ಕನ್ನಡದುನಿಯಾ

1.6M Followers

ಹಬ್ಬದ ಹೊತ್ತಲ್ಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ವೇತನ ಹೆಚ್ಚಳ ಪರಿಷ್ಕರಣೆಗೆ ಸಮಿತಿ

28 Sep 2022.06:34 AM

ಬೆಂಗಳೂರು: ನವರಾತ್ರಿ ದಸರಾ ಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಸಂಬಂಧಪಟ್ಟ ಸಮಿತಿ ರಚಿಸಲು ಸಿದ್ಧತೆ ಮಾಡಿಕೊಂಡಿದೆ. ದಸರಾ ನಂತರ ಸಮಿತಿ ರಚಿಸಲಿದ್ದು, ಡಿಸೆಂಬರ್ ಅಂತ್ಯಕ್ಕೆ ವರದಿ ಮಂಡನೆಯಾಗಲಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ವೇತನ ಜಾರಿಯಾಗುವ ಸಾಧ್ಯತೆಯಿದ್ದು, ಮೂಲ ವೇತನದಲ್ಲಿ ಡಿಎ ಶೇ. 25 ರಿಂದ 30ರಷ್ಟು ವಿಲೀನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದರಿಂದ ಸುಮಾರು 6 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರಗಳ ಸಿಬ್ಬಂದಿ ಹಾಗೂ 4.50 ಲಕ್ಷ ಪಿಂಚಣಿದಾರಾರಿಗೆ ಅನುಕೂಲವಾಗಲಿದೆ. 17000 ಮೂಲವೇತನ ಡಿಎ ವಿಲೀನವಾದಾಗ 21 ಸಾವಿರ ರೂ.ಗೆ ಏರಿಕೆಯಾಗಲಿದೆ.

ರಾಜ್ಯದಲ್ಲಿ ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರಿಗೆ ವೇತನ ನೀಡುತ್ತಿದ್ದು, 7ನೇ ವೇತನ ಆಯೋಗ ರಚನೆಗೆ ಮತ್ತು ಕೇಂದ್ರ ಸರ್ಕಾರ ನೌಕರರಿಗೆ ಸಮನಾದ ವೇತನ, ಭತ್ಯೆ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳ ಸಮಿತಿ ರಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags