Kannada News Now

1.8M Followers

'ವರ್ಗಾವಣೆ ನಿರೀಕ್ಷೆ'ಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಜ.10ರಂದು ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿ ಪ್ರಕಟ

07 Jan 2023.07:21 AM

ಬೆಂಗಳೂರು: 2023-24ನೇ ಸಾಲಿನ ವರ್ಗಾವಣೆಯ ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ದಿನಾಂಕ 10-01-2023ರಂದು ಪ್ರಕಟಿಸಲಾಗುತ್ತಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ( Teacher Transfer ) ಗುಡ್ ನ್ಯೂಸ್ ನೀಡಲಾಗಿದೆ.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ವೇಳಾಪಟ್ಟಿಯಂತೆ ದಿನಾಂಕ 06-01-2023ರಂದು ಬಿಡುಗಡೆ ಮಾಡಬೇಕಿರುತ್ತದೆ. ಆದ್ರೇ ಕಾರಣಾಂತರಗಳಿಂದ ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ದಿನಾಂಕ 10-01-2023ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ದಿನಾಂಕ 10-01-2023ರಂದು ಪ್ರಕಟವಾಗುವಂತೆ ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ಪ್ರಕಟಿಸಿದ ನಂತ್ರ, ಆದ್ಯತೆಯನ್ನು ಕ್ಲೇಮ್ ಮಾಡಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags