Kannada News Now

1.8M Followers

BIG NEWS: ಎಲ್ಲಾ ಶಾಲೆಗಳಲ್ಲಿ ವಿವೇಕಾನಂದ ಪೋಟೋ ಹಾಕಲು ತೀರ್ಮಾನ - ಸಚಿವ ಬಿ.ಸಿ ನಾಗೇಶ್

15 Nov 2022.2:39 PM

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ( Congress Party ) ಶಾಲೆಗಳಿಗೆ ( School ) ಕೇಸರಿ ಬಣ್ಣ ಬಳಿಯುತ್ತಿರೋ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಶಿಕ್ಷಣ ಕ್ಷೇತ್ರದಲ್ಲಿಯೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ನಾವು ಇಂತದ್ದೇ ಬಣ್ಣ ಬಳಿಯೋದಕ್ಕೆ ಹೇಳಿಲ್ಲ.

ಈಗಾಗಲೇ ವಿವೇಕಾನಂದ ಪೋಟೋ ಕೆಲ ಶಾಲೆಗಳಲ್ಲಿ ಇದೆ. ಇನ್ಮುಂದೆ ಎಲ್ಲಾ ಶಾಲೆಗಳಲ್ಲಿಯೂ ವಿವೇಕಾನಂದ ಪೋಟೋ ಹಾಕೋದಕ್ಕೆ ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Education Minister BC Nagesh ) ಹೇಳಿದ್ದಾರೆ.

ಶಿವಮೊಗ್ಗ: ನ.19ರಂದು ತೀರ್ಥಹಳ್ಳಿ ತಾಲೂಕಿನ ಬೆಕ್ಷೆ-ಕೆಂಜಿಗುಡ್ಡೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ 'ಗ್ರಾಮ ವಾಸ್ತವ್ಯ'

ಇಂದು ವಿಧಾನಸೌಧದ ಬಳಿಯಲ್ಲಿ ಶಾಲೆಗಳಿಗೆ ಕೇಸರಿ ಬಣ್ಣ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಕಾಂಗ್ರೆಸ್ ಶಿಕ್ಷಣ ಕ್ಷೇತ್ರದಲ್ಲೂ ಅನಾವಶ್ಯಕವಾಗಿ ರಾಜಕೀಯ ಮಾಡುತ್ತಿದೆ. ವಿರೋಧ ಮಾಡಿಸುವುದಕ್ಕೆ ಒಂದಿಷ್ಟು ಜನರು ಇದ್ದಾರೆ. ವೋಟ್ ಬ್ಯಾಂಕ್ ಗಾಗಿ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಯತ್ನ ಮಾಡುತ್ತಿದೆ ಎಂದರು.

BIGG NEWS: ಕಡೂರು ಕ್ಷೇತ್ರದ ಅಭಿವೃದ್ಧಿಗೆ 2,800 ಕೋಟಿ ಅನುದಾನ; ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಪಕ್ಷ ಒಂದು ಧರ್ಮದ ವೋಟ್ ಗಾಗಿ ಈ ರೀತಿ ವಿರೋಧ ಮಾಡುತ್ತಿದೆ. ಇದು ಸರಿಯಲ್ಲ. ನಾವು ಇದೇ ರೀತಿ ಬಣ್ಣ ಬಳಿಯಬೇಕು ಅಂತ ಸುತ್ತೋಲೆ ಹೊರಡಿಸಿಲ್ಲ. ಅಲ್ಲಿನ ವಾತಾವಾರಣಕ್ಕೆ ತಕ್ಕಂತೆ ಕೊಠಡಿ ನಿರ್ಮಿಸಿ ಎಂದು ಹೇಳಿದ್ದೇವೆ ಎಂದರು.

G20 Summit: ಕರ್ನಾಟಕದ ಅಳಿಯ, ಯುಕೆ ಪ್ರಧಾನಿ ʻರಿಷಿ ಸುನಕ್ʼರನ್ನು ಭೇಟಿಯಾದ ಪ್ರಧಾನಿ ʻಮೋದಿʼ | PM Modi meets Rishi Sunak

ಶಾಲಾ ಕೊಠಡಿ ನಿರ್ಮಿಸಿ ವಿವೇಕ ಎಂಬ ಹೆಸರಿಡಿ ಎಂದಿದ್ದೇವೆ. ಖಾಸಗಿ ಶಾಲೆಗಳಲ್ಲಿ ಕೇಸರಿ ಬಣ್ಣ ಬಳಿಯೋದು ಅವರಿಗೆ ಬಿಟ್ಟಿದ್ದು. ಈಗಾಗಲೇ ವಿವೇಕಾನಂದರ ಭಾವಚಿತ್ರ ಕೆಲವು ಶಾಲೆಗಳಲ್ಲಿವೆ. ಎಲ್ಲಾ ಶಾಲೆಗಳಲ್ಲಿಯೂ ವಿವೇಕಾನಂದ ಪೋಟೋ ಹಾಕಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags