Oneindia

1.1M Followers

ದೀಪಾವಳಿ ಕೊಡುಗೆ: ಸರ್ಕಾರಿ ನೌಕರರಿಗೆ ಶೇ 4ರಷ್ಟು DR ಪ್ರಕಟ

13 Oct 2022.06:30 AM

ಸರಾ ಹಬ್ಬದ ಸಂಭ್ರಮಕ್ಕೆ ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ನಿರೀಕ್ಷಿತ ಕೊಡುಗೆ ನೀಡಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಶೇ 4ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳವಾಗಿತ್ತು. ಈಗ ಕೇಂದ್ರ ಸರ್ಕಾರಿ ನೌಕರರ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಕೇಂದ್ರ ಸರ್ಕಾರವು ತುಟ್ಟಿಭತ್ಯೆ ಪರಿಹಾರ (ಡಿಆರ್)ವನ್ನು ಕೂಡಾ ಅದೇ ಪ್ರಮಾಣದಲ್ಲಿ 4% ರಷ್ಟು ಹೆಚ್ಚಿಸಿದೆ.

ಜುಲೈ 1, 2022 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ತುಟ್ಟಿಭತ್ಯೆ ಪರಿಹಾರ (ಡಿಆರ್) ಶೇ 4% ರಷ್ಟು ಹೆಚ್ಚಿಸಲಾಗಿದೆ. ಡಿಆರ್ ಶೇ 34 ರಿಂದ ಶೇ 38ಕ್ಕೆ ಹೆಚ್ಚಿಸಲಾಗಿದೆ ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DOPPW) ಮೆಮೊರಾಂಡಮ್ (OM) ನಲ್ಲಿ ತಿಳಿಸಲಾಗಿದೆ.

Infographics: ತುಟ್ಟಿಭತ್ಯೆ ಹೆಚ್ಚಳ ನಂತರ ಸರ್ಕಾರಿ ನೌಕರರಿಗೆ ಯಾರಿಗೆ ಎಷ್ಟು ಸಂಬಳ?

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.


DoPPWನ ಇತ್ತೀಚಿನ ಟ್ವೀಟ್

DoPPWನ ಇತ್ತೀಚಿನ ಟ್ವೀಟ್ ಪ್ರಕಾರ, ''DOPPW ಭಾರತವು 08.10.2022 ರಂದು ಕೇಂದ್ರ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ಮೂಲ ಪಿಂಚಣಿ/ಕುಟುಂಬ ಪಿಂಚಣಿಯ 34% ರಿಂದ 38% ಕ್ಕೆ ಡಿಯರ್ನೆಸ್ ರಿಲೀಫ್ ಅನ್ನು ಹೆಚ್ಚಿಸಲು ಆದೇಶಗಳನ್ನು ಹೊರಡಿಸಿದೆ. ಪರಿಷ್ಕೃತ ದರವು 01.07.2022 ರಿಂದ ಜಾರಿಗೆ ಬರುತ್ತದೆ''.


ಪಿಂಚಣಿದಾರರ ಪೋರ್ಟಲ್

ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಡಿಯರ್ನೆಸ್ ರಿಲೀಫ್ DR ಅನ್ನು ಘೋಷಿಸಲಾಗುತ್ತದೆ, ಸೆಪ್ಟೆಂಬರ್ ಮತ್ತು ಮಾರ್ಚ್ ತಿಂಗಳುಗಳಲ್ಲಿ. ಪಿಂಚಣಿದಾರರ ಪೋರ್ಟಲ್ ಪ್ರಕಾರ, "ಆದ್ದರಿಂದ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ, ಹಿಂದಿನ ವರ್ಷದ ಡಿಸೆಂಬರ್ ತಿಂಗಳಿಗೆ ಲಭ್ಯವಿರುವ ಡಿಆರ್ ದರಗಳ ಪ್ರಕಾರ ಪಿಂಚಣಿ/ಕುಟುಂಬ ಪಿಂಚಣಿ ಮೇಲಿನ ಡಿಆರ್ ಅನ್ನು ಲೆಕ್ಕಹಾಕಲಾಗುತ್ತದೆ. ಅದೇ ರೀತಿ, ಜುಲೈ ಮತ್ತು ಆಗಸ್ಟ್ ತಿಂಗಳಿಗೆ, DR ಅನ್ನು w.r.t ಅನ್ನು ಲೆಕ್ಕಹಾಕಲಾಗುತ್ತದೆ. ಜೂನ್ ತಿಂಗಳ DR ದರಗಳು ಲಭ್ಯವಿದೆ.

ವೆಚ್ಚ ಇಲಾಖೆಯ ವಾರ್ಷಿಕ ವರದಿ

ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ. ಪಿಂಚಣಿದಾರರಿಗೆ ಡಿಆರ್ ನಿಲ್ಲಿಸುವ ನಿರ್ಧಾರ ಸರಿಯಲ್ಲ ಎಂದು ಭಾರತೀಯ ಪಿಂಚಣಿದಾರರ ವೇದಿಕೆ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಡಿಯರ್ನೆಸ್ ರಿಲೀಫ್ DR ಯಾರಿಗೆ ಅನ್ವಯ

ಈ ಇಲಾಖೆಯ OM ಸಂಖ್ಯೆ 4/34/2002-P&PW(D)Vol.llI ದಿನಾಂಕ 23.06.2017 ರ ಪ್ರಕಾರ ಆದೇಶಗಳನ್ನು ಹೊರಡಿಸಲಾದ PSU/ಸ್ವಾಯತ್ತ ಸಂಸ್ಥೆಗಳಲ್ಲಿನ ಸಿಬ್ಬಂದಿಗಳು, ಪಿಂಚಣಿದಾರರು/ಕುಟುಂಬ ಪಿಂಚಣಿದಾರರು, ರೈಲ್ವೆ ಸಿಬ್ಬಂದಿ, ಅಖಿಲ ಭಾರತ ಕೇಂದ್ರ ಕಚೇರಿ ಸೇವಾ ನಿರತರು, ಸಶಸ್ತ್ರ ಪಡೆ ಸೇರಿದಂತೆ ರಕ್ಷಣಾ ಪಡೆ ಪಿಂಚಣಿದಾರರು, ಮುಂತಾದವರಿಗೆ ಅನ್ವಯ.

ಡಿಆರ್ ದರ
2016ರ ಜುಲೈ 1: ಶೇ 2
2017ರ ಜನವರಿ 1: ಶೇ 4
2017ರ ಜುಲೈ 1: ಶೇ 5
2018ರ ಜನವರಿ 1: ಶೇ 7
2018ರ ಜುಲೈ 1: ಶೇ 9
2019ರ ಜನವರಿ 1: ಶೇ 12
2019ರ ಜುಲೈ 1: ಶೇ 17
2021ರ ಜನವರಿ 1: ಶೇ 31
2022ರ ಜುಲೈ 1: ಶೇ 34

ಮಾಹಿತಿ ಕೃಪೆ: Ministry of Personnel, Public Grievance & Pensions

By Mahesh Malnad Oneindia

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags