Oneindia

1.1M Followers

ಪತಿ ವಿರುದ್ಧ ಚೆಕ್ ಬೌನ್ಸ್ ಕೇಸ್: ಪತ್ನಿಯನ್ನು ಆರೋಪಿಯನ್ನಾಗಿ ಮಾಡಲಾಗದೆಂದ ಹೈಕೋರ್ಟ್

04 Nov 2022.06:15 AM

ಬೆಂಗಳೂರು. ನ.4: ಪತಿಯ ಸಹಿಯಿರುವ ಚೆಕ್ ಬೌನ್ಸ್ ಆದರೆ ಅದಕ್ಕೆ ಪತಿಯೇ ಹೊಣೆ ಹೊರತು ಆತನ ಪತ್ನಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಅಲ್ಲದೆ, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಸೆಕ್ಷನ್ 138 ಪ್ರಕಾರ ಪತಿ ವಿರುದ್ಧ ಚೆಕ್ ಬೌನ್ಸ್ ಕೇಸ್ ಇದ್ದರೆ ಅದರಲ್ಲಿ ಪತಿಯನ್ನು ಆರೋಪಿಯನ್ನಾಗಿ ಮಾಡಲಾಗದೆಂದು ಪತ್ನಿಯ ವಿರುದ್ಧ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದೆ.

Cheque Bounce : ಮತ್ತೆ ಖಾತೆ ತೆರೆಯಲು ಆಗಲ್ಲ; ಚೆಕ್ ಬೌನ್ಸ್ ಆದ್ರೆ ಏನೇನು ಕ್ರಮ?

ಬೆಂಗಳೂರಿನ ಮಹಿಳೆ ವೀಣಾಶ್ರೀ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯಪೀಠ ಈ ತೀರ್ಪು ನೀಡಿದೆ.

ಆದೇಶವೇನು?: ಪ್ರಕರಣದಲ್ಲಿ ಚೆಕ್‌ಗೆ ಅರ್ಜಿದಾರರು ಸಹಿ ಹಾಕಿಲ್ಲ. ವಿತರಿಸಲಾಗಿರುವ ಚೆಕ್‌ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಅರ್ಜಿದಾರೆಯ ಪತಿ ಚೆಕ್ ನೀಡಿರುವುದಾಗಿ ದೂರುದಾರರೇ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನೂ ಪ್ರಕರಣದ ಮೂವರು ಆರೋಪಿಗಳಿದ್ದು, ಅವರು ಕಂಪನಿ, ಸಂಸ್ಥೆ ಅಥವಾ ಸಂಘವನ್ನು ಆರಂಭಿಸಿಲ್ಲ. ಇಂತಹ ಸಂದರ್ಭದಲ್ಲಿ ಪತಿ ವಿತರಿಸಿದ ಚೆಕ್‌ನ ಬೌನ್ಸ್ ಪ್ರಕರಣದಲ್ಲಿ ಅರ್ಜಿದಾರೆಯನ್ನು ಆರೋಪಿ ಮಾಡಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಅರ್ಜಿದಾರೆ ವಿರುದ್ಧ 2017ರ ಡಿ.8ರಂದು 22ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾದ ದೂರು ರದ್ದುಪಡಿಸಿದೆ.

ಚೆಕ್ ಬೌನ್ಸ್ ಪ್ರಕರಣಗಳ ಪರಿಹಾರ ನಿಗದಿಗೆ ವಿವೇಚನೆ ಬಳಸಲು ಹೈಕೋರ್ಟ್ ತಾಕೀತು

ಪ್ರಕರಣದ ವಿವರ: ವೀಣಾಶ್ರೀ, ಆಕೆಯ ಪತಿ ಹಾಗೂ ಅತ್ತೆ, ಶಂಕರ್ ಎಂಬುವವರಿಂದ ಒಂದಷ್ಟು ಹಣ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಭದ್ರತಾ ಖಾತರಿಯಾಗಿ ವೀಣಾಶ್ರೀ ಪತಿ ಸಹಿಯಿರುವ ಚೆಕ್ ವಿತರಿಸಲಾಗಿತ್ತು. ಆ ಚೆಕ್ ಬೌನ್ಸ್ ಆದ ಕಾರಣ, 2017ರಲ್ಲಿ 22ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶಂಕರ್ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವೀಣಾಶ್ರೀ, ತಮ್ಮ ವಿರುದ್ಧದ ದೂರು ರದ್ದು ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಬೌನ್ಸ್ ಆಗಿರುವ ಚೆಕ್‌ಗೆ ತಾವು ಸಹಿ ಹಾಕಿಲ್ಲ. ಪತಿಯಷ್ಟೇ ಸಹಿ ಹಾಕಿರುವ ಕಾರಣ ತಮ್ಮನ್ನು ಅಭಿಯೋಜನೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಸಭೆ ನಡೆಸಲು ಸೂಚನೆ: ಬೆಂಗಳೂರು ನಗರದ ರಸ್ತೆ ಬದಿಗಳು ಮತ್ತು ಸಿಗ್ನಲ್‌ಗಳಲ್ಲಿ ಆಟಿಕೆಗಳು, ಪೆನ್ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳಿಗೆ ಪುರ್ನವಸತಿ ಕಲ್ಪಿಸುವುದು ಮತ್ತು ಶಿಕ್ಷಣ ನೀಡುವುದಕ್ಕಾಗಿ ಅಗತ್ಯ ಸಲಹೆಗಳನ್ನು ನೀಡಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‌ಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮಕ್ಕಳ ರಕ್ಷಣೆಗೆ ಶ್ರಮಿಸುತ್ತಿರುವ ಸಂಸ್ಥೆಗಳ ಪಾಲುದಾರರು ನ. 15ರಂದು ಸಭೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರು ನಗರದ ಲೆಟ್ ಕಿಡ್ಜ್ ಫೌಂಡೇಷನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಲೆ ಅವರಿದ್ದ ವಿಭಾಗೀಯ ಪೀಠ,ವಿಚಾರಣೆ ನಡೆಸಿತು. ರಿಜಿಸ್ಟ್ರಾರ್ ಅವರು ಹೈಕೋರ್ಟ್ ಸಭಾಂಗಣದಲ್ಲಿ ಸಭೆ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಅಲ್ಲದೆ, 2021ರ ಫೆ.18ರಂದು ನ್ಯಾಯಪೀಠದ ಸೂಚನೆ ಮೇರೆಗೆ ಎಲ್ಲ ಪಾಲುದಾರರ ಸಭೆ ನಡೆಸಿ ಸಲಹೆಗಳನ್ನು ನೀಡಲಾಗಿದೆ, ಆದರೆ, ಅದಕ್ಕೆ ಸಂಬಂಧಿಸಿದಂತೆ ಸರ್ಕಾರ ಅನುಪಾಲನಾ ವರದಿ ಸಲ್ಲಿಸಿದೆ. ಈ ವರದಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಬೇಕಾಗಿದೆ. ಆದ್ದರಿಂದ ಮತ್ತೊಮ್ಮೆ ಸಭೆ ನಡೆಸಬೇಕು. ಈ ನಿಟ್ಟಿನಲ್ಲಿ ನ.15ರ ಸಂಜೆ 5.30ಕ್ಕೆ ಸಭೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಈ ಹಿಂದೆ ಭಾಗಿಯಾಗಿದ್ದ ಎಲ್ಲ ಪಾಲುದಾರರು ಸಭೆಗೆ ಭಾಗವಹಿಸಬೇಕು. ಅಲ್ಲದೆ, ರಾಜ್ಯ ಸರ್ಕಾರ ಅನುಪಾಲನಾ ವರದಿಯಗೆ ಸಂಬಂಧಿಸಿದತೆ ವರದಿ ಮತ್ತು ಎಲ್ಲ ಅನುಪಾಲನಾ ವರದಿಗಳನ್ನು ಹೆಚ್ಚಿನ ಪ್ರತಿಗಳನ್ನು ಒದಗಿಸಬೇಕು. ಜತೆಗೆ, ಪಾಲುದಾರರು ಅನುಪಾಲನಾ ವರದಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.

By ಎಸ್ ಎಸ್ ಎಸ್ Oneindia

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags