ಕನ್ನಡದುನಿಯಾ

1.6M Followers

LIC ಪಾಲಿಸಿದಾರರಿಗೆ ಗುಡ್‌ ನ್ಯೂಸ್:‌ ವಾಟ್ಸಾಪ್‌ ನಲ್ಲೂ ಸಿಗುತ್ತೆ ಈ ಎಲ್ಲ ಸೇವೆ

03 Dec 2022.1:31 PM

ವಾಟ್ಸಾಪ್‌​ ಸೇವೆ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ಕೂಡ ಇಂಥದ್ದೊಂದು ಸೇವೆಗೆ ಮುಂದಾಗಿದೆ.

ಟ್ವಿಟ್ಟರ್​ನಲ್ಲಿ ಈ ಕುರಿತ ಮಾಹಿತಿಯನ್ನು ಎಲ್​ಐಸಿ ನೀಡಿದೆ. ಎಲ್‌ಐಸಿ ಪೋರ್ಟಲ್ ನಲ್ಲಿ ತಮ್ಮ ಪಾಲಿಸಿಗಳನ್ನು ನೋಂದಣಿ ಮಾಡಿಸಿರೋರು ವಾಟ್ಸಾಪ್‌ ನಲ್ಲಿ ನಿಗದಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯುವುದು ಇನ್ನು ಸಾಧ್ಯವಾಗಲಿದೆ.

ಪ್ರೀಮಿಯಂ ಬಾಕಿ, ಬೋನಸ್ ಮಾಹಿತಿ, ಪಾಲಿಸಿ ವಿವರ, ಸಾಲದ ಮರುಪಾವತಿ, ಸಾಲದ ಬಡ್ಡಿ ಸೇರಿದಂತೆ ಅನೆಕ ಮಾಹಿತಿಗಳನ್ನು ಪಾಲಿಸಿದಾರ ವಾಟ್ಸಾಪ್‌ ಮೂಲಕ ಪಡೆದುಕೊಳ್ಳಬಹುದು.

ಈ ಸೇವೆ ಪಡೆಯಲು ಮೊದಲು ಮೊಬೈಲ್ ​ಫೋನ್​ ಮೂಲಕ ಎಲ್‌ಐಸಿ ಪೋರ್ಟಲ್​ನಲ್ಲಿ ನಿಮ್ಮ ಎಲ್​ಐಸಿ ಪಾಲಿಸಿಗಳನ್ನು ನೋಂದಣಿ ಮಾಡಿಕೊಳ್ಳಬೇಕು. ನಂತರ ನಿಮ್ಮ ವಾಟ್ಸಾಪ್‌ ನಿಂದ 8976862090 ಸಂಖ್ಯೆಗೆ "Hi" ಎಂದು ಮೆಸೇಜ್ ಕಳುಹಿಸಬೇಕು. ಆ ಬಳಿಕ ನಿಮಗೆ ಯಾವೆಲ್ಲ ಸೇವೆಗಳು ಲಭ್ಯವಿವೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿ ಆಯಾ ಸೇವೆಗೆ ಸಂಬಂಧಿಸಿದ ಸಂಖ್ಯೆ ಆಯ್ಕೆ ಮಾಡಿದರೆ ಅಗತ್ಯವಿರುವ ಮಾಹಿತಿ ಲಭಿಸುತ್ತದೆ.

ಈ ರೀತಿ ಮಾಡುವ ಮೂಲಕ ನೀವು, ಪ್ರೀಮಿಯಂ ಪಾವತಿ ಅಂತಿಮ ದಿನಾಂಕ, ಬೋನಸ್ ಮಾಹಿತಿ, ಪಾಲಿಸಿ ಸ್ಟೇಟಸ್, ಸಾಲ ಮರುಪಾವತಿ ಮಾಹಿತಿ, ಸಾಲದ ಅರ್ಹತಾ ಮಾಹಿತಿ, ಸಾಲದ ಬಡ್ಡಿದರ ಗಡುವು, ಪ್ರೀಮಿಯಂ ಪಾವತಿ ಪ್ರಮಾಣಪತ್ರ, ಯುಲಿಪ್ (ULIP)-ಸ್ಟೇಟ್ಮೆಂಟ್ ಆಫ್ ಯುನಿಟ್ಸ್, ಎಲ್‌ಐಸಿ ಸರ್ವೀಸಸ್ ಲಿಂಕ್ಸ್, ಅಪ್ಟ್ ಇನ್/ಅಪ್ಟ್ ಔಟ್ ಸರ್ವೀಸಸ್ ಪಡೆದುಕೊಳ್ಳಬಹುದು.

ನೋಂದಣಿ ಮಾಡಿಕೊಳ್ಳುವುದು ಹೀಗೆ:

- www.licindia.in ಭೇಟಿ ನೀಡಿ, ಆ ಬಳಿಕ "Customer Portal" ಆಯ್ಕೆ ಮಾಡಿ.

- 'New user' ಆಯ್ಕೆ ಮೇಲೆ ಕ್ಲಿಕ್ ಮಾಡಿ.

- ನಿಮ್ಮ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಆಯ್ಕೆ ಮಾಡಿ. ಆ ಬಳಿಕ ಮುಂದಿನ ಸ್ಕ್ರೀನ್ ನಲ್ಲಿ ಸಲ್ಲಿಕೆ ಮಾಡಿ.

- ಹೊಸದಾಗಿ ಸೃಷ್ಟಿಯಾದ ಯೂಸರ್ ಐಡಿ ಬಳಸಿಕೊಂಡು ಲಾಗ್ ಇನ್ ಆಗಿ. ಆ ಬಳಿಕ "Basic Services" ಅಡಿಯಲ್ಲಿ "Add Policy" ಆಯ್ಕೆ ಮಾಡಿ.

- ಈಗ ನಿಮ್ಮ ಉಳಿದೆಲ್ಲ ಪಾಲಿಸಿಗಳನ್ನು ನೋಂದಣಿ ಮಾಡಿ.

- ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಸೇರಿದಂತೆ ಮೂಲ ಮಾಹಿತಿಗಳನ್ನು ಪೋರ್ಟಲ್ ನಲ್ಲಿ ಭರ್ತಿ ಮಾಡಿ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags