Oneindia

1.1M Followers

ಸರ್ಕಾರಿ ನೌಕರರ ರಜೆ ನಿಯಮ; ನಿವೃತ್ತಿ, ಪ್ರಸೂತಿ ರಜೆ ನಿಯಮಗಳು

27 Oct 2022.12:36 PM

ಬೆಂಗಳೂರು, ಅಕ್ಟೋಬರ್ 27; ಸರ್ಕಾರಿ ನೌಕರರ ರಜೆ ನಿಯಮಗಳಲ್ಲಿ ನಿವೃತ್ತಿ ಪೂರ್ವಗಳಿಕೆ ರಜೆ, ಪ್ರಸೂತಿ ರಜೆ, ಪರೀಕ್ಷಾ ರಜೆಗಳಿಗೂ ನಿಯಮಗಳಿವೆ.

ಆದರೆ ನಿವೃತ್ತಿ ಪೂರ್ವಗಳಿಕೆ ರಜೆ ನಿಯಮದಲ್ಲಿ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯು ಸಂಬಳದಲ್ಲಿ ಸೇರ್ಪಡೆಯಾಗುವುದಿಲ್ಲ.

ಕರ್ನಾಟಕ; ಸರ್ಕಾರಿ ನೌಕರರ ರಜೆ ನಿಯಮ ತಿಳಿಯಿರಿ

ನಿವೃತ್ತಿ ವಯಸ್ಸು ತಲುಪಿದ ನಂತರ ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ ರಜೆ ಮಂಜೂರು ಮಾಡುವ ಅಧಿಕಾರಿಯೇ ತಾನೇತಾನಾಗಿ (ನೌಕರನಿಂದ ಅರ್ಜಿ ಬೇಕಾಗಿಲ್ಲ) ನಿವೃತ್ತಿ ದಿನಾಂಕದಲ್ಲಿ ನೌಕರನ ಲೆಕ್ಕದಲ್ಲಿ ಹೊಂದಿರುವ ಗಳಿಕೆ ರಜೆಯ ಗರಿಷ್ಠ ಮಿತಿ 240 ದಿನಗಳಿಗೆ ಒಳಪಟ್ಟು ರಜೆ ಸಂಬಳವನ್ನು ಮಂಜೂರು ಮಾಡಬೇಕು.

ಸರ್ಕಾರಿ ನೌಕರರ ರಜೆ; ಶಿಶುಪಾಲನಾ, ಗಳಿಕೆ ರಜೆಗಳ ವಿವರಗಳು

ನಿವೃತ್ತ ನೌಕರನ ವಿರುದ್ಧ ದುರ್ನಡತೆ ಅಥವ ಆರೋಪಗಳ ಸಂಬಂಧ ವಿಚಾರಣೆಗಾಗಿ ನಿಲಂಬನೆಯಲ್ಲಿದ್ದು ಅಥವ ಶಿಸ್ತಿನ ವಿಚಾರಣೆಯು ಇತ್ಯರ್ಥವಾಗದೇ ಬಾಕಿ ಉಳಿದಿದ್ದು ನಿವೃತ್ತ ನೌಕರನಿಂದ ಪ್ರಕರಣ ಇತ್ಯರ್ಥವಾದ ನಂತರ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟ ಪರಿಹಾರಾರ್ಥವಾಗಿ ಹಣದ ವಸೂಲಾತಿಯು ಅಗತ್ಯವಿರುದೆಂದು ತಿಳಿದು ಬಂದರೆ ನೌಕರನಿಗೆ ಪಾವತಿಸಬಹುದಾದ ರಜೆಯ ಸಂಬಳದ ಪೂರ್ಣ ಮೊಬಲಗು ಅಥವ ಭಾಗಾಂಶವನ್ನು ತಡೆಹಿಡಿದು ಪ್ರಕರಣದ ಇತ್ಯರ್ಥವಾದ ನಂತರ ನೌಕರನಿಂದ ವಸೂಲಿ ಮಾಡಬೇಕಾದ ಮೊಬಲಗನ್ನು ಹೊಂದಾಣಿಕೆ ಮಾಡಿ ಉಳಿದ ಮೊಬಲಗನ್ನು ಪಾವತಿ ಮಾಡಬೇಕು (ನಿಯಮ 118 ಎ (2)).

ಸರ್ಕಾರಿ ನೌಕರರ ರಜೆ; ಗಳಿಕೆ, ಅಸಾಧಾರಣ, ಸಾಂದರ್ಭಿಕ ರಜೆ ನಿಯಮಗಳು

ಸರ್ಕಾರಿ ನೌಕರನ ರಜೆ ನಿಯಮ 132 ರಿಂದ 134ರಲ್ಲಿ ಸರ್ಕಾರಿ ನೌಕರನು ಇಲಾಖಾ ಪರೀಕ್ಷೆಗಳಿಗೆ ಹಾಜರಾಗಲು ಕೆಲಸಕ್ಕೆ ಗೈರು ಹಾಜರಾದರೆ ಅಥವ ಪರಸ್ಥಳಕ್ಕೆ ಹೋಗಿದ್ದರೆ ಅವನು ಕರ್ತವ್ಯದ ಮೇಲಿದ್ದಾನೆಂದು ಪರಿಗಣಿಸತಕ್ಕದ್ದು.

ಸರ್ಕಾರಿ ನೌಕರನಿಗೆ ಪರೀಕ್ಷಾ ಸಿದ್ಧತೆಗೆಂದು ಅಥವಾ ಪರೀಕ್ಷೆಯ ನಂತರ ಮನೋರಂಜನೆಗಾಗಿ ರಜೆ ನೀಡತಕ್ಕದ್ದಲ್ಲ. ಪರೀಕ್ಷೆಯ ದಿನ ಮತ್ತು ದಿನಗಳು ಸೇರಿದಂತೆ ಪರೀಕ್ಷಾ ಕೇಂದ್ರಕ್ಕೆ ತೆರಲಲು ಬೇಕಾಗಿರುವ ಅಗತ್ಯ ಪ್ರಯಾಣದ ಕಾಲಾವಕಾಶವನ್ನು ಮಾತ್ರ ಅನುಮತಿಸಬಹುದಾಗಿದೆ.

ಯಾವುದೇ ಶಾಖೆಯಲ್ಲಿ ಉನ್ನತ ನೇಮಕಾತಿಗಾಗಿ ಅರ್ಹತೆ ಪಡೆಯಲು ಉತ್ತೀರ್ಣನಾಗಬೇಕಾದ ಯಾವುದೇ ಪರೀಕ್ಷೆಗೆ ಹಾಜರಾಗಲು ಪ್ರತಿ ಪರೀಕ್ಷೆಗೆ ಎರಡಕ್ಕಿಂತ ಹೆಚ್ಚು ಸಲ ಅನುಮತಿ ನೀಡತಕ್ಕದ್ದಲ್ಲ.

ಮಹಿಳಾ ಸರ್ಕಾರಿ ನೌಕರರಿಗೆ ಸಕ್ಷಮ ಅಧಿಕಾರಿಯು ಪ್ರಸೂತಿ ರಜೆಯನ್ನು ಆರಂಭದ ದಿನಾಂಕದಿಂದ 180 ದಿನಗಳವರೆಗೆ ಮಂಜೂರು ಮಾಡಬಹುದು, ರಜಾ ಅವಧಿಯಲ್ಲಿ ಆಕೆಗೆ ರಜೆಯ ಮೇಲೆ ಹೋಗುವ ನಿಕಟ ಪೂರ್ವ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜೆ ವೇತನವನ್ನು ನೀಡತಕ್ಕದ್ದು.

ಗರ್ಭಪಾತವಾದಗ ಆರು ವಾರಗಳ ರಜೆಯನ್ನು ಮಂಜೂರು ಮಾಡಬಹುದು. ಗರ್ಭಪಾತವಾದಾಗ ಇಂತಹಾ ರಜೆ ಮಂಜೂರು ಮಾಡುವಾಗ ವೃತ್ತಿ ನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರದಿಂದ ಸಮರ್ಥವಾಗಿರಬೇಕು ಎಂಬ ಷರತ್ತುಗೊಳಪಟ್ಟು ಮಂಜೂರು ಮಾಡಬಹುದು.

ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ಮಹಿಳಾ ಸರ್ಕಾರಿ ನೌಕರರಿಗೆ ಪ್ರಸೂತಿ ರಜೆಯನ್ನು ಮಂಜೂರುಮಾಡುವಂತಿಲ್ಲ. ಪ್ರಸೂತಿ ರಜೆಯನ್ನು ಬಿಡುವಿನ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು ವೈದ್ಯಕೀಯ ಪ್ರಮಾಣ ಪತ್ರ ಹಾಜರು ಪಡಿಸದೇ ಇದ್ದರೂ 60 ದಿನಗಳಿಗೆ ಮೀರದಂತೆ ಇಂಥ ರಜೆಯನ್ನು ಮಂಜೂರು ಮಾಡಬಹುದು.

ಮಹಿಳಾ ಸರ್ಕಾರಿ ನೌಕರಳು ಮಗುವನ್ನು ದತ್ತು ಪಡೆದರೆ ದತ್ತು ಪ್ರಕ್ರಿಯೆ ಮಾನ್ಯತೆ ಹೊಂದಿದ ದಿನಾಂಕದಿಂದ 180 ದಿನಗಳ ರಜೆಯನ್ನು ಪ್ರಸೂತಿ ರಜೆ ಮಾದರಿಯಲ್ಲೇ ನೀಡತಕ್ಕದ್ದು.

ಸರ್ಕಾರಿ ನೌಕರರ ರಜೆ ನಿಯಮ 108 ಸರ್ಕಾರವು ಸಂದರ್ಭದ ವಿಶೇಷ ಸನ್ನಿವೇಶಗಳನ್ನು ಗಮನಿಸಿ ಅನ್ಯತಾ ನಿರ್ಧರಿಸಿದ ಹೊರತು, ರಜೆಯನ್ನು ಪಡೆಯದೇ ನಾಲ್ಕು ತಿಂಗಳು ಅಥವಾ ಅದಕ್ಕೂ ಹೆಚ್ಚು ಅವಧಿಯವರೆಗೆ ಕರ್ತವ್ಯದಿಂದ ಗೈರುಹಾಜರಾದ ನೌಕರನ್ನು ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು)-1957 ರಲ್ಲಿ ವಿಧಿಸಿದ ಕಾರ್ಯವಿಧಾನವನ್ನು ಅನುಸರಿಸಿದ ತರುವಾಯ ನೌಕರನನ್ನು ವಜಾ ಮಾಡುವುದಕ್ಕೆ ಮತ್ತು ತೆಗೆದು ಹಾಕಲಿಕ್ಕೆ ಗುರಿಯಾಗಬಹುದು.

ನಿಯಮ 109ರ ಅನ್ವಯ ಸಾಂದರ್ಭಿಕ ರಜೆಯನ್ನು ಹೊರತುಪಡಿಸಿ ಇನ್ಯಾವುದೇ ರಜೆಗಳನ್ನು ಸಂಯೋಜಿಸಿ ಮತ್ತು ಮುಂದುವರೆಸಿ ರಜೆಯನ್ನು ಮಂಜೂರು ಮಾಡಬಹುದು.

ನಿಯಮ 111ರ ಒಬ್ಬ ಅಧಿಕಾರಿಗೆ ಯಾವುದೇ ಕಾಲದಲ್ಲಿ ಅವನ ಲೆಕ್ಕದಲ್ಲಿ ಪೂರ್ಣ/ ಯಾವುದೇ ಭಾಗಶಃ ಇರುವ ಗಳಿಕೆ ರಜೆಯನ್ನು ಮಂಜೂರು ಮಾಡಬಹುದು. ಆದರೆ ನಿಯಮ 112 (9)ರಲ್ಲಿ ನಿರ್ಧಿಷ್ಟಪಡಿಸಿರುವ ಪರಿಮಿತಿಗೆ ಒಳಪಟ್ಟು ಮಂಜೂರು ಮಾಡಬಹುದು.

ಸರ್ಕಾರಿ ನೌಕರನು ಯಾವುದೇ ಅರ್ಧವರ್ಷದಲ್ಲಿ ಕೆಲವು ಕಾಲ ಗೈರುಹಾಜರು ಅಂದರೆ ಅಮಾನತ್ತು, ಕರ್ತವ್ಯೇತರ ಅಥವಾ ಅಸಾಧಾರಣ ರಜೆ ತೆಗೆದುಕೊಂಡರೆ ಮುಂದಿನ ಅರ್ಧವರ್ಷದ ಪ್ರಾರಂಭದಲ್ಲಿ ಅವನ ಗಳಿಕೆ ರಜೆಯ ಲೆಕ್ಕಕ್ಕೆ ಸೇರಬೇಕಾದ ರಜೆಯಿಂದ ಅಂತಹಾ ಅಸಾಧಾರಣ ರಜೆ ಅಥವಾ ಕರ್ತವ್ಯೇತರ ಅವಧಿ ಅಥವ ಅಮಾನತ್ತಿನ ಅವಧಿಯ ಹತ್ತನೇ ಒಂದು ಭಾಗವನ್ನು ಹದಿನೈದು ದಿನಗಳ ಗರಿಷ್ಠ ಮಿತಿಗೆ ಒಳಪಟ್ಟು ಕಡಿಮೆ ಮಾಡತಕ್ಕದ್ದು.

ಅಸಾಧಾರಣ ಅವಧಿಯನ್ನು ಬಿಟ್ಟು, ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿ ಎಂದು ಆದೇಶಿಸಿದಾಗ ರಜಾ ಲೆಕ್ಕವನ್ನು ಸರಿಪಡಿಸಬೇಕು. ಗಳಿಕೆ ರಜೆಯನ್ನು ಜಮೆ ಮಾಡುವಾಗ ದಿನದ ಬಿನಾಂಕವನ್ನ ಸಮೀಪದ ಒಂದು ದಿನವೆಂದು ಪರಿಗಣಿಸತಕ್ಕದ್ದು.

ಒಂದು ಬಾರಿಗೆ ಮಂಜೂರುಮಾಡಬಹುದಾದ ಗರಿಷ್ಠಮಿತಿ ಭಾರತದಲ್ಲಿ ನೇಮಕಗೊಂಡ ಸರ್ಕಾರಿ ನೌಕರನಿಗೆ 120 ದಿವಸಗಳು. ಗೆಜೆಟೆಡ್ ಅಧಿಕಾರಿಗೆ 180 ಆದರೇ ಮಂಜೂರು ಮಾಡುದ ರಜೆಯ ಅವಧಿಯಲ್ಲಿ 60 ದಿವಸಗಳು ಭಾರತದ ಹೊರಗಡೆ ಕಳೆದಿರಬೇಕು.

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada