Vistara News

43k Followers

Work From Home | ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಮತ್ತೆ ವರ್ಕ್‌ ಫ್ರಮ್‌ ಹೋಮ್‌ ಸಂಭವ

26 Dec 2022.4:02 PM

ವ ದೆಹಲಿ: ಕೋವಿಡ್‌ ಮತ್ತೆ ಹರಡುವ ಭೀತಿ ಹಿನ್ನೆಲೆಯಲ್ಲಿ ವರ್ಕ್‌ ಫ್ರಮ್‌ ಹೋಮ್‌ (work from home) ಪದ್ಧತಿ ಮರುಕಳಿಸುವ ಸಾಧ್ಯತೆ ಇದೆ. ಹೀಗಾಗಿ ಆಟೊ, ಹೋಟೆಲ್‌, ಟ್ರಾವೆಲ್ಸ್‌, ರಿಯಾಲ್ಟಿ ವಲಯ ಹೈ ಅಲರ್ಟ್‌ ಸ್ಥಿತಿಯಲ್ಲಿವೆ.

ದೇಶದಲ್ಲಿ ಕೋವಿಡ್‌ನ ನಾಲ್ಕನೇ ಅಲೆ ತೀವ್ರವಾದರೆ ವರ್ಕ್‌ ಫ್ರಮ್‌ ಹೋಮ್‌ ಮತ್ತೆ ಜಾರಿಯಾಗಬಹುದು. ನೇಮಕಾತಿ ಕುಂಠಿತವಾಗಿರುವ ಸಂದರ್ಭದಲ್ಲಿ ಕೋವಿಡ್‌ ಬಂದಿದೆ. ಪ್ರವಾಸೋದ್ಯಮ ಮತ್ತು ಹೋಟೆಲ್‌ ವಲಯದಲ್ಲಿ ಗ್ರಾಹಕರು ಮುನ್ನೆಚ್ಚರ ವಹಿಸುತ್ತಿದ್ದಾರೆ ಎಂದು ನೇಮಕಾತಿ ವಲಯದ ಸಂಸ್ಥೆ ಸ್ಟಾಂಟೋನ್‌ ಚೇಸ್‌ನ ವ್ಯವಸ್ಥಾಪಕ ಪಾಲುದಾರರಾದ ಮಾಲಾ ಚಾವ್ಲಾ ತಿಳಿಸಿದ್ದಾರೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕತೆಯ ಮಂದಗತಿಯ ಪರಿಣಾಮ ಇತ್ತೀಚೆಗೆ ನೇಮಕಾತಿ ಕೂಡ ಕಡಿಮೆಯಾಗಿದೆ. ಈ ಟ್ರೆಂಡ್‌ ಹೊಸ ವರ್ಷ ಕೂಡ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೆರಿಯರ್‌ನೆಟ್‌ನ ಸಿಇಒ ಅಂಶುಮಾನ್‌ ದಾಸ್‌ ತಿಳಿಸಿದ್ದಾರೆ.

ಭಾರತದಲ್ಲಿ 196 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಕೇಸ್‌ಗಳ ಸಂಖ್ಯೆ 3,428ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಕೋವಿಡ್ ಮೊದಲ ಅಲೆ ಬಂದಾಗ ಕೂಡಲೇ ಕಾರ್ಪೊರೇಟ್‌ ವಲಯ ವರ್ಕ್‌ ಫ್ರಮ್‌ ಹೋಮ್‌ ಅನ್ನು ಜಾರಿಗೊಳಿಸಿತ್ತು.

ಲಖನೌ: ವಿಧಾನಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಿ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ (OBC Reservation In UP) ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಸ್ಪರ್ಧಿಸಲು ಒಬಿಸಿ ಅಭ್ಯರ್ಥಿಗಳಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸಿ ಡಿಸೆಂಬರ್‌ 5ರಂದು ಯೋಗಿ ಆದಿತ್ಯನಾಥ್‌ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಸುಪ್ರೀಂ ಕೋರ್ಟ್‌ನ ತ್ರಿವಳಿ ಸೂತ್ರ ಪಾಲಿಸದೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠವು ಒಬಿಸಿ ಮೀಸಲಾತಿಯ ಕರಡು ಅಧಿಸೂಚನೆಯನ್ನು ರದ್ದುಪಡಿಸಿದೆ. ಮೀಸಲಾತಿ ಇಲ್ಲದೆಯೇ ಚುನಾವಣೆ ನಡೆಸಲು ಆದೇಶಿಸಿದೆ. ಇದರಿಂದಾಗಿ ಯೋಗಿ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.

ಮೂರು ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, 545 ನಗರ ಪಂಚಾಯಿತಿಗಳ ಅಧ್ಯಕ್ಷರು, 200 ನಗರ ಪಾಲಿಕೆ ಸದಸ್ಯರು ಹಾಗೂ 17 ಮುನ್ಸಿಪಲ್‌ ಕಾರ್ಪೊರೇಷನ್‌ಗಳ ಮೇಯರ್‌ಗಳಿಗೆ ಯೋಗಿ ಸರ್ಕಾರ ಮೀಸಲಾತಿ ಘೋಷಿಸಿತ್ತು. ಆದರೆ, ಒಬಿಸಿಗಳ ರಾಜಕೀಯ ಹಿಂದುಳಿದಿರುವಿಕೆ ಕುರಿತು ಅಧ್ಯಯನ ಮಾಡಲು ಆಯೋಗ ರಚಿಸದೆ ಮೀಸಲಾತಿ ಘೋಷಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಮೀಸಲಾತಿ ಇಲ್ಲದೆ ಚುನಾವಣೆ ಇಲ್ಲ ಎಂದ ಯೋಗಿ
'ಒಬಿಸಿ ಮೀಸಲಾತಿ ನೀಡದೆಯೇ ಚುನಾವಣೆಯನ್ನೇ ನಡೆಸುವುದಿಲ್ಲ' ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 'ಸುಪ್ರೀಂ ಕೋರ್ಟ್‌ನ ಸೂತ್ರದಂತೆಯೇ ಆಯೋಗ ರಚಿಸಿ, ಅಧ್ಯಯನ ನಡೆಸಿದ ಬಳಿಕವೇ ಮೀಸಲಾತಿ ನೀಡಲಾಗುವುದು. ಹಾಗೊಂದು ವೇಳೆ, ಅನಿವಾರ್ಯ ಎಂತಾದರೆ, ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವುದಿಲ್ಲ' ಎಂದಿದ್ದಾರೆ.

| ‌SCST Reservation | ದಲಿತ ಮೀಸಲಾತಿ ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಒಪ್ಪಿಗೆ: ಬಿಜೆಪಿಯೇ ಮೀಸಲಾತಿ ಪರ ಎಂದ ಸರ್ಕಾರ

ರಾಯ್‌ಪುರ ಮಾತನಾಡಲು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಛತ್ತೀಸ್‌ಗಢದ ಕೊಬ್ರಾ ಜಿಲ್ಲೆಯಲ್ಲಿ ಬಸ್‌ ಕಂಡಕ್ಟರ್‌ ಒಬ್ಬ 20 ವರ್ಷದ ಯುವತಿಗೆ 51 ಬಾರಿ ಸ್ಕ್ರ್ಯೂಡ್ರೈವರ್‌ನಿಂದ (Chhattisgarh Murder) ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆ ನಡೆಸಿದ ಬಳಿಕ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

'ಡಿಸೆಂಬರ್‌ 24ರಂದು ಸೌತ್‌ ಈಸ್ಟರ್ನ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌ (SECL)ನ ಪಂಪ್‌ ಹೌಸ್‌ ಕಾಲೊನಿಯಲ್ಲಿರುವ ಯುವತಿಯ ಮನೆಗೆ ಆಗಮಿಸಿದ ಬಸ್‌ ಕಂಡಕ್ಟರ್‌, ಯುವತಿ ಜತೆ ವಾಗ್ವಾದ ನಡೆಸಿದ್ದಾನೆ. ಇಷ್ಟಾದರೂ ಯುವತಿಯು ಮಾತನಾಡಲು ನಿರಾಕರಿಸಿದ್ದ ಕಾರಣಕ್ಕಾಗಿ ಸ್ಕ್ರ್ಯೂಡ್ರೈವರ್‌ನಿಂದ ಇರಿದಿದ್ದಾನೆ. ಇದಕ್ಕೂ ಮೊದಲು ಕೂಡ ಯುವತಿ ಹಾಗೂ ಆಕೆಯ ಕುಟುಂಬಸ್ಥರಿಗೆ ವ್ಯಕ್ತಿಯು ಬೆದರಿಕೆ ಹಾಕಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ.

'ವ್ಯಕ್ತಿ ಮನೆಗೆ ಬಂದಾಗ ಮನೆಯಲ್ಲಿ ಯುವತಿಯೊಬ್ಬಳೇ ಇದ್ದಳು. ಆಕೆಯ ಜತೆ ವಾಗ್ವಾದ ನಡೆಸುತ್ತಲೇ ಕುಪಿತಗೊಂಡ ಆತ ಯುವತಿಯ ಮುಖಕ್ಕೆ ತಲೆದಿಂಬಿನಿಂದ ಒತ್ತಿ, ಸ್ಕ್ರ್ಯೂಡ್ರೈವರ್‌ನಿಂದ ಸುಮಾರು 51 ಬಾರಿ ಇರಿದಿದ್ದಾನೆ. ಆತನನ್ನು ಬಂಧಿಸಲು ತಂಡ ರಚಿಸಲಾಗಿದೆ' ಎಂದು ಕೊಬ್ರಾ ನಗರ ಎಸ್‌ಪಿ ವಿಶ್ವದೀಪಕ್‌ ತ್ರಿಪಾಠಿ ತಿಳಿಸಿದ್ದಾರೆ.

| ಕಿರಿ ಕಿರಿ ಬಗ್ಗೆ ಪೋಷಕರಿಗೆ ದೂರು ನೀಡಿದ್ದ ಬಾಲಕಿಗೆ ಚೂರಿ ಇರಿದು ಹತ್ಯೆ

ಬೆಳಗಾವಿ: ವಿಧಾನ ಮಂಡಲ ಕಾರ್ಯಕಲಾಪವನ್ನು, ನಿಗದಿಗಿಂತ ಒಂದು ದಿನ ಮೊದಲೇ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ.

ವಿಧಾನಪರಿಷತ್ತಿನ ಮೀಟಿಂಗ್ ಹಾಲ್‌ನಲ್ಲಿ ಸಭಾಪತಿ ಹೊರಟ್ಟಿ, ಉಪಸಭಾಪತಿ ಎಂ.ಕೆ. ಪ್ರಾಣೇಶ್, ಸಿಎಂ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಜೆಡಿಎಸ್ ನಾಯಕ ಟಿ.ಎ. ಶರವಣ ಸೇರಿ ಅನೇಕರು ನಡೆಸಿದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಪ್ರಾರಂಭದ ನಿರ್ಧಾರದಂತೆ ಡಿಸೆಂಬರ್‌ 30ರ ಶುಕ್ರವಾರ ಅಧಿವೇಶನ ಮುಕ್ತಾಯಗೊಳ್ಳಬೇಕಿತ್ತು. ಆದರೆ ಡಿಸೆಂಬರ್‌ 30ರಂದು ಕೇಮದ್ರ ಗೃಹಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮಂಡ್ಯ, ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಅದೇ ದಿನ ಕಾಂಗ್ರೆಸ್‌ನಿಂದ ವಿಜಯಪುರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ನೀರಾವರಿ ಯೋಜನೆಗಳಲ್ಲಿ ಬಿಜೆಪಿ ನೀತಿ ಖಂಡಿಸಿ ಬೃಹತ್ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪಕ್ಷಗಳ ಘಟಾನುಘಟಿ ನಾಯಕರು ಪಾಲ್ಗೊಳ್ಳಬೇಕಿರುವುದರಿಂದ ಒಂದು ದಿನದ ಮುಂಚೆಯೇ ಮೊಟಕು ಮಾಡಲು ನಿರ್ಧಾರ ಮಾಡಲಾಗಿದೆ.

ಸಂಸತ್‌ ಅಧಿವೇಶನವನ್ನು ಒಂದು ವಾರ ಮೊದಲೇ ಮೊಟಕುಗೊಳಿಸಲಾಗಿತ್ತು. ಆದರೆ ಉತ್ತರ ಕರ್ನಾಟಕದ ಅನೇಕ ವಿಚಾರಗಳು ಚರ್ಚೆ ಆಗಬೇಕಿರುವುದರಿಂದ ಸಂಪೂರ್ಣ ಅಧಿವೇಶನ ನಡೆಯುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು.

ಸೋಮವಾರ ನವದೆಹಲಿಯಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ನಂತರ, ಅವರು ಕರ್ನಾಟಕಕ್ಕೆ ಬರುವ ವಿಚಾರ ತಿಳಿದುಬಂದಿತ್ತು. ಈವರೆಗೂ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿಲ್ಲ. ಅತಿವೃಷ್ಠಿ, ಅನಾವೃಷ್ಠಿ, ಕಬ್ಬು ಬೆಳೆಗಾರರ ಸಮಸ್ಯೆ , ನೀರಾವರಿ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳನ್ನು ಉತ್ತರ ಕರ್ನಾಟಕ ಎದುರಿಸುತ್ತಿದ್ದು, ಚರ್ಚೆ ಆಗಬೇಕಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಲೆಂದೇ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತದೆ.

| ಬೆಳಗಾವಿ ಅಧಿವೇಶನ | ಕರ್ನಾಟಕದಲ್ಲೂ ಅಧಿವೇಶನ ಮೊಟಕು?; ಮೀಸಲಾತಿ ಕುರಿತೂ ನಿರ್ಧಾರ: ಸೋಮವಾರ ಮಹತ್ವದ ಸಂಪುಟ ಸಭೆ

ಮುಂಬೈ: ಪ್ರೇಮಪಾಶಕ್ಕೆ ಸಿಲುಕಿ, ಅದರ ವೈಫಲ್ಯದಿಂದ ಮನನೊಂದು, ಜೀವವನ್ನೇ ಕಳೆದುಕೊಂಡ ಕಿರುತೆರೆ ನಟಿ ತುನಿಶಾ ಶರ್ಮಾ ಅಂತ್ಯಕ್ರಿಯೆಯು ಮುಂಬೈನ ಮೀರಾ ರೋಡ್‌ನ ಶವಾಗಾರದಲ್ಲಿ (Tunisha Sharma Funeral) ನೆರವೇರಿದೆ. ಪ್ರೀತಿಯ ಮಗಳಿಗೆ ಅಂತಿಮ ವಿದಾಯ ಹೇಳಲು ಆಗದೆ, ದುಃಖ ತಡೆದುಕೊಳ್ಳಲು ಆಗದೆ ಅವರ ತಾಯಿಯು ಕುಸಿದು ಬಿದ್ದಿದ್ದು ಮನಕಲಕುವಂತಿತ್ತು. ನೂರಾರು ಜನರ ಕಣ್ಣೀರು, ದುಃಖದ ಮಧ್ಯೆಯೇ ಅಗಲಿದ ನಟಿಯ ಅಂತ್ಯ ಸಂಸ್ಕಾರ ನೆರವೇರಿದ್ದು, ಹಲವು ಸಹನಟರು ಭಾಗಿಯಾಗಿದ್ದರು. ತುನಿಶಾ ಶರ್ಮಾ ಅವರ ಚಿಕ್ಕಪ್ಪ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

20 ವರ್ಷದ ತುನಿಶಾ ಶರ್ಮಾ ಅವರು 'ಅಲಿ ಬಾಬಾ: ದಾಸ್ತಾನ್‌ ಎ ಕಾಬೂಲ್'‌ (Ali Baba: Dastaan-E-Kabul) ಟಿವಿ ಸಿರೀಸ್‌ನ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಆದರೆ, ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆ ವಸಾಯಿ ಎಂಬಲ್ಲಿ ಶೂಟಿಂಗ್‌ ಮಾಡುವಾಗ ಸೆಟ್‌ನ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಟಿವಿ ಶೋ ಸಹ ನಟ ಶಿಜಾನ್‌ ಮೊಹಮ್ಮದ್‌ ಖಾನ್‌ ಅವರನ್ನು ತುನಿಶಾ ಶರ್ಮಾ ಪ್ರೀತಿಸುತ್ತಿದ್ದರು. ಈ ಪ್ರೀತಿಯನ್ನು ಶಿಜಾನ್‌ ಖಾನ್‌ ನಿರಾಕರಿಸಿದ ಕಾರಣ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹೇಳಿಕೆ ಬದಲಿಸುತ್ತಿರುವ ಶಿಜಾನ್‌ ಖಾನ್
ತುನಿಶಾ ಶರ್ಮಾ ಸಹ ನಟ ಶಿಜಾನ್‌ ಖಾನ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ನಟನು ಹೇಳಿಕೆ ಬದಲಾಯಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. 'ಒಂದು ಸಲ ಶ್ರದ್ಧಾ ವಾಳ್ಕರ್‌ ಕೊಲೆ ಪ್ರಕರಣವೇ ನಮ್ಮ ಪ್ರೀತಿಗೆ ಇತಿಶ್ರೀ ಹಾಡಬೇಕು ಎಂಬುದಾಗಿ ಹೇಳುತ್ತಾನೆ. ಇದಾದ ನಂತರ, ತುನಿಶಾ ಶರ್ಮಾಳೇ ನನ್ನನ್ನು ಅವಾಯ್ಡ್‌ ಮಾಡಿದಳು' ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

| Tunisha Sharma Death | ತುನಿಶಾ ಶರ್ಮಾ ಮೃತಪಟ್ಟ ದಿನ ಶೂಟಿಂಗ್​​ ಸೆಟ್​​ನಲ್ಲಿ ಏನಾಯ್ತು?-ಶಿಜಾನ್​ ಅಲ್ಲೇ ಇದ್ದನಾ?

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vistara News

#Hashtags