News18 ಕನ್ನಡ

398k Followers

CBI Recruitment 2023: ತಿಂಗಳಿಗೆ 40,000 ಸಂಬಳ-ಕೇಂದ್ರೀಯ ತನಿಖಾ ದಳದಲ್ಲಿ ಕೆಲಸ ಖಾಲಿ ಇದೆ

17 Dec 2022.7:19 PM

CBI Recruitment 2023: ಕೇಂದ್ರೀಯ ತನಿಖಾ ದಳ(Central Bureau of Investigation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಕನ್ಸಲ್ಟೆಂಟ್(Consultant) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅರ್ಜಿ ಸಲ್ಲಿಸಲು ಜನವರಿ 19, 2023 ಕೊನೆಯ ದಿನವಾಗಿದೆ(Last Date). ಕನ್ಸಲ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಹುದ್ದೆ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೇಂದ್ರೀಯ ತನಿಖಾ ದಳ
ಹುದ್ದೆಕನ್ಸಲ್ಟೆಂಟ್
ವೇತನಮಾಸಿಕ ₹ 40,000
ಉದ್ಯೋಗದ ಸ್ಥಳಬೆಂಗಳೂರು

ಅರ್ಹತೆ:
ಅಭ್ಯರ್ಥಿಗಳು ನಿವೃತ್ತ ಇನ್ಸ್​ಪೆಕ್ಟರ್/ ಡೆಪ್ಯುಟಿ ಎಸ್​​ಪಿ ಆಗಿರಬೇಕು. ಬೆಂಗಳೂರಿನ ವಿವಿಧ ಕೋರ್ಟ್​​ಗಳಲ್ಲಿ ಸಂಬಂಧಿತ ಕೆಲಸ ಮಾಡಲು 1 ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.

ಹಣಕಾಸು ಸಚಿವಾಲಯ ನೇಮಕಾತಿ- ಸೀನಿಯರ್ ಪ್ರೈವೇಟ್ ಸೆಕ್ರೆಟರಿ ಹುದ್ದೆಗೆ ಅರ್ಜಿ ಹಾಕಿ-1.50 ಲಕ್ಷ ಸಂಬಳ

ವೇತನ:
ಕೇಂದ್ರೀಯ ತನಿಖಾ ದಳ ನೇಮಕಾತಿ ಅಧಿಸೂಚನೆ ಪ್ರಕಾರ, ಕನ್ಸಲ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 40,000 ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 19/01/2023

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು.

ಶಾಖೆಯ ಮುಖ್ಯಸ್ಥರು
CBI, BS & FB, ನಂ. 36
ಬಳ್ಳಾರಿ ರಸ್ತೆ
ಗಂಗಾನಗರ
ಬೆಂಗಳೂರು-560032
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags