ಇದರ ಲಾಭ ಪಡೆಯುವುದು ಹೇಗೆ?

ಈ ಸಾಲವು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಲಭ್ಯವಿದೆ. ಈ ಸಾಲವು 15 ವರ್ಷಗಳವರೆಗೆ ಲಭ್ಯವಿದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ಎಷ್ಟು ಮೊತ್ತ ಬರುತ್ತದೆ ಅನ್ನೋದು ಅಡಮಾನದ ಮನೆಯ ಮೌಲ್ಯವನ್ನು ಅವಲಂಬಿಸಿರುತ್ತದೆ. ನೀವು ಇದನ್ನು ಈ ರೀತಿ ಸಹ ಅರ್ಥಮಾಡಿಕೊಳ್ಳಬಹುದು. ಮನೆಯ ಮೌಲ್ಯ 25 ಲಕ್ಷ ರೂ. ಆಗಿದ್ದರೆ, ಈ ಪರಿಸ್ಥಿತಿಯಲ್ಲಿ ಬ್ಯಾಂಕ್ 15 ವರ್ಷಗಳವರೆಗೆ ಪ್ರತಿ ತಿಂಗಳು ಸುಮಾರು 5000 ರೂ. ನೀಡುತ್ತದೆ. ನಿಮಗೆ ಒಂದು ದೊಡ್ಡ ಮೊತ್ತದ ಅಗತ್ಯವಿದ್ದರೆ ಅದನ್ನು ವೈದ್ಯಕೀಯ ಚಿಕಿತ್ಸೆಗಾಗಿ ತೆಗೆದುಕೊಳ್ಳಬಹುದು. ವಿಶೇಷವೆಂದರೆ ಈ ಯೋಜನೆಯಲ್ಲಿ ಸಾಲ ಪಡೆಯಲು ಯಾವುದೇ ಕನಿಷ್ಠ ಆದಾಯದ ಪುರಾವೆ ಅಗತ್ಯವಿಲ್ಲ.

ಸಾಲ ಮರುಪಾವತಿ ಹೇಗೆ..?

ದಂಪತಿ ಮರಣಹೊಂದಿದಾಗ ಬ್ಯಾಂಕ್ ಅವರ ಮಕ್ಕಳು ಅಥವಾ ಕಾನೂನು ಉತ್ತರಾಧಿಕಾರಿಗಳಿಗೆ ಈ ಸಾಲ ಮರುಪಾವತಿಸುವ ಆಯ್ಕೆ ನೀಡುತ್ತದೆ. ಅವರು ಪಡೆದ ಸಾಲವನ್ನು ವಾಪಸ್ ಠೇವಣಿ ಮಾಡಿದರೆ, ನಂತರ ಅಡಮಾನದ ಆಸ್ತಿಯನ್ನು ಅವರಿಗೆ ಹಿಂತಿರುಗಿಸಲಾಗುತ್ತದೆ. ಆದರೆ ಕಾನೂನು ವಾರಸುದಾರರು ಹಣ ಠೇವಣಿ ಮಾಡದಿದ್ದರೆ, ಬ್ಯಾಂಕ್ ಈ ಮನೆಯನ್ನು ಹರಾಜು ಮಾಡುತ್ತದೆ. ವೃದ್ಧರಿಗೆ ನೀಡಿದ ಮೊತ್ತವನ್ನು ಕಡಿತಗೊಳಿಸಿದ ನಂತರ ಉಳಿದ ಮೊತ್ತವನ್ನು ವಾರಸುದಾರರಿಗೆ ನೀಡಲಾಗುತ್ತದೆ.

Airtel - BSNL ಬೆವರಿಳಿಸಿದ Jio ಆಫರ್‌! ಅತಿ ಕಡಿಮೆ ವೆಚ್ಚದಲ್ಲಿ ಸೂಪರ್ಫಾಸ್ಟ್ ಇಂಟರ್ನೆಟ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags