Kannada News Now

1.8M Followers

BIGG BREAKING NEWS: 100 ರೂ ದೇಣಿಗೆ ಸಂಗ್ರಹ ಆದೇಶ ಹಿಂಪಡೆದ 'ಶಿಕ್ಷಣ ಇಲಾಖೆ'

22 Oct 2022.6:02 PM

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಎಸ್ ಡಿ ಎಂ ಸಿಗೆ ( SDMC ) ಶಾಲೆಗಳ ( School ) ಶ್ರೇಯೋಭಿವೃದ್ಧಿಗಾಗಿ 100 ರೂ ದೇಣಿಗೆ ಸಂಗ್ರಹಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಿದ್ದರು. ಈ ಆದೇಶ ವಿವಾದಕ್ಕೆ ಕಾರಣವಾಗಿತ್ತು.

ಅಲ್ಲದೇ ರಾಜ್ಯ ಸರ್ಕಾರದ ದಿವಾಳಿ ತನವನ್ನು ಎತ್ತಿ ತೋರಿಸುತ್ತಿದೆ ಎಂಬುದಾಗಿ ವಿಪಕ್ಷಗಳ ನಾಯಕರು ಗುಡುಗಿದ್ದರು. ಈ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ 100 ರೂ ದೇಣಿಗೆ ಸಂಗ್ರಹದ ಸುತ್ತೇಲೆಯನ್ನು ಹಿಂಪಡೆಯಲಾಗಿದೆ.

ಈ ಕುರಿತಂತೆ ಆದೇಶ ಹೊರಡಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರು, ಶಿಕ್ಷಣ ಸಚಿವರ ಸೂಚನೆಯ ಮೇರೆಗೆ, 100 ರೂ ದೇಣಿಗೆ ಸಂಗ್ರಹದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

BREAKING NEWS : ಮಂಡ್ಯದ ಕೆಆರ್‌ಎಸ್‌ ಬೃಂದಾವನ ಪಾರ್ಕ್‌ನಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಿಗೆ ನಿರ್ಬಂಧ

'ಶಿಕ್ಷಣ ಇಲಾಖೆ' ಸುತ್ತೋಲೆಗೂ, 'ಸಿಎಂ, ಶಿಕ್ಷಣ ಸಚಿವ'ರಿಗೂ ಸಂಬಂಧವಿಲ್ಲ: '100 ರೂ ದೇಣಿಗೆ ಸಂಗ್ರಹ ಆದೇಶ'ಕ್ಕೆ 'ಬಿ.ಸಿ ನಾಗೇಶ್' ಸ್ಪಷ್ಟನೆ

ಮೈಸೂರು: ರಾಜ್ಯ ಸರ್ಕಾರದ ( Karnataka Government ) ಬಗ್ಗೆ ಪದೇ ಪದೇ ದೂರುವುದು ಸರಿಯಲ್ಲ. ಕೆಲವೊಂದು ಸುತ್ತೋಲೆಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. 100 ರೂ ಸಂಗ್ರಹ ಸಂಬಂಧ ಹೊರಡಿಸಿರುವಂತ ಸುತ್ತೋಲೆ ಶಿಕ್ಷಣ ಇಲಾಖೆಯಿಂದ ( Education Department ) ಹೊರಡಿಸಿರೋದಾಗಿದೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಸ್ಪಷ್ಟ ಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಲಾ ಶ್ರೇಯೋಭಿವೃದ್ಧಿಗಾಗಿ 100 ರೂ ಸಂಗ್ರಹಿಸೋದಕ್ಕೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಸುತ್ತೋಲೆಗೂ, ಶಿಕ್ಷಣ ಸಚಿವರು, ಸಿಎಂಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಚಿತ್ರದುರ್ಗ ಮೂಲಕ ತುಮಕೂರು - ದಾವಣಗೆರೆ 'ರೈಲ್ವೆ ಸಂಪರ್ಕ ಯೋಜನೆ' ಪ್ರಾರಂಭಿಸಲು ಕ್ರಮ - ಸಿಎಂ ಬೊಮ್ಮಾಯಿ

ಈ ಬಗ್ಗೆ ಕೆಲವರು ಸರಿಯಾಗಿ ಓದಿಕೊಳ್ಳದೇ ಪ್ರತಿಕ್ರಿಯೆ ನೀಡಿದ್ದಾರೆ. ಎಸ್ ಡಿ ಎಂಸಿಗಳ ಸಲಹೆ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲಾ ಸುತ್ತೋಲೆಗಳನ್ನು ಸರ್ಕಾರದ ಗಮನಕ್ಕೆ ತಂದು ಹೊರಡಿಸಬೇಕಿಲ್ಲ. ಹಣ ಸಂಗ್ರಹಿಸಲು ಆರ್ ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಆರ್ ಟಿಇ ಒಳ್ಳೆಯ ಕಾಯ್ದೆಯಾಗಿದೆ. ಅದನ್ನು ಜಾರಿಗೆ ತಂದಿದ್ದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆಗಿದೆ. ಪೋಷಕರು ಕಡ್ಡಾಯವಾಗಿ ಶಾಲಾ ಶ್ರೇಯೋಭಿವೃದ್ಧಿಗೆ ಹಣ ಕೊಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಅವರಾಗಿಯೇ ತಿಂಗಳಿಗೆ ರೂ.100 ಕೊಟ್ಟರೇ ರಸೀದಿ ಕೊಡಬೇಕು. ಇದರಲ್ಲೂ ಸಿದ್ಧರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಾಗ್ಧಾಳಿ ನಡೆಸಿದರು.

ಗಂಗಾವತಿಯಲ್ಲಿ ಮೆರವಣಿಗೆ ವೇಳೆ ರಾಷ್ಟ್ರಧ್ವಜಕ್ಕೆ ಅಪಮಾನ: ಮೂವರ ವಿರುದ್ಧ FIR ದಾಖಲು

ಶಿಕ್ಷಣ ಇಲಾಖೆಯಿಂದ ಶಾಲಾ ಶ್ರೇಯೋಭಿವೃದ್ಧಿಗೆ ಎಸ್ ಡಿಎಂಸಿಯಿಂದ 100 ರೂ ಸಂಗ್ರಹಿಸಲು ಹೊರಡಿಸಲಾಗಿರುವಂತ ಕ್ರಮದಲ್ಲಿ, ಹಣ ದುರುಪಯೋಗ ಆದರೇ ಸುತ್ತೋಲೆಯನ್ನ ಹಿಂಪಡೆಯಲಾಗುತ್ತದೆ ಎಂಬುದಾಗಿ ತಿಳಿಸಿದರು.

ಈ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆಯಿಂದ ಶಾಲೆಗಳ ಶ್ರೇಯೋಭಿವೃದ್ಧಿಗಾಗಿ 100 ರೂ ದೇಣಿಗೆ ಸಂಗ್ರಹಿಸೋದಕ್ಕಾಗಿ ಎಸ್ ಡಿಎಂಸಿಗಳಿಗೆ ಅನುಮತಿಸಿ ಹೊರಡಿಸಿದ್ದಂತ ಆದೇಶವನ್ನು ವಾಪಾಸ್ ಪಡೆದಿದೆ. ಈ ಮೂಲಕ ಪೋಷಕರು, ಸಾರ್ವಜನಿಕರ ಒತ್ತಡಕ್ಕೆ ಮಣಿದು, ದೇಣಿಗೆ ಸಂಗ್ರಹ ಸುತ್ತೇಲೆಯನ್ನು ಹಿಂಪಡೆದಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags