News18 ಕನ್ನಡ

400k Followers

Raichur: ಶಾಲೆ ಬಿಟ್ಟು ನಿತ್ಯ ಬಾರ್ ಕದ ತಟ್ಟುತ್ತಿರುವ ಶಿಕ್ಷಕರು! ಇದೆಂಥಾ ವಿಪರ್ಯಾಸ

23 Dec 2022.11:08 AM

ಶಿಕ್ಷಕರು ಎಂದರೆ ವಿದ್ಯಾರ್ಥಿಗಳಿಗೆ (Students) ಮಾದರಿಯಾಗಿರಬೇಕು. ಇವರಂತೆ ನಾನೂ ಕೂಡ ಆಗ್ಬೇಕು ಅಂತ ಅನಿಸುವ ಹಾಗಿರಬೇಕು. ಶಿಕ್ಷಕರು (Teachers) ಯಾವಾಗಲೂ ವಿದ್ಯಾರ್ಥಿಗಳ ಜೀವನ ರೂಪಿಸುವ ಶಕ್ತಿಯಾಗಿರಬೇಕು. ಬದಲಾಗಿ ವಿದ್ಯಾರ್ಥಿಗಳ ಹಾದಿ ತಪ್ಪಿಸಿ ಅವರ ಭವಿಷ್ಯವನ್ನು (Future) ಹಾಳು ಮಾಡುವಂತಿರಬಾರದು. ಆದರೆ ಇಲ್ಲಿ ನಡೆದ ಒಂದು ಘಟನೆ (Insident) ನೋಡಿದರೆ ಇಂಥಾ ಶಿಕ್ಷಕರೂ ಇರ್ತಾರಾ ಅನಿಸಿಬಿಡುತ್ತದೆ.

ಶಾಲೆಗೆ ಚಕ್ಕರ್ ಕುಡಿತಕ್ಕೆ ಹಾಜರ್
ಶಾಲೆಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ ಆದರೆ ಪಾಠ ಮಾಡುವ ಶಿಕ್ಷಕರು ನಾಪತ್ತೆ. ಪಾಠ ಮಾಡಲು ಸಮಕ್ಕೆ ಸರಿಯಾಗಿ ಶಿಕ್ಷಕರು ತರಗತಿಗೆ ಬರುತ್ತಿಲ್ಲ. ಹಾಗಾದ್ರೆ ಶಿಕ್ಷಕರು ಏನ್​ ಮಾಡ್ತಿದ್ದಾರೆ? ಎಲ್ಲಿಗೆ ಹೋಗ್ತಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಏನಂದ್ರೆ ಇವರು ಶಾಲೆಯಲ್ಲೇ ಕುಡಿಯಲು ಆರಂಭಿಸಿದ್ದಾರಂತೆ. ಇದು ಯಾರೋ ವಿದ್ಯಾರ್ಥಿಗಳು ಮಾಡುತ್ತಿರುವ ಕೆಲಸವಲ್ಲ ಶಿಕ್ಷಕರೇ ಮಾಡುತ್ತಿರುವ ಕೆಲಸ.

ಅದರಲ್ಲೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕರು ಯಾವುದೇ ಕಾರಣಕ್ಕೂ ಶಾಲೆಯಲ್ಲಾಗಲಿ ಸಮಾಜದಲ್ಲಾಗಲಿ ನೆಗಟಿವ್​ ಜೀವನ ಶೈಲಿಯನ್ನು ತೋರಿಸಿಕೊಳ್ಳಬಾರದು. ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲಾ ಶಿಕ್ಷಣದ ಅವಧೀಯಲ್ಲಿ ಜೀವನಕ್ಕೆ ತೆರೆದುಕೊಳ್ಳುತ್ತಿರುತ್ತಾರೆ. ಆ ಸಮಯದಲ್ಲಿ ಅವರ ಒಲವು ಯಾವ ಕಡೆ ಹೋಗುತ್ತದೆಯೋ ಅವರು ಆರೀತಿಯ ಜೀವನವನ್ನು ಬಿಂಬಿಸಿಕೊಳ್ಳುತ್ತಾರೆ.

ಪ್ರೌಢಶಾಲಾ ಶಿಕ್ಷಕರು ಮಾಡುತ್ತಿರುವ ಕೃತ್ಯದಿಂದ ಪಾಲಕರು ಗರಂ ಆಗಿದ್ದಾರೆ. ವಿದ್ಯೆ ಕಲಿಸಬೇಕಾದ ಗುರುಗಳ ಕೈಯಲ್ಲಿ ಶಾಲಾ ಸಮಯದಲ್ಲಿ ಮದ್ಯದ ಗ್ಲಾಸ್ ಕಂಡು ಗ್ರಾಮಸ್ಥರು ಕೋಪಗೊಂಡಿದ್ದಾರೆ. ಶಾಲೆಯ ಸಮಯದ್ದೇ ಚಿಕನ್, ಮಟನ್, ಸವಿದು ಫುಲ್ ಬಿಂದಾಸ್‌ ಮಜಾ ಮಾಡುತ್ತಿರುವ ಘಟನೆ ನಡೆದಿದೆ.

ಈ ಘಟನೆ ಬೆಳಕಿಗೆ ಬಂದದ್ದು ಹೇಗೆ?
ಶಾಲೆಯ ಅವಧಿಯಲ್ಲಿ ಮಕ್ಕಳನ್ನ ಮನೆಗೆ ಕಳುಹಿಸಿ ಕುಡಿದು ತಿಂದು ಮಜಾ ಮಾಡುತ್ತಿದ್ದಾಗ, ಈ ಸಮಯದಲ್ಲಿ ಮಕ್ಕಳು ಯಾಕೆ ಮನೆಗೆ ಬಂದಿದ್ದಾರೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಪಾಲಕರಿಗೆ ಬರುವುದು ಸಹಜ. ಮಕ್ಕಳನ್ನು ಯಾಕೆ ಈ ಸಮಯದಲ್ಲಿ ಮನೆಗೆ ಬಂದಿದ್ದೀರಿ ಎಂದು ವಿಚಾರಿಸಿದಾಗ ಈಗ ಕ್ಲಾಸ್​ ಇಲ್ಲ ಎಂಬ ಉತ್ತರ ಕೇಳಿಬರುತ್ತಿತ್ತು.


ಪಾಲಕರು ಸೆರೆ ಹಿಡಿದ ದೃಷ್ಯ



ರಾಯಚೂರು ಜಿಲ್ಲೆಯ ಹಟ್ಟಿ ಪ್ರೌಢಶಾಲಾ ಶಿಕ್ಷಕರ ದುರ್ವರ್ತನೆ
ಮದ್ಯಾಹ್ನದ ತರಗತಿಗಳನ್ನ ಬಂಕ್ ಮಾಡಿ, ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಿದ ಶಿಕ್ಷಕರನ್ನು ವಿಚಾರಿಸಲು ಹೋದಾಗ ಶಿಕ್ಷಕರು ಶಾಲೆಯಲ್ಲಿ ಇರಲೇ ಇಲ್ಲ. ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಿ ನೇರವಾಗಿ ಟೀಚರ್ಸ್ ಬಾರ್ ಸೇರಿದ್ದರು. ಶಿಕ್ಷಕರ ಈ ರೀತಿಯ ವರ್ತನೆಯನ್ನು ಗಮನಿಸಿದ ಪಾಲಕರು ಶಿಕ್ಷಕರ ನಡತೆಗೆ ಬೇಸತ್ತು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಶಾಲೆಯ ತರಗತಿ ಕೊಠಡಿಗಳಲ್ಲೂ ಮೊಬೈಲ್ ನಲ್ಲಿ ಜಿಪಿಎಸ್ ಸಮೇತ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಶಾಲೆ ಬಿಟ್ಟು ನಿತ್ಯ ಬಾರ್​ಗೆ ತೆರಳಿ ಕುಡಿಯುತ್ತಿದ್ದರು ಎಂದು ತಿಳಿದು ಬಂದಿದೆ. 3.42 ನಿಮಿಷಕ್ಕೆ ಶಾಲೆ ಬಿಟ್ಟು ಬಾರ್ ಹೊಕ್ಕಾಗ ಪೋಷಕರು ತೆಗೆದ ಫೋಟೋದಲ್ಲಿ ಸಮಯ ಮೆನ್ಷನ್ ಆಗಿದೆ.

ಯಾರಿಗೂ ಹೆದರದೆ ಕುಡಿಯಲು ಕುಳಿತ ಶಿಕ್ಷಕ ವೃಂದ
ಯಾರು ಬಂದರೂ ನಾವು ಹೆದರೋದಿಲ್ಲ ಎಂಬ ಗತ್ತಿನಲ್ಲಿ ಶಿಕ್ಷಕರೆಲ್ಲರೂ ಗುಂಪಿನಲ್ಲಿ ಕುಳಿತು ಮಧ್ಯ ಸೇವನೆ ಮಾಡುತ್ತಿದ್ದಾಗ ಪೋಷಕರು ಆ ದೃಷ್ಯವನ್ನು ತಮ್ಮ ಮೊಬೈಲ್​​ಗಳಲ್ಲಿ ಸೆರೆ ಹಿಡಿದಿದ್ದಾರೆ. ಹಟ್ಟಿ ಪ್ರೌಢ ಶಾಲಾ ಮುಖ್ಯಗುರುಗಳು ಮುರಳಿಧರ ರಾವ್, ದೈ.ಶಿ ಚನ್ನಪ್ಪ ರಾಠೋಡ್, ಲಿಂಗಪ್ಪ ಪೂಜಾರ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಇವಿಷ್ಟು ಶಿಕ್ಷಕರೂ ಸಹ ಕುಡಿತದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags