News18 ಕನ್ನಡ

398k Followers

Scholarship: ವಿದ್ಯಾರ್ಥಿನಿಯರಿಗೆ ಸಿಗಲಿದೆ 35 ಸಾವಿರ ಸ್ಕಾಲರ್​ ಶಿಪ್​! ನೀವೂ ಅಪ್ಲೈ ಮಾಡಿ

24 Dec 2022.11:30 AM

ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಹಲವು ಸಂಸ್ಥೆಗಳು ಧನ ಸಹಾಯ ಮಾಡುತ್ತವೆ ಅದೇ ರೀತಿ ಈ ಸ್ಕಾಲರ್​ ಶಿಪ್​ ಕೂಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ನೀಡಲಾಗುತ್ತಿದೆ. ಹಿಂದುಳಿದ ರಾಜ್ಯಗಳಲ್ಲಿ ಮತ್ತು ಹಿಂದುಳಿದ ಹಿನ್ನಲೆಯಲ್ಲಿ ಉನ್ನತ ಶಿಕ್ಷಣವನ್ನು(Higher Education) ಪಡೆಯುತ್ತಿರುವ ಮಹಿಳಾ ಮತ್ತು ಪುರುಷ ವಿದ್ಯಾರ್ಥಿಗಳ (Students) ಅಂಕಿಅಂಶಗಳಲ್ಲಿ ಹೆಚ್ಚು ಅಂತರವಿದೆ. ಈ ಅಂತರವನ್ನು ಹೋಗಲಾಡಿಸುವ ಸಲುವಾಗಿ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್ (Scholarship) 2023 ಅನ್ನು ಪ್ರಸ್ತುತಪಡಿಸಲಾಗಿದೆ. ವಿಶೇಷವಾಗಿ ಮಹಿಳಾ ವಿದ್ಯಾರ್ಥಿಗಳಿಗೆ ಲಭ್ಯವಿರುವ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಅರ್ಹತೆಯ ಮಾನದಂಡ
1. ಅರ್ಜಿದಾರರು 12 ನೇ ತರಗತಿಯಲ್ಲಿ 50% ಅಂಕಗಳನ್ನು ಗಳಿಸಿರಬೇಕು
2. ಅರ್ಜಿದಾರರು ಮಹಿಳೆಯಾಗಿರಬೇಕು
3. ಅರ್ಜಿದಾರರು ಪದವಿಯಲ್ಲಿ 50% ಅಂಕಗಳನ್ನು ಗಳಿಸಿರಬೇಕು
4. ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು
5. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 6 ಲಕ್ಷಕ್ಕಿಂತ ಕಡಿಮೆಯಿರಬೇಕು

ಯಾವ ಕೋರ್ಸ್‌ ಮಾಡುತ್ತಿರುವವರಿಗೆ ಲಭ್ಯವಿದೆ
MA ಮಾಸ್ಟರ್ಸ್ ಆಫ್ ಆರ್ಟ್ಸ್
M.Sc ವಿಜ್ಞಾನದ ಸ್ನಾತಕೋತ್ತರ
ಎಂ.ಕಾಂ ಮಾಸ್ಟರ್ಸ್ ಆಫ್ ಕಾಮರ್ಸ್

Education: ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಾಲಿಬಾನ್​ ಅಡ್ಡಿ, ನಿಜಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ

ವಿದ್ಯಾರ್ಥಿವೇತನದ ಪ್ರಯೋಜನಗಳು
ರೂಪಾಯಿ 35000. ಧನ ಸಹಾಯವನ್ನು ವಿದ್ಯಾರ್ಥಿನಿಯರು ಇದರಿಂದ ಪಡೆದುಕೊಳ್ಳಲಿದ್ದಾರೆ.

ಅವಶ್ಯಕ ದಾಖಲೆಗಳು
1. ಅರ್ಜಿದಾರರ ಫೋಟೋ
2. ಗುರುತಿನ ಆಧಾರ
3. ವಿಳಾಸದ ಪುರಾವೆ
4. 10ನೇ, 12ನೇ, ಮತ್ತು ಪದವಿ ಅಂಕಪಟ್ಟಿ
5. ಹಿಂದಿನ ಶೈಕ್ಷಣಿಕ ಅಂಕ ಪಟ್ಟಿ
6. ಆದಾಯ ಪ್ರಮಾಣಪತ್ರ, ಐಟಿಆರ್, ಸಂಬಳ ಪ್ರಮಾಣಪತ್ರ, ಫಾರ್ಮ್ 16
7. ವಿದ್ಯಾರ್ಥಿ ಬ್ಯಾಂಕ್ ಪಾಸ್ಬುಕ್
8. ಪ್ರಸ್ತುತ ವರ್ಷದ ಕಾಲೇಜು ಶುಲ್ಕ ರಸೀದಿ ಶುಲ್ಕ ಇನ್ನಿತರ ಮಾಹಿತಿ ನೀಡಬೇಕು

ಅರ್ಜಿ ಸಲ್ಲಿಸುವುದು ಹೇಗೆ?
1. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
2. ಇಲ್ಲಿ ಕ್ಲಿಕ್ ಮಾಡಿ ನೀವು ಅರ್ಜಿ ಸಲ್ಲಿಸಬಹುದು.
3. ಕ್ಲಿಕ್ ಮಾಡಿದ ನಂತರ ಮುಖ ಪುಟ ತೆರೆಯುತ್ತದೆ
4. ಅಗತ್ಯ ದಾಖಲೆಗಳನ್ನು ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ.
6. ಬ್ಯಾಂಕ್​ ಖಾತೆ ನಂಬರ್​ ಸರಿಯಾಗಿ ನೀಡಿ
7. ಐ ಎಫ್ ಎಸ್​ ಇ ಕೋಡ್​ ಹಾಕಲು ಮರೆಯದಿರಿ.

ವಿದ್ಯಾಸಾರಥಿ ವಿದ್ಯಾರ್ಥಿವೇತನದ ಅಡಿಯಲ್ಲಿ ಅಧಿಕೃತ ಪೋರ್ಟಲ್‌
ಇದೇ ರೀತಿ ನೀವು ಇನ್ನು ಹಲವಾರು ಸ್ಕಾಲರ್​ಶಿಪ್​ಗಳಿಗೆ ಅರ್ಜಿ ಸಲ್ಲಿಸಬಹುದು ಉನ್ನತ ಶಿಕ್ಷಣಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಹಲವಾರು ವಿದ್ಯಾರ್ಥಿ ವೇತನಗಳು ಕರ್ನಾಟಕದ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಬಾಲಕಿಯರ ವಿದ್ಯಾರ್ಥಿಗಳಿಗಾಗಿ ವಿದ್ಯಾಸಾರಥಿ ವಿದ್ಯಾರ್ಥಿವೇತನದ ಅಡಿಯಲ್ಲಿ ಅಧಿಕೃತ ಪೋರ್ಟಲ್‌ನಲ್ಲಿ ಹೊಸ ವಿದ್ಯಾರ್ಥಿವೇತನವನ್ನು ಪ್ರಸ್ತುತಪಡಿಸಲಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳಿಗೆ ವಿದ್ಯಾಜ್ಯೋತಿ ವಿದ್ಯಾರ್ಥಿವೇತನವು ಲಭ್ಯವಿದೆ.

vidyasaarathi@nsdl.co.in ಸಂಪರ್ಕಕ್ಕೆ ಈ ಮೇಲ್​ ಐಡಿ ಬಳಸಿ

ನೀವು ಮುಂಬರುವ ವರ್ಷ ಇದಕ್ಕೂ ಸಹ ಅಪ್ಲೈ ಮಾಡಬಹುದು
DRDO ಸ್ಕಾಲರ್‌ಶಿಪ್ 2022 ಪ್ರಯೋಜನ
UG ವಿದ್ಯಾರ್ಥಿಗಳಿಗೆ INR 1,20,000 ಹಣ ದೊರೆಯುತ್ತದೆ. ನೀವು ಯು.ಜಿ ಅಥವಾ ಪಿ.ಜಿ ಯಾವ ಕೋರ್ಸ್​ ಮಾಡುತ್ತಿದ್ದರೂ ಸಹ ಪ್ರಥಮ ವರ್ಷದವರಾಗಿರಬೇಕು. ಆಗ ಮಾತ್ರ ಈ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತದೆ.

ಇದು ಕೂಡ ವಿದ್ಯಾರ್ಥಿನಿಯರಿಗೆ ಲಭ್ಯವಿರುವ ಸ್ಕಾಲರ್​ಶಿಪ್​
ಡಿಆರ್‌ಡಿಒ ರಕ್ಷಣಾ ವೃತ್ತಿಯನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ಹುಡುಗಿಯರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವು ಅರ್ಹವಾಗಿರುತ್ತದೆ. ನೀವು ವಿದ್ಯಾರ್ಥಿವೇತನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags