Vistara News

43k Followers

Midday Meal | ಮೈ ಮೇಲೆ ಬಿಸಿ ಸಾಂಬಾರ್‌ ಬಿದ್ದು ಶಾಲಾ ಮಕ್ಕಳಿಗೆ ಸುಟ್ಟ ಗಾಯ

29 Dec 2022.12:06 PM

ಯಾದಗಿರಿ: ಇಲ್ಲಿನ ಸುರಪುರ ತಾಲೂಕಿನ ಎಮ್.ಬೊಮ್ಮನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮೇಲೆ ಬಿಸಿ ಸಾಂಬಾರ್‌ (Midday Meal) ಬಿದ್ದಿದೆ. ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ.

ಬಿಸಿ ಸಾಂಬಾರ್‌ ಮೈಮೇಲೆ ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳಿಗೆ ಸುಟ್ಟ ಗಾಯಗಳಾಗಿವೆ.

ಮಕ್ಕಳನ್ನು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಅಪಾಯದಿಂದ ಪಾರಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಶಾಲಾ ಸಿಬ್ಬಂದಿ ನಿರ್ಲಕ್ಷ್ಯತನಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಅಡುಗೆ ಸಿಬ್ಬಂದಿ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

| Coronavirus | ಬೆಂಗಳೂರಿನಲ್ಲಿ ಶುರುವಾದ ಕೊರೊನಾ‌ ಆತಂಕ‌, ಲಸಿಕೆಗೆ ಹೆಚ್ಚಿದ ಬೇಡಿಕೆ

ಯಾದಗಿರಿ: ಎಐಬಿಪಿ (Accelerated Irrigation Benefit Program) ಯೋಜನೆಯ ನಿಬಂಧನೆಯನ್ನು ಬದಲಾಯಿಸುವ ಮೂಲಕ ಕರ್ನಾಟಕಕ್ಕೆ ಲಭಿಸಬೇಕಿದ್ದ ನೀರಾವರಿ ಯೋಜನೆಯನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ತಪ್ಪಿಸಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಯಾದಗಿರಿಯ ಕೋಡೆಕಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜಾ ವೆಂಕಟಪ್ಪ ನಾಯಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ನಾಡು. ಪ್ರಧಾನಿ ನರೇಂದ್ರ ಮೋದಿಯವರು, ಒಂದು ಹನಿ ನೀರಿಗೆ ಅತಿ ಹೆಚ್ಚು ಬೆಳೆ ಬೆಳೆಯಬೇಕು ಎಂಬ ಕನಸು ಕಂಡಿದ್ದರು. 2011ರಿಂದ ಬಿಜೆಪಿ ಸರ್ಕಾರದ ಈ ಯೋಜನೆ ಆರಂಭವಾಗಿತ್ತು. ಯುಪಿಎ ಸರ್ಕಾರ, AIBP ಕಾನೂನನ್ನು ಬದಲಾಯಿಸಿತು. ಆದ್ಧರಿಂದ ಕರ್ನಾಟಕಕ್ಕೆ ಈ ಯೋಜನೆ ಬರಲು ತಡವಾಯಿತು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಐಬಿಪಿಯಲ್ಲಿ ಮತ್ತೆ ಕರ್ನಾಟಕವನ್ನು ಸೇರಿಸಿದ್ದರಿಂದ ಅನುಕೂಲವಾಯಿತು. ಇದೆಲ್ಲದರ ಶ್ರೇಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ನಮ್ಮ ರಾಜ್ಯಕ್ಕೆ 1,011 ಕೋಟಿ ರೂ. ಹಣವನ್ನು ಕೇಂದ್ರದಿಂದ ನೀಡಲಾಗಿದೆ. 60:40 ಅನುಪಾತದಲ್ಲಿ ಈ ಹಣ ಬಿಡುಗಡೆ ಆಯಿತು. 4.5 ಲಕ್ಷವಿರುವ ಎನ್‌ಎಲ್‌ಬಿಸಿ ಯೋಜನೆಯ ಕೊನೆಯ ಭಾಗಕ್ಕೆ ನೀರು ಮುಟ್ಟುತ್ತಿರಲಿಲ್ಲ. ಈಗ ಎಲ್ಲ ಶಾಖಾ ಕಾಲುವೆಗಳಿಗೆ ನೀರು ಮುಟ್ಟಿಸುವ ಕೆಲಸ ಆಗುತ್ತಿದೆ. ಇದರಿಂದಾಗಿ ನಮ್ಮ ನಾಲೆಗಳಲ್ಲಿ ಶೇ.20 ಹೆಚ್ಚು ನೀರನ್ನು ಕೊಂಡೊಯ್ಯಲು ಸಾಧ್ಯವಾಗಿದೆ.

ಸ್ಕಾಡಾ ಯೋಜನೆಯ ಕಾರಣಕ್ಕೆ ನೀರಿನ ಉಳಿತಾಯವಾಗುತ್ತದೆ ಹಾಗೂ ಎಷ್ಟು ನೀರು ಹೋಗುತ್ತದೆ ಎಂಬ ಲೆಕ್ಕವೂ ಸಿಗುತ್ತದೆ. ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೆ ನೀರು ಸಿಗುತ್ತದೆ. ಈ ಯೋಜನೆ ಏಷ್ಯಾದಲ್ಲೆ ಅತಿ ದೊಡ್ಡ ಸ್ಕಾಡಾ ಇರುವ ನಾರಾಯಣಪುರ ಎಡದಂಡೆ ಕಾಲುವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ನಾಡಿಗೆ ಪ್ರಧಾನಿ ಸಮರ್ಪಣೆ ಮಾಡಿದ್ದಾರೆ. ನೀರಿನ ನಿರ್ವಹಣೆ, ಜಲಜೀವನ್‌ ಮಿಷನ್‌ ಸೇರಿ ಅನೇಕ ಯೋಜನೆಗಳು ಕಾರ್ಯಗತವಾಗಿವೆ ಎಂದರು.

ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಈ ದೇಶದ ಬಡವರ ಕಲ್ಯಾಣಕ್ಕಾಗಿ, ದೀಣ ದಲಿತರ ಕಲ್ಯಾಣಕ್ಕಾಗಿ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ, ಎಲ್ಲ ಸಮುದಾಯಗಳನ್ನೂ ಏಳಿಗೆ ಮಾಡುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದಾರೆ. ಭ್ರಷ್ಟಾಚಾರ ಮುಕ್ತವಾದ ಆಡಳಿತವನ್ನು ನೀಡುತ್ತಿದ್ದಾರೆ ಎಂದರು.

| Modi In Karnataka | ನನ್ನನ್ನು ಕಂಡರೆ ನರೇಂದ್ರ ಮೋದಿಗೆ ಭಯ ಎಂದ ಮಾಜಿ ಸಿಎಂ ಸಿದ್ದರಾಮಯ್ಯ!

ರಾಮನಗರ: ಜಿಲ್ಲಾ ಕಾರಾಗೃಹದಲ್ಲಿ ಹುಟ್ಟುಹಬ್ಬ ಆಚರಣೆ (Birthday Celebration) ಹಾಗೂ ಅನಧಿಕೃತವಾಗಿ ಮೊಬೈಲ್‌ ಬಳಸಿದ್ದೇ ರೌಡಿಶೀಟರ್ ಕಿರಣ್ ಅಲಿಯಾಸ್ ತಮಟೆಗೆ ಕಂಟಕವಾಗಿದ್ದು, ಬುಧವಾರ (ಜ.೧೮) ಬಿಡುಗಡೆಯಾದರೂ ಮತ್ತೆ ಬಂಧನಕ್ಕೊಳಗಾಗಿದ್ದಾನೆ.

ಜಿಲ್ಲಾ ಕಾರಾಗೃಹದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಫೋಟೊ ಹಾಗೂ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಅನಧಿಕೃತವಾಗಿ ಮೊಬೈಲ್‌ ಬಳಕೆ ಮಾಡಿದ್ದರಿಂದ ಕಿರಣ್‌ ಮತ್ತು ಆತನ ನಾಲ್ವರು ಸಹಚರರ ಮೇಲೆ ಬುಧವಾರ (ಜ.೧೮) ಎಫ್‌ಐಆರ್ ದಾಖಲಿಸಲಾಗಿತ್ತು. ‌ಕೊಲೆ ಪ್ರಕರಣ ಹಾಗೂ ಡಕಾಯಿತಿ ಪ್ರಕರಣದಲ್ಲಿ ಕಿರಣ್‌ ಬಂಧಿತನಾಗಿದ್ದ. ಇದರ ಶಿಕ್ಷೆ ಅವಧಿ ಮುಗಿದಿತ್ತು.

ಬುಧವಾರ ಸಂಜೆ ಕಿರಣ್‌ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಆತನನ್ನು ಜೈಲಿನ ಎದುರೇ ರಾಮನಗರ ಟೌನ್‌ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯಲಾಗಿದೆ.

| Actress Prema | ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಲ್ಲಿ ಬೇಡಿಕೊಂಡ ನಟಿ ಪ್ರೇಮಾ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ೨ಎ ಅಡಿಯೇ ಮೀಸಲಾತಿ (Panchamasali reservation) ನೀಡಬೇಕು ಎಂದು ಆಗ್ರಹಿಸಿ ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡಿರುವ ಎರಡನೇ ಸುತ್ತಿನ ಪ್ರತಿಭಟನೆ ಗುರುವಾರ ಆರನೇ ದಿನಕ್ಕೆ ಕಾಲಿಟ್ಟಿದೆ.

ಈ ನಡುವೆ, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಜ್ಯ ಸರ್ಕಾರವು ತಮಗೆ ಮೀಸಲಾತಿ ಒದಗಿಸುವ ವಿಚಾರದಲ್ಲಿ ಮೀನ ಮೇಷ ಎಣಿಸುತ್ತಿದೆ ಮತ್ತು ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಜನವರಿ ೧೬ರಂದು ಅವರು ಮೋದಿ ಅವರಲ್ಲದೆ, ಬಿಜೆಪಿಯ ಹಿರಿಯ ನಾಯಕರಾದ ಅಮಿತ್‌ ಶಾ ಮತ್ತು ಜೆ.ಡಿ. ನಡ್ಡಾ ಅವರಿಗೆ ಪತ್ರ ಬರೆದಿದೆ.

ಈ ವಿಚಾರವನ್ನು ಸ್ವತಃ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, ರಾಜ್ಯ ಸರ್ಕಾರ ಸತತವಾಗಿ ನಮಗೆ ಮೋಸ ಮಾಡುತ್ತಿದೆ. ನಮಗೆ ನರೇಂದ್ರ ಮೋದಿಯವರ ಮೇಲೆ ನಂಬಿಕೆಯಿದೆ. ಹೀಗಾಗಿ ಪ್ರಧಾನಿಗಳಿಗೆ ಪತ್ರ ಬರೆದು ನಮ್ಮ ಬೇಡಿಕೆಯನ್ನು ತಿಳಿಸಿದ್ದೇವೆʼʼ ಎಂದು ಹೇಳಿದರು.

ಸ್ವಾಮೀಜಿಯವರು ಪತ್ರದಲ್ಲಿ ಉಲ್ಲೇಖಿಸಿರುವ ಹತ್ತು ವಿಚಾರಗಳು
೧. ಲಿಂಗಾಯತ ಪಂಚಮಸಾಲಿ ಸಮಾಜ ೨ಎ ಮೀಸಲಾತಿಗಾಗಿ ನಾವು ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಹಲವು ಬಾರಿ ನಮಗೆ ರಾಜ್ಯ ಸರ್ಕಾರ ಮೋಸ ಮಾಡಿದೆ.

೨. ನಮ್ಮ ಸಮುದಾಯ ಯಡಿಯೂರಪ್ಪನವರಿಗೆ ಬೆಂಬಲ ನೀಡಿತು. ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸಿದ್ದೇವೆ.

೩. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದೆ ಇದ್ದರೆ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

೪. ನಾವು ಕಳೆದ ಬಾರಿ ಬಿಜೆಪಿಗೆ ಬೆಂಬಲ ನೀಡಿದ್ದೆವು. ಆದರೆ ಈ ಬಾರಿಯ ಚುನಾವಣೆಯಲ್ಲಿ ನಾವು ಯಾರಿಗೆ ಬೆಂಬಲ‌ ನೀಡಬೇಕು ಎಂದು ಕಾಲ ಬಂದಾಗ ನಿರ್ಧಾರ ಮಾಡುತ್ತೇವೆ.

೫. ಪಂಚಮಸಾಲಿ ಸಮುದಾಯಕ್ಕೆ ನೀವು ಮೀಸಲಾತಿ ಕಲ್ಪಿಸಿಲ್ಲ ಅಂದರೆ ನಮ್ಮ ಹೋರಾಟ ತೀವ್ರಗೊಳ್ಳಲಿದೆ.

೬. ನಾವು ಇಷ್ಟೊಂದು ಹೋರಾಟ ಮಾಡಿದರೂ ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ಮೇಲೆ ನಮ್ಮ ಸಮುದಾಯ ವಿಶ್ವಾಸ ಕಳೆದುಕೊಂಡಿದೆ.

೭. ಇಷ್ಟೆಲ್ಲ ಘಟನೆಗಳ ಆಚೆಗೂ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆಯಿಟ್ಟಿದ್ದೇವೆ. ಅವರು ನ್ಯಾಯ ಕೊಡಿಸುವ ಭರವಸೆ ಇದೆ.

೮. ಈ ಪತ್ರದ ಮೂಲಕ ನಾವು‌ ನಮ್ಮ ಸಮುದಾಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ನೀವು ಕೂಡಲೇ ಇದಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡುತ್ತೇವೆ.

೯. ಮೀಸಲಾತಿ ವಿಚಾರವಾಗಿ ತ್ವರಿತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ನೀವು ಸೂಚನೆ ನೀಡುವಂತೆ ಕೇಳಿಕೊಳ್ಳುತ್ತೇವೆ.

೧೦. ರಾಜ್ಯದ ಎಲ್ಲ ೨೨೪‌ ವಿಧಾನಸಭಾ ಕ್ಷೇತ್ರಕ್ಕೆ ಹೋಗಿ ಯಾರಿಗೆ ಬೆಂಬಲ ಕೊಡಬೇಕು ಎಂದು ಚರ್ಚೆ ಮಾಡುತ್ತೇವೆ.

ಪತ್ರದ ಮೂಲಕ ಸ್ವಾಮೀಜಿ ನೀಡಿದ ಎಚ್ಚರಿಕೆ ಸಂದೇಶ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಸ್ವಾಮೀಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ʻʻನಮ್ಮ ಸಮುದಾಯವನ್ನು ಕಡೆಗಣಿಸಿದರೆ ನಾವು‌ ನಿಮ್ಮನ್ನು ಚುನಾವಣೆಯಲ್ಲಿ ಕಡೆಗಣಿಸುತ್ತೇವೆ. ಚುನಾವಣೆಯಲ್ಲಿ ನಮ್ಮ ಸಮುದಾಯ ನಿಮಗೆ ಉತ್ತರ ನೀಡುತ್ತದೆʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೂಡಲೇ ನಮ್ಮ ಬೇಡಿಕೆ ಈಡೇರಿಸಿ, ಇಲ್ಲ ನಮ್ಮ ದಾರಿ ನಾವು‌ ನೋಡಿಕೊಳ್ಳುತ್ತೇವೆ ಎಂದಿರುವ ಸ್ವಾಮೀಜಿ ಕೆಲವು ನಾಯಕರು ನಮ್ಮ ಸಮುದಾಯಕ್ಕೆ ಮೀಸಲಾತಿಯನ್ನು ತಪ್ಪಿಸುತ್ತಿದ್ದಾರೆ. ಅವರೆಲ್ಲರ ಹೆಸರುಗಳನ್ನು ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾಗಿ ಸ್ವಾಮೀಜಿ ತಿಳಿಸಿದ್ದಾರೆ.

| Panchamasali reservation | ಸ್ವಾಮೀಜಿಗಳು ವಿಷಮ ಪರಿಸ್ಥಿತಿ ನಿರ್ಮಿಸಬಾರದು ಎಂದ ಬೊಮ್ಮಾಯಿ; ಪಕ್ಷ ವಿರೋಧಿಗಳ ಬಗ್ಗೆಯೂ ಕ್ರಮ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vistara News

#Hashtags