Oneindia

1.1M Followers

ಶಿಕ್ಷಕರ ಆತಂಕ, ಸಚಿವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಪತ್ರ

16 Dec 2022.12:26 PM

ಬೆಂಗಳೂರು, ಡಿಸೆಂಬರ್ 16; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಗೆ ಪತ್ರವೊಂದನ್ನು ಬರೆದಿದೆ.

ಹೆಚ್ಚುವರಿ ಇರುವ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆ ಮಡುವಾಗ ಈ ಅಂಶಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಲಾಗಿದೆ.

2022-23ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯತೆ/ ಹೆಚ್ಚುವರಿ ಇರುವ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭಗಳಲ್ಲಿ ಪರಿಗಣಿಸಬೇಕಾದ ಅಂಶಗಳ ಎಂದು ವಿವರಣೆ ನೀಡಲಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೇಮಕಾತಿ; ಸ್ಪಷ್ಟನೆಗಳು

ಸರ್ಕಾರವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಹೆಚ್ಚುವರಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಬಗ್ಗೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಕೃಷಿ ಶಿಕ್ಷಣ ಪಠ್ಯದಲ್ಲಿ ನೈಸರ್ಗಿಕ ಕೃಷಿ ವಿಧಾನ ಸೇರ್ಪಡೆ ಶೀಘ್ರ

ಅಧಿಸೂಚನೆಯಲ್ಲಿನ ಕೆಲವು ನ್ಯೂನತೆಗಳಿಂದಾಗಿ ಶಿಕ್ಷಕರು ಆತಂಕಕ್ಕೆ ಒಳಗಾಗಿರುವುದನ್ನು ಗಮನಿಸಲಾಗಿದೆ. ಆದ್ದರಿಂದ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಹೆಚ್ಚುವರಿ ಹಾಗೂ ಮರು ಹೊಂದಾಣಿಕೆ ಪ್ರಕ್ರಿಯೆಯನ್ನು ನಡೆಸುವಂತೆ ಕೋರಲಾಗಿದೆ.

ಪದವಿ ಶಿಕ್ಷಣ: 3 ವರ್ಷವಲ್ಲ, 4 ವರ್ಷ ಕಡ್ಡಾಯ- ನಿಯಮ ಜಾರಿ ಯಾವಾಗ?

ಯಾವ-ಯಾವ ಅಂಶಗಳು

* ಸರ್ಕಾರದ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ವಿನಾಯಿತಿ ನೀಡಿರುವ ಮಾದರಿಯಲ್ಲಿ ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆ ಹಾಗೂ ಹೊಂದಾಣಿಕೆ ಪ್ರಕ್ರಿಯೆಯಲ್ಲಿ ವಿನಾಯಿತಿ ನೀಡಬೇಕು.

* ದೈಹಿಕ ಶಿಕ್ಷಕರು, ಆಂಗ್ಲ ಭಾಷೆ ಮತ್ತು ಹಿಂದಿ ಶಿಕ್ಷಕರನ್ನು ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಹೆಚ್ಚುವರಿ ಎಂದು ಪರಿಗಣಿಸಬಾರದು.

* ಪ್ರಾಥಮಿಕ ಶಾಲಾ ಕನ್ನಡ ಭಾಷಾ ಶಿಕ್ಷಕರಂತೆ ಹಿಂದಿ ಶಿಕ್ಷಕರು ಪಿಯುಸಿ ವಿದ್ಯಾರ್ಹತೆಯೊಂದಿಗೆ ಟಿಸಿಹೆಚ್/ ಡಿಇಡಿ ವಿದ್ಯಾರ್ಹತೆ ಪಡೆದು ಹೆಚ್ಚುವರಿಯಾಗಿ ಪಿಯುಸಿಗೆ ತತ್ಸಮಾನವಾದ ಹಿಂದಿ ಭಾಷಾ ಪ್ರಚಾರ ಸಭಾಗಳು ನಡೆಸುವ ಸರ್ಟಿಫಿಕೇಟ್ ಕೋರ್ಸ್ ಹೊಂದಿರುವ ಕಾರಣ ಹಿಂದಿ ಶಿಕ್ಷಕರೆಂದು ನೇಮಕಾತಿ ಮಾಡಲಾಗಿದ್ದು, ಇಂತಹ ಹಿಂದಿ ಶಿಕ್ಷಕರನ್ನು ಕನ್ನಡ ಶಿಕ್ಷಕರೆಂದೇ ಪರಿಗಣಿಸಿ ಹೆಚ್ಚುವರಿ ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು.

* ಹಿಂದಿ ಶಿಕ್ಷಕರ ಅವಶ್ಯಕತೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ (6-8 ತರಗತಿ) ಅವಶ್ಯವಿರುವುದರಿಂದ ಹಿಂದಿ ಶಿಕ್ಷಕರಿಗೆ ಹೆಚ್ಚುವರಿ ಪ್ರಕ್ರಿಯೆಯಿಂದ ವಿನಾಯಿತಿ ನೀಡುವುದು. ಹೆಚ್ಚುವರಿ ಪ್ರಕ್ರಿಯೆಗೆ ದಿನಾಂಕ 31/12/2021ರ ದಾಖಲಾತಿಯನ್ನು ಪರಿಗಣಿಸಿರುವುದನ್ನು ಮಾರ್ಪಡಿಸಿ ಪ್ರಸಕ್ತ ಸಾಲಿನ ಮಕ್ಕಳ ದಾಖಲಾತಿ ಅಂದರೆ 30/09/2022ರವರೆಗಿನ ದಾಖಲಾತಿಯನ್ನು ಪರಿಗಣಿಸುವುದು.

* ಅವಧಿ ಮುಗಿದಿರುವ ಸಿ. ಆರ್. ಪಿ/ ಬಿ. ಆರ್. ಪಿ. ಗಳಿಗೆ ಹೆಚ್ಚುವರಿ ಪ್ರಕ್ರಿಯೆ ಕೈಗೊಳ್ಳುವ ಪೂರ್ವದಲ್ಲೇ ಕೌನ್ಸಿಲಿಂಗ್ ನಡೆಸಿ ಸ್ಥಳ ನಿಯುಕ್ತಿಗೊಳಿಸುವುದು.

* ವಿಷಯವಾರು, ವೃಂದವಾರು ಹೆಚ್ಚುವರಿ ಪ್ರಕ್ರಿಯೆ ಕೈಗೊಳ್ಳುವ ಕ್ರಮವನ್ನು ಕೈಬಿಟ್ಟು ಶಾಲೆಯಲ್ಲಿ ಮಂಜೂರಾಗಿರುವ ಹುದ್ದೆ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳನ್ನು ಪರಿಗಣಿಸಿ ಮಕ್ಕಳು, ಶಿಕ್ಷಕರ ಅನುಪಾತದ ಆಧಾರದ ಮೇಲೆ ಮಂಜೂರಾದ ಹುದ್ದೆಗಳಿಗಿಂತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹೆಚ್ಚಾಗಿದ್ದರೆ ಮಾತ್ರ ಅಂತಹ ಹುದ್ದೆಗಳನ್ನು ಹೆಚ್ಚುವರಿ ಎಂದು ಪರಿಗಣಿಸಬೇಕು.

* ಹೆಚ್ಚುವರಿ ಪ್ರಕ್ರಿಯೆಯಲ್ಲಿ ಪತಿ-ಪತ್ನಿ ಪ್ರಕರಣಗಳನ್ನು ಪರಿಗಣಿಸುವುದು ಎಂದು ನಮೂದಿಸಲಾಗಿದೆ. ಆದರೆ, ಇ. ಇ. ಡಿ. ಎಸ್. (ಶಿಕ್ಷಕ ಮಿತ್ರ) ತಂತ್ರಾಂಶದಲ್ಲಿ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸುವುದು.

* ಹೆಚ್ಚುವರಿ ಪ್ರಕ್ರಿಯೆ ಪೂರ್ವದಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವುದರಿಂದ ಹೆಚ್ಚಿನ ಮಟ್ಟದಲ್ಲಿ ಖಾಲಿ ಹುದ್ದೆಗಳು ಲಭ್ಯವಾಗಲಿವೆ, ಇದರಿಂದ ಹೆಚ್ಚುವರಿ ಶಿಕ್ಷಕರಿಗೆ ಅನುಕೂಲವಾಗಲಿದೆ.

* ಶೈಕ್ಷಣಿಕ ಬೆಳವಣಿಗೆಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಪ್ರಕ್ರಿಯೆಗಳನ್ನು ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಕೈಗೊಳ್ಳುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

By Gururaj S Oneindia

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags