ಉದಯವಾಣಿ

1.4M Followers

ಟಿಜಿಟಿ ಶಿಕ್ಷಕರ ಹೆಚ್ಚುವರಿಯಾಗಿ ಗುರುತಿಸಲು ಸಮ್ಮತಿಸಿದ ಸರಕಾರ

02 Jan 2023.06:35 AM

ಹುಬ್ಬಳ್ಳಿ: ರಾಜ್ಯ ಸರಕಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಮರು ಹೊಂದಾಣಿಕೆ ಮತ್ತು ವರ್ಗಾವಣೆ ಪ್ರಕ್ರಿಯೆ ಡಿ.28ರಿಂದಲೇ ಪ್ರಾರಂಭಿಸಿದ್ದು, ಜ.2ರಿಂದ ಸಾಮಾನ್ಯ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ ಟಿಜಿಟಿ ಶಿಕ್ಷಕರನ್ನು ಹೆಚ್ಚುವರಿಯಾಗಿ ಗುರುತಿಸಲಾಗಿದೆ.

2021, ಡಿ.31ರಿಂದ 8ನೇ ತರಗತಿಯಲ್ಲಿ ಶೂನ್ಯ ದಾಖಲಾತಿ ಇರುವ ಹಾಗೂ ಈಗಾಗಲೇ 8ನೇ ತರಗತಿಯಲ್ಲಿ ಗಣಿತ ಪದವೀಧರ ಶಿಕ್ಷಕರಿರುವ(ಜಿಪಿಟಿ) ಶಾಲೆಯ ಪ್ರೌಢಶಾಲಾ ವೃಂದದ ಗಣಿತ(ಟಿಜಿಟಿ) ಶಿಕ್ಷಕರನ್ನು ಹೆಚ್ಚುವರಿಯಾಗಿ ಗುರುತಿಸಿ ಅವರನ್ನು ಅವಶ್ಯವಿರುವ ಪ್ರೌಢಶಾಲೆಗೆ ಮರು ಹೊಂದಾಣಿಕೆ ಮಾಡಲು ವರ್ಗಾವಣೆ ಪ್ರಕ್ರಿಯೆಯಲ್ಲಿ ಸರಕಾರ ಗುರುತಿಸಿದೆ.

ಅದೇ ರೀತಿ ಕೆಲ ದಿನಗಳ ಹಿಂದೆ ಶಿಕ್ಷಣ ಇಲಾಖೆ ಆಯುಕ್ತರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ವೀಡಿಯೋ ಸಂವಾದದ ಮೂಲಕ ಸಭೆ ನಡೆಸಿದ್ದು, ಖಾಲಿಯಿರುವ 900ಕ್ಕೂ ಹೆಚ್ಚು ಪಿಸಿಎಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೇ ಆ ಜಾಗದಲ್ಲಿ ಟಿಜಿಟಿ ಶಿಕ್ಷಕರನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags