Kannada News Now

1.8M Followers

BIGG NEWS : `ಪಿಂಚಣಿದಾರರಿಗೆ ಗುಡ್ ನ್ಯೂಸ್ : ಪಿಂಚಣಿ ಸೌಲಭ್ಯ ಮಾರ್ಪಾಡು ಮಾಡಿ ರಾಜ್ಯ ಸರ್ಕಾರ ಆದೇಶ

01 Dec 2022.11:24 AM

ಬೆಂಗಳೂರು : ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನಿವೃತ್ತಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಆದೇಶ ಹೊರಡಿಸಿದೆ.

BIGG NEWS: ನಾವು ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ಪ್ರೋತ್ಸಾಹ ನೀಡಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ | Basavaraj Bommai

ಎನ್ ಪಿಎಸ್ ಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಉಪದಾನ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು 2018 ರ ಏಪ್ರಿಲ್ 1 ರ ಬದಲಿಗೆ 2006 ಏಪ್ರಿಲ್ 1 ರಿಂದಲೇ ಪೂರ್ವನ್ವಯವಾಗುವಂತೆ ಆದೇಶಿಸಲಾಗಿದೆ. ನಿವೃತ್ತಿ ಉಪದಾನ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯ ಏಪ್ರಿಲ್ 1 ರ 2018 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದ್ದರಿಂದ ಈ ಸೌಲಭ್ಯವನ್ನು 2006 ರಿಂದ ಮರಣ ಹೊಂದಿದ ಅಥವಾ ನಿವೃತ್ತಿ ಹೊಂದಿದ ಪ್ರಕರರಣಗಳಿಗೂ ಎರಡು ಅನ್ವಯಿಸಲು 2021 ರ ಅಗಸ್ಟ್ 23 ರಂದು ನಡೆಸ ಎಸ್ ಪಿಎಸ್ ಅಧಿಕಾರಿಗಳ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಎನ್ ಪಿಎಸ್ ಅಧಿಕಾರಿಗಳು ಮತ್ತು ನೌಕರರಿಗೆ ಅನ್ವಯವಾಗುವಂತೆ ಸೌಲಭ್ಯದ ಹಿಂದಿನ ಆದೇಶ ಮಾರ್ಪಡಿಸಿ 2006 ರ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ವಿಸ್ತರಿಸಲಾಗಿದೆ.

Viral News: ವಿದೇಶಿ ಯುವತಿಗೆ ಮುಂಬೈನ ನಡುರಸ್ತೆಯಲ್ಲೇ ಕಿರುಕುಳ ನೀಡುತ್ತಿರೋ Shocking video | Watch


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags