Kannada News Now

1.8M Followers

BREAKING NEWS: ಡಿ ಕೆ ಶಿವಕುಮಾರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ CBI ದಾಳಿ | CBI raids

19 Dec 2022.2:56 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಶನಲ್‌ ಎಜುಕೇಶನ್‌ ಫೌಂಡೇಶನ್‌ ಮೇಲೆ ದಾಳಿ ನಡೆದಿದೆ ಅಂತ ತಿಳಿದು ಬಂದಿದೆ.

ಸದ್ಯ ಡಿಕೆ ಶಿವಕುಮಾರ್‌ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗಹಿಸಿದ್ದಾರೆ.

ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಈ ಹಿಂದೆ ಕೂಡ ಡಿ ಕೆ ಶಿವಕುಮಾರ್‌ ಅವರ ಮನೆ ಮೇಲೆ ಇಡಿ, ಆದಾಯ ತೆರಿಗೆ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ಅವರನ್ನು ಸದ್ಯ ವಿಚಾರಣೆ ನಡೆಸುತ್ತಿದೆ. ಡಿಕೆ ಶಿವಕುಮಾರ್‌ ಅವರು ಸಂಸ್ಥೆಯ ಚೇರ್ಮನ್‌ ಆಗಿದ್ದು, ಅವರ ಮಗಳಾದ ಐಶ್ವರ್ಯ ಅವರು ಕಾರ್ಯದರ್ಶಿಯಾಗಿ ಆಗಿದ್ದಾರೆ. ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ದಾಳಿ ನಡೆದಿದೆ ಎನ್ನುವ ಮಾಹಿತಿ ಪ್ರಾಥಮಿಕ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಮಾಧ್ಯಮಗಳ ಜೊತೆಗೆ ಸುದ್ದಿಗಾರರ ಜೊತೆಗೆ ಕೊಪ್ಪಳದಲ್ಲಿ ಮಾತನಾಡುತ್ತ ಚುನಾವಣೆ ಹಿನ್ನಲೆಯಲ್ಲಿ ನನಗೆ ಸೇರಿದಂಥೆ ಹಲವರಿಗೆ ತೊಂದ್ರೆ ಕೊಡುತ್ತಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ದಾಳಿ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಡಿಕೆ ಶಿವಕುಮಾರ್‌ ಅವರು, ಇಂದು ದಾಳಿ ವೇಳೆಯಲ್ಲಿ ನಮ್ಮ ಟ್ರಸ್ಟಿಗಳನ್ನು ಭೇಟಿ ಮಾಡಿ, ಕೆಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನನ್ನ ವಕೀಲರಿಗೆ ಕೂಡ ನಾನು ನೀಡಿರುವ ಹಣಕ್ಕೆ ಸಂಬಂಧಪಟ್ಟಂತೆ ನೋಟಿಸ್‌ ನೀಡಿದ್ದಾರೆ. ಇದಲ್ಲದೇ ನಮ್ಮ ಊರಿಗೆ ತೆರಳಿ ಅಲ್ಲಿರುವ ಜಮೀನು ಹಾಗೂ ಮನೆಯನ್ನು ಸುತ್ತು ಹಾಕಿ ತಹಶಿಲ್ದಾರ್‌ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ನನ್ನ ವಿರುದ್ದ ಕೇಸ್‌ಗಳು ನಡೆಯುತ್ತಿದ್ದು, ಎಲ್ಲಾ ಕಡೆಯಿಂದ ನನಗೆ ತೊಂದ್ರೆ ನೀಡುತ್ತಿದ್ದಾರೆ ಅಂತ ಕಿಡಿಕಾರಿದರು. ಇದಲ್ಲದೇ ನನಗೆ ಯಾವುದೇ ಭಯವಿಲ್ಲ, ನಾನು ತಪ್ಪು ಮಾಡಿಲ್ಲ. ಹೆಚ್‌ ವಿಶ್ವನಾಥ್‌ ಬಗ್ಗೆ ಇತ್ತೀಚಿವೆ ಹಣಕಾಸಿನ ಬಗ್ಗೆ ರಾಜರೋಶವಾಗಿ ಹೇಳಿದ್ದರು ಕೂಡ ಯಾರು ಈ ಬಗ್ಗೆ ಮಾತನಾಡಿಲ್ಲ. ಇದಲ್ಲದೇ ವಿರೋಧಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮುಂದಾಗಿದ್ದು, ಈ ಬಗ್ಗೆ ನ್ಯಾಯಾಲಯ ಜನತೆಗಳ ಜೊತೆಗೆ ನಾವು ಹೋಗುತ್ತೆವೆ ಅಂತ ಹೇಳಿದರು.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags