News Next

20k Followers

Employees Provident Fund : ನೌಕರರ ವೇತನ ಮಿತಿ 21000ಕ್ಕೆ ಹೆಚ್ಚಿಸಲು ಕೇಂದ್ರ ನಿರ್ಧಾರ

03 Dec 2022.4:43 PM

ವದೆಹಲಿ : ಕೇಂದ್ರ ಸರಕಾರ ನೌಕರರ ಭವಿಷ್ಯ ನಿಧಿ ಯೋಜನೆಯಡಿ (Employees Provident Fund) ಯಲ್ಲಿ ವೇತನ ಮಿತಿಯನ್ನು ಈಗ ರೂ.15000 ಗಳಿಂದ 21000ಕ್ಕೆ ಏರಿಕೆ ಮಾಡಲು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೇಂದ್ರ ಸರಕಾರ 2014ರ ಸೆಪ್ಟೆಂಬರ್‌ನಲ್ಲಿ ವೇತನವನ್ನು ಹೆಚ್ಚಳ ಮಾಡಿದೆ.

ಈ ಯೋಜನೆ ಜಾರಿಗೆ ಬಂದರೆ ಇಪಿಎಫ್‌ ಯೋಜನೆ ಮತ್ತು ನೌಕರರ ಪಿಂಚಣಿ ಯೋಜನೆಗೆ ನೀಡುವ ಕೊಡುಗೆಯ ಮೊತ್ತ ಮೇಲೆ ಪರಿಣಾಮ ಬೀರಲಿದೆ. ಅದೇ ರೀತಿ ನಿವೃತ್ತಿಯ ಸಮಯದಲ್ಲಿ ಉದ್ಯೋಗಿಗೆ ಅರ್ಹವಾಗಿರುವ ಪಿಂಚಣಿ ಮೊತ್ತದ ಮೇಲೆ ಕೂಡ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

ವೇತನದ ಮಿತಿಯನ್ನು ರೂ. 21000ಕ್ಕೆ ಹೆಚ್ಚಿಸಿದರೆ ಇಪಿಎಫ್‌ ಮತ್ತು ಇಪಿಎಸ್‌ ಮೇಲೆ ಈ ಹೆಚ್ಚಳವು ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ತಿಳಿಯೋಣ. ಉದ್ಯೋಗಿಗಳ ಪಿಂಚಣಿ ಯೋಜನೆ ಖಾತೆಗೆ ಕೊಡುಗೆಗಳನ್ನು ತಿಂಗಳಿಗೆ ರೂ.15000ಕ್ಕೆ ಮೂಲ ವೇತನವನ್ನು ಮಿತಿಗೊಳಿಸುವ ಮೂಲಕ ಲೆಕ್ಕ ಹಾಕಲಾಗುತ್ತದೆ. ಹಾಗಾಗಿ ಇಪಿಎಫ್‌ ಖಾತೆಗೆ ಗರಿಷ್ಠ ಕೊಡುಗೆಯನ್ನು ತಿಂಗಳಿಗೆ ರೂ. 1250ಕ್ಕೆ ನಿರ್ಬಂಧಿಸಲಾಗಿದೆ. ಸರಕಾರವು ವೇತನ ಮಿತಿಯನ್ನು ರೂ. 21000ಕ್ಕೆ ಹೆಚ್ಚಿಸಿದರೆ, ಈ ಕೊಡುಗೆಯನ್ನು ಹೆಚ್ಚಿಸಲಾಗುತ್ತದೆ. ಅಂದರೆ ತಿಂಗಳ ಇಪಿಎಫ್‌ ಕೊಡುಗೆಯು ರೂ. 1749 ಆಗಲಿದೆ ಎಂದು ಪರಿಣಮ್‌ ಲಾ ಮತ್ತು ಅಸೋಸಿಯೇಟ್ಸ್‌ ಹಿರಿಯ ಪಾಲುದಾರರಾದ ಮಲ್ಲಿಕಾ ನೂರಾನಿ ತಿಳಿಸಿದ್ದಾರೆ.

ಇಪಿಎಫ್‌ ಯೋಜನೆಯಡಿಯಲ್ಲಿ ವೇತನದ ಮಿತಿ ಹೆಚ್ಚಳವು ನಿವೃತ್ತಿಯ ಸಮಯದಲ್ಲಿ ಹೆಚ್ಚಿನ ಪಿಂಚಣಿ ಮೊತ್ತಕ್ಕೆ ಕಾರಣವಾಗುತ್ತದೆ. ನೌಕರರ ಪಿಂಚಣಿ ಯೋಜನೆ, 2014ರ ಪ್ರಕಾರ ಇಪಿಎಫ್‌ ಪಿಂಚಣಿ ಲೆಕ್ಕಾಚಾರದ ಸೂತ್ರವು ಈ ಕೆಳಗಿನಂತಿರುತ್ತದೆ. (ಪಿಂಚಣಿ ಪಡೆಯಬಹುದಾದ ಸೇವೆಯ ವರ್ಷಗಳ ಸಂಖ್ಯೆ 60 ತಿಂಗಳ ಸರಾಸರಿ ಮಾಸಿಕ ವೇತನ)70. ವೇತನ ಮಿತಿ ಮಿತಿಯನ್ನು ರೂ.21000ಗೆ ಹೆಚ್ಚಿಸಿದರೆ, ನಂತರ ಪಡೆಯುವ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗುತ್ತದೆ. ಉದ್ಯೋಗಿಯು 20 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ಎರಡು ವರ್ಷಗಳನ್ನು ಸೇವಾ ಅವಧಿಗೆ ಬೋನಸ್‌ ಆಗಿ ಸೇರಿಸಲಾಗುತ್ತದೆ.

ಇಪಿಎಫ್‌ ಕಾನೂನುಗಳ ಪ್ರಕಾರ ಉದ್ಯೋಗಿಯ ಮಾಸಿಕ ಮೂಲ ವೇತನವು ರೂ.15000ವನ್ನು ಮೀರಿದಲ್ಲಿ ಆ ಉದ್ಯೋಗಿಯು ಇಪಿಎಫ್‌ ಯೋಜನೆಯ ಭಾಗವಾಗಿದ್ದರೂ ಅವರಿಗೆ ಇಪಿಎಫ್‌ಗೆ ಸೇರಿಸಲಾಗುವುದಿಲ್ಲ. ಇನ್ನೂ ಮೂಲ ವೇತನ ಮಿತಿಯನ್ನು ರೂ. 21000ಕ್ಕೆ ಹೆಚ್ಚಿಸಿದರೆ, ಹೆಚ್ಚಿನ ಮೂಲ ವೇತನವಿರುವ ಉದ್ಯೋಗಿಗಳು ಇಪಿಎಫ್‌ಗೆ ಸೇರಲು ಅರ್ಹರಾಗಿರುತ್ತಾರೆ. ಉದ್ಯೋಗಿಯ ಮೂಲ ವೇತನವು ರೂ. 15000ಕ್ಕಿಂತ ಮೇಲ್ಪಟ್ಟು ರೂ. 21000ಕ್ಕಿಂತ ಕಡಿಮೆ ಇದ್ದರೆ ಪ್ರಸ್ತಾವನೆಯ ಅನ್ವಯ ಆ ಉದ್ಯೋಗಿಯು ಕಡ್ಡಾಯವಾಗಿ ಇಪಿಎಸ್‌ ಸದಸ್ಯರಾಗಿ ಪರಿಗಣಿತವಾಗುತ್ತಾರೆ. ಈ ನೌಕರರು ನಿವೃತ್ತಿ ಸಮಯದಲ್ಲಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

ಪ್ರಸ್ತಾವಿತ ಯೋಜನೆಯ ಅನ್ವಯದಂತೆ ರೂ. 1250 ರಿಂದ ಇಪಿಎಸ್‌ ಕೊಡುಗೆಯನ್ನು ರೂ. 1749ಕ್ಕೆ ಹೆಚ್ಚಿಸುವುದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಕಡಿಮೆ ಇಪಿಎಫ್‌ ಸಂಗ್ರಹಣೆಗೆ ಕಾರಣವಾಗಬಹುದು. ಏಕೆಂದರೆ ಉದ್ಯೋಗದಾತರು ಪ್ರಸ್ತುತ ಇಪಿಎಸ್‌ ಖಾತೆಗೆ ಗರಿಷ್ಠ ರೂ. 1250ನ್ನು ಠೇವಣಿ ಮಾಡುವುದು ಇದಕ್ಕೆ ಕಾರಣವಾಗಿದೆ. ಇಪಿಎಸ್‌ಗೆ ಠೇವಣಿ ಹೆಚ್ಚಿಸಿದರೆ, ಇಪಿಎಫ್‌ ಖಾತೆಗೆ ಬ್ಯಾಲೆನ್ಸ್‌ ಠೇವಣಿ ಕಡಿಮೆಯಾಗುತ್ತದೆ.

PM Awas Yojana : 2022-23ನೇ ಸಾಲಿನ ಪಿಎಂ ಆವಾಸ್ ಯೋಜನೆ ಬಗ್ಗೆ ನಿಮಗೆ ಗೊತ್ತಾ ? ಯೋಜನೆಯಲ್ಲಿ ಸಿಗುವ ಸಬ್ಸಿಡಿ ಬಗ್ಗೆ ಮಾಹಿತಿ ಇಲ್ಲಿದೆ

Digital Rupee : ರಿಟೇಲ್‌ ಡಿಜಿಟಲ್‌ ರೂಪಾಯಿ ಇಂದಿನಿಂದ ಪ್ರಾರಂಭ; ಬೆಂಗಳೂರಿನಲ್ಲೂ ಲಭ್ಯ

LPG Price Down : ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆ : ಕೇಂದ್ರ ಸರಕಾರದ ಹೊಸ ಸೂತ್ರ

ಉದಾಹರಣೆಗೆ ಒಬ್ಬ ಉದ್ಯೋಗಿಯ ಮೂಲ ವೇತನ ತಿಂಗಳಿಗೆ ರೂ. 20000ವಾದರೆ ಅವರ ಉದ್ಯೋಗದಾತರು ಇಪಿಎಫ್‌ ಖಾತೆಗೆ ರೂ. 3600ನ್ನು ಠೇವಣಿ ಮಾಡುತ್ತಾರೆ. ಅಂದರೆ ಇಲ್ಲಿ ಲೆಕ್ಕ ಹಾಕಿದಾಗ ಮೂಲ ವೇತನ 30000ದಲ್ಲಿ 12%ದಂತೆ ರೂ. 3600 ಇಪಿಎಫ್‌ ಖಾತೆಗೆ ಹಾಗೆಯೇ 12% ದಲ್ಲಿ 8.33% ಇಪಿಎಫ್‌ ಖಾತೆಗೆ ಹಾಗೆಯೇ 12% ದಲ್ಲಿ 8.33% ಇಪಿಎಸ್‌ ಖಾತೆಗೆ, ಪಿಂಚಣಿ ಖಾತೆಗೆ ಸಲ್ಲುತ್ತದೆ. ಇಪಿಎಸ್‌ ಕೊಡುಗೆ, ವೇತನದ ಮಿತಿ ರೂ. 15000 ಆದ್ದರಿಂದ ಇಪಿಎಸ್‌ ಪಿಂಚಣಿ ಕೊಡುಗೆಯನ್ನುರೂ 1250ಕ್ಕೆ ನಿರ್ಬಂಧಿಸಲಾಗಿದೆ. ರೂ. 2350 ಇಪಿಎಫ್‌ ಖಾತೆಗೆ ಹೋಗುತ್ತದೆ. ವೇತನದ ಮಿತಿಯನ್ನು ತಿಂಗಳಿಗೆ ರೂ 21000ಕ್ಕೆ ಹೆಚ್ಚಿಸಿದರೆ, ಇಪಿಎಸ್‌ ಪಿಂಚಣಿ ಕೊಡುಗೆ ತಿಂಗಳಿಗೆ ರೂ.1749 ವಾದರೆ ಬಾಕಿ ಮೊತ್ತ 1851ನ್ನು ಇಪಿಎಫ್‌ ಖಾತೆಗೆ ಜಮಾ ಮಾಡಲಾಗುತ್ತದೆ.

Employees Provident Fund: Central decision to increase salary limit of employees to 21000

Disclaimer

Disclaimer

This story is auto-aggregated by a computer program and has not been created or edited by Dailyhunt Publisher: News Next