ವಿಜಯವಾಣಿ

505k Followers

ಸಹೋದರಿಯರಿಗೆ ತಂದೆಯ ಆಸ್ತಿಯನ್ನು ದಾನಪತ್ರದ ಮೂಲಕ ಕೊಡಬಹುದೆ? ಕಾನೂನು ಹೀಗೆ ಹೇಳಿದೆ ನೋಡಿ.

27 Aug 2022.1:42 PM

 ನಮ್ಮ ತಾತನಿಗೆ ಸೇರಿರುವ 12 ಎಕರೆ ಜಮೀನು ಇದೆ.

ತಾತ ನಿಧನರಾಗಿ ಹಲವು ವರ್ಷವಾಗಿದೆ. ಅವರಿಗೆ ನಮ್ಮ ಅಪ್ಪ ಒಬ್ಬನೇ ಮಗ ಆಗಿರುವ ಹಿನ್ನೆಲೆಯಲ್ಲಿ ಅವರ ಹೆಸರಿಗೆ ಖಾತೆ ಆಗಿದೆ. ನಮ್ಮ ಮನೆಯಲ್ಲಿ ನಾನು ಒಬ್ಬನೇ ಗಂಡು ಮಗ. ನನಗೆ 3 ಮಂದಿ ತಂಗಿಯರು ಇದ್ದಾರೆ.

ನಮ್ಮ ತಂದೆ ತಾಯಿ ಇಬ್ಬರೂ ತೀರಿಕೊಂಡ ಮೇಲೆ ನನ್ನ ಹೆಸರಿಗೆ ಖಾತೆ ಆಗಿದೆ. ಬರ ಪರಿಹಾರದ ಹಣವೂ ನನ್ನ ಹೆಸರಿಗೇ ಬಂದಿದೆ. ಈಗ ನನ್ನ ಮುಂದಿರುವ ಪ್ರಶ್ನೆ ಎಂದರೆ ಸಹೋದರಿಯರಿಗೂ ಆಸ್ತಿಯಲ್ಲಿ ಪಾಲು ಇದೆಯೇ? ದಾನ ಪತ್ರದ ಮೂಲಕ ಕೊಡಬಹುದೇ? ಅವರಿಗೆ ಮೋಸ ಮಾಡುವ ಉದ್ದೇಶ ನನಗೆ ಇಲ್ಲ. ಅವರಿಗೆ ತಲಾ ಒಂದು ಎಕರೆ ಕೊಡಬೇಕೆಂದಿದ್ದೇನೆ. ಅವರಿಗೆ ಎಷ್ಟು ಆಸ್ತಿ ಬರುತ್ತದೆ? ದಯವಿಟ್ಟು ತಿಳಿಸಿ.

ಉತ್ತರ: ನಿಮ್ಮ ತಾತನ ಆಸ್ತಿ ಅವರು ತೀರಿಕೊಂಡಾಗ ನಿಮ್ಮ ತಂದೆಗೆ ಬಂದಾಗ ಅದು ನಿಮ್ಮ ತಂದೆಯ ಪ್ರತ್ಯೇಕ ಆಸ್ತಿ (ಸಪರೇಟ್ ಪ್ರಾಪರ್ಟಿ ) ಆಗಿರುತ್ತದೆ. ಈ ಪ್ರತ್ಯೇಕ ಆಸ್ತಿಗೆ ಸ್ವಯಾರ್ಜಿತ ಆಸ್ತಿಯ ಎಲ್ಲ ಲಕ್ಷಣಗಳೂ ಇರುತ್ತವೆ. ಹೀಗಾಗಿ ನಿಮ್ಮ ತಂದೆ ತೀರಿಕೊಂಡ ಮೇಲೆ ಆ ಆಸ್ತಿ ನಿಮ್ಮ ಮತ್ತು ನಿಮ್ಮ ಸೋದರಿಯರ ಮಧ್ಯೆ ಸಮಭಾಗ ಆಗಬೇಕು.

ಅಂದರೆ ತಲಾ ನಾಲ್ಕನೇ ಒಂದು ಭಾಗ ನಿಮ್ಮ ತಂದೆಯ ಎಲ್ಲ ಮಕ್ಕಳಿಗೂ ಸಿಗುತ್ತದೆ. ನಿಮ್ಮ ತಂಗಿಯರಿಗೆ 12 ಎಕರೆಯಲ್ಲಿ ತಲಾ ಮೂರು ಎಕರೆ ಬರುತ್ತದೆ. ಅವರ ಜತೆ ನೀವು ಕೂತು ಮಾತಾಡಿ. ಅವರು ಒಪ್ಪಿಕೊಂಡರೆ ಅವರು ಒಂದು ಎಕರೆಯನ್ನೇ ಪಡೆದು ನಿಮಗೆ ಐದು ಎಕರೆ ಬಿಡಬಹುದು.

ಈ ಆಸ್ತಿಯ ವಿಷಯವಾಗಿ ದಾನ ಪತ್ರ ಮಾಡಲು ಅವಕಾಶವಿಲ್ಲ. ಏಕೆಂದರೆ ಈ ಆಸ್ತಿ ನಿಮ್ಮ ಒಬ್ಬರದಲ್ಲ. ನಿಮ್ಮ ತಂಗಿಯರಿಗೆ ಆಸ್ತಿಯಲ್ಲಿ ಅವರದೇ ಹಕ್ಕು ಇರುತ್ತದೆ. ಅವರ ಆಸ್ತಿಯನ್ನು ಅವರಿಗೇ ದಾನ ಮಾಡುವ ಹಕ್ಕು ನಿಮಗೆ ಇರುವುದಿಲ್ಲ. ನೀವೆಲ್ಲರೂ ಒಪ್ಪಿದರೆ ನೋಂದಾಯಿತ ವಿಭಾಗ ಪತ್ರ ಮಾಡಿಕೊಳ್ಳಬಹುದು. ಆಸ್ತಿಯಲ್ಲಿ ಸಮಭಾಗದ ಹಕ್ಕು ಇದ್ದರೂ, ಸಮಭಾಗವನ್ನೇ ಪಡೆಯಬೇಕೆಂದಿಲ್ಲ. ಸ್ವ ಇಚ್ಛೆಯಿಂದ ನಿಮ್ಮ ಸಹೋದರಿಯರು ಕಡಿಮೆ ಭಾಗವನ್ನೂ ಪಡೆಯಬಹುದು.

ವಿಚ್ಛೇದನದ ಪ್ರಕರಣ ಬಾಕಿ ಇರುವಾಗಲೇ ಗಂಡ ತೀರಿಕೊಂಡರು- ಅವರ ಆಸ್ತಿ ನನಗೆ ಸಿಗುವುದಿಲ್ಲವೆ?

ನಮ್ಮ ತಾತನಿಗೆ ಸೇರಿರುವ 12 ಎಕರೆ ಜಮೀನು ಇದೆ. ತಾತ ನಿಧನರಾಗಿ ಹಲವು ವರ್ಷವಾಗಿದೆ. ಅವರಿಗೆ ನಮ್ಮ ಅಪ್ಪ ಒಬ್ಬನೇ ಮಗ ಆಗಿರುವ ಹಿನ್ನೆಲೆಯಲ್ಲಿ ಅವರ ಹೆಸರಿಗೆ ಖಾತೆ ಆಗಿದೆ. ನಮ್ಮ ಮನೆಯಲ್ಲಿ ನಾನು ಒಬ್ಬನೇ ಗಂಡು ಮಗ. ನನಗೆ 3 ಮಂದಿ ತಂಗಿಯರು ಇದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags