News18 ಕನ್ನಡ

400k Followers

SSLC, PUC ಪಾಸಾದವರಿಗೆ ಪೋಸ್ಟ್​ ಆಫೀಸ್ ಜಾಬ್, ತಿಂಗಳಿಗೆ ₹ 81 ಸಾವಿರ ಸಂಬಳ

26 Oct 2022.1:05 PM

Post Office Recruitment 2022: ಭಾರತೀಯ ಅಂಚೆ ಇಲಾಖೆ (India Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 188 ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff)​, ಪೋಸ್ಟ್​​ಮ್ಯಾನ್(Post Man)​​, ಪೋಸ್ಟಲ್​​ ಅಸಿಸ್ಟೆಂಟ್(Postal Assistant)​​, ಮೇಲ್​ ಗಾರ್ಡ್​(Mail Guard), ಸಾರ್ಟಿಂಗ್​ ಅಸಿಸ್ಟೆಂಟ್(Sorting Assistant)​ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆನ್​ಲೈನ್​(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 25ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 22, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.indiapost.gov.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಗುಜರಾತ್ ಪೋಸ್ಟಲ್​ ಸರ್ಕಲ್
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್
ಒಟ್ಟು ಹುದ್ದೆ188
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ
ವೇತನಮಾಸಿಕ ₹ 18,000-81,100
ಉದ್ಯೋಗದ ಸ್ಥಳಅಹಮದಾಬಾದ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ25/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ22/11/2022


ಅರ್ಜಿ ಶುಲ್ಕ:
ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಎಸ್​ಸಿ/ಎಸ್​ಟಿ/PwBD/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

BHEL Recruitment 2022: ತಿಂಗಳಿಗೆ 78,000 ಸಂಬಳ, ಎಂಜಿನಿಯರಿಂಗ್ ಆಗಿದ್ರೆ ಅರ್ಜಿ ಹಾಕಿ

ಹುದ್ದೆಯ ಮಾಹಿತಿ:
ಪೋಸ್ಟಲ್​ ಅಸಿಸ್ಟೆಂಟ್​/ ಸಾರ್ಟಿಂಗ್ ಅಸಿಸ್ಟೆಂಟ್- 71
ಪೋಸ್ಟ್​ಮ್ಯಾನ್​/ಮೇಲ್​ ಗಾರ್ಡ್​- 56
ಮಲ್ಟಿ- ಟಾಸ್ಕಿಂಗ್​ ಸ್ಟಾಫ್-61
ಒಟ್ಟು 188 ಹುದ್ದೆಗಳು

ವಿದ್ಯಾರ್ಹತೆ:
ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು. ಸ್ಥಳೀಯ ಭಾಷೆಯ ಜ್ಞಾನವಿರಬೇಕು. ಕಂಪ್ಯೂಟರ್ ತಿಳುವಳಿಕೆ ಇರಬೇಕು. ದ್ವಿಚಕ್ರ ವಾಹನದ ಡ್ರೈವಿಂಗ್ ಲೈಸೆನ್ಸ್​ ಹೊಂದಿರಬೇಕು.

ವಯೋಮಿತಿ:
ಪೋಸ್ಟಲ್​ ಅಸಿಸ್ಟೆಂಟ್​/ ಸಾರ್ಟಿಂಗ್ ಅಸಿಸ್ಟೆಂಟ್ & ಪೋಸ್ಟ್​ಮ್ಯಾನ್​/ ಮೇಲ್​ ಗಾರ್ಡ್​​- 18- 27 ವರ್ಷ. (ಒಬಿಸಿ- 3 ವರ್ಷ ಸಡಿಲಿಕೆ, ಎಸ್​ಸಿ/ಎಸ್​ಟಿ-5 ವರ್ಷ ಸಡಿಲಿಕೆ)

ಮಲ್ಟಿ ಟಾಸ್ಕಿಂಗ್ ಸ್ಟಾಫ್- 18-25 ವರ್ಷ. (ಒಬಿಸಿ- 3 ವರ್ಷ ಸಡಿಲಿಕೆ, ಎಸ್​ಸಿ/ಎಸ್​ಟಿ-5 ವರ್ಷ ಸಡಿಲಿಕೆ)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/11/2022

Railway Recruitment 2022: 3115 ರೈಲ್ವೆ ಹುದ್ದೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಅಕ್ಟೋಬರ್ 29 ಕೊನೆ ದಿನ

ವೇತನ:
ಮಾಸಿಕ ₹ 18,000-81,100 ರೂ. ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags