Kannada News Now

1.8M Followers

PM Awas Yojana : 'ಪಿಎಂ ಆವಾಸ್ ಯೋಜನೆ' ಫಲಾನುಭವಿಗಳ ಪಟ್ಟಿ ಬಿಡುಗಡೆ ; ಲಿಸ್ಟ್'ನಲ್ಲಿ ನಿಮ್ಮ ಹೆಸರಿದ್ಯಾ? ಈ ರೀತಿ ಚೆಕ್ ಮಾಡಿ

04 Dec 2022.10:45 AM

ವದೆಹಲಿ : ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಸರ್ಕಾರವು ಮನೆ ನಿರ್ಮಿಸಲು ಬಡವರಿಗೆ ಸಹಾಯಧನ ನೀಡಲಿದೆ. ಅದ್ರಂತೆ, ಸಂಬಂಧಪಟ್ಟ ಬ್ಯಾಂಕ್ ಈ ಸಾಲಗಳ ಮೇಲೆ ನಿಮಗೆ ನಿಯಮಿತ EMI ವಿಧಿಸುತ್ತದೆ. ಆದ್ರೆ, ಸಬ್ಸಿಡಿ ಸಿಗುವುದಿಲ್ಲ.

ಹಲವು ಬಾರಿ ಒಂದೇ ನಿವೇಶನದಲ್ಲಿ ನಿರ್ಮಿಸಿರುವ ಎರಡು ಪ್ರತ್ಯೇಕ ಮನೆಗಳಲ್ಲಿ ಒಂದಕ್ಕೆ ಮಾತ್ರ ಸಹಾಯಧನ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅರ್ಜಿಯ ಸ್ಥಿತಿಯನ್ನ ಪರಿಶೀಲಿಸುವುದು ಬಹಳ ಮುಖ್ಯ.

ಸ್ಥಿತಿ ಪರಿಶೀಲಿಸುವುದು ಹೇಗೆ?
ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ನೀವು ಆನ್ಲೈನ್ನಲ್ಲಿ ಅಪ್ಲಿಕೇಶನ್ ಸ್ಥಿತಿಯನ್ನ ಪರಿಶೀಲಿಸಬಹುದು.
* ಮೊದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ.
* ಇಲ್ಲಿ 'ನಾಗರಿಕ ಮೌಲ್ಯಮಾಪನ' ಆಯ್ಕೆ ಲಭ್ಯವಿದ್ದು, ಅದರ ಮೇಲೆ .
* ಹೊಸ ಪುಟ ತೆರೆಯುತ್ತದೆ. ಅದರಲ್ಲಿ 'ಟ್ರ್ಯಾಕ್ ಯುವರ್ ಅಸೆಸ್ಮೆಂಟ್ ಸ್ಟೇಟಸ್' ಆಯ್ಕೆಯನ್ನ ಆರಿಸಿ. ಇದರ ಮೇಲೆ .
* ಇದರ ನಂತರ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ. ಸ್ಥಿತಿಯನ್ನು ಪರಿಶೀಲಿಸಲು ವಿನಂತಿಸಿದ ಮಾಹಿತಿಯನ್ನ ನಮೂದಿಸಿ.
* ಇದರ ನಂತರ ರಾಜ್ಯ, ಜಿಲ್ಲೆ, ನಗರವನ್ನ ಆಯ್ಕೆ ಮಾಡಿ. ನಿಮ್ಮ ಅಪ್ಲಿಕೇಶನ್ ಸ್ಥಿತಿಯು ನಿಮ್ಮ ಪರದೆಯ ಮೇಲೆ ಇರುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?
* ಮೊದಲು ಅಧಿಕೃತ ವೆಬ್ಸೈಟ್ pmaymis.gov.in ಗೆ ಹೋಗಿ
* 'ಸಿಟಿಜನ್ ಅಸೆಸ್ಮೆಂಟ್' ಮೇಲೆ .
* ಇಲ್ಲಿ ನೀವು ಅನೇಕ ಆಯ್ಕೆಗಳನ್ನು ನೋಡುತ್ತೀರಿ. ನಿಮಗೆ ಸೂಕ್ತವಾದದನ್ನ ಆರಿಸಿ.
* ಇದರ ನಂತ್ರ ನೀವು ಆಧಾರ್ ಸಂಖ್ಯೆಯನ್ನ ತುಂಬಿ ಮತ್ತು ಚೆಕ್ ಕ್ಲಿಕ್ ಮಾಡಬೇಕು.
* ಇದರ ನಂತರ ಆನ್ಲೈನ್ ಫಾರ್ಮ್ ತೆರೆಯುತ್ತದೆ.
* ಈ ನಮೂನೆಯಲ್ಲಿ ವಿನಂತಿಸಿದ ಮಾಹಿತಿಯನ್ನ ಭರ್ತಿ ಮಾಡಿ.
* ಅರ್ಜಿಯನ್ನ ಭರ್ತಿ ಮಾಡಿದ ನಂತರ ಸಂಪೂರ್ಣ ಮಾಹಿತಿಯನ್ನ ಮತ್ತೊಮ್ಮೆ ಓದಿರಿ, ಸರಿಯಾಗಿದ್ದರೆ ಸಲ್ಲಿಸಿ.
* ಸಲ್ಲಿಸಿದ ನಂತರ, ಅಪ್ಲಿಕೇಶನ್ ಸಂಖ್ಯೆಯನ್ನ ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಅದರ ಪ್ರಿಂಟ್ ಔಟ್ ತೆಗೆದು ಹತ್ತಿರ ಇಟ್ಟುಕೊಳ್ಳಿ.

ಈ ಯೋಜನೆಯಿಂದ ಯಾರು ಪ್ರಯೋಜನ ಪಡೆಯುತ್ತಾರೆ?
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮೂರು ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಯಾವುದೇ ಮನೆಯಿಲ್ಲದ ವ್ಯಕ್ತಿ ಇದನ್ನ ಪಡೆಯಬಹುದು. ಈ ಉದ್ದೇಶಕ್ಕಾಗಿ ರೂ.2.50 ಲಕ್ಷ ನೆರವು ನೀಡಲಾಗುವುದು. ಇದರಲ್ಲಿ ಮೂರು ಕಂತುಗಳಲ್ಲಿ ಹಣ ನೀಡಲಾಗುತ್ತದೆ. ಮೊದಲ ಕಂತಾಗಿ 50 ಸಾವಿರ ರೂಪಾಯಿ ಮತ್ತು ಎರಡನೇ ಕಂತು 1.50 ಲಕ್ಷ ಮತ್ತು ಮೂರನೇ ಕಂತು 50 ಸಾವಿರ ರೂಪಾಯಿ. ಒಟ್ಟು 2.50 ಲಕ್ಷ ರೂಪಾಯಿಯಲ್ಲಿ ರಾಜ್ಯ ಸರ್ಕಾರ 1 ಲಕ್ಷ ನೀಡಲಿದೆ. ಇದೇ ವೇಳೆ ಕೇಂದ್ರ ಸರ್ಕಾರ 1.50 ಲಕ್ಷ ಮಂಜೂರು ಮಾಡಲಿದೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags