ವಿಜಯವಾಣಿ

505k Followers

ಮುಖ್ಯಶಿಕ್ಷಕಿಯ ಬದಲಾಗಿ ಕ್ಲಾಸ್​ ತೆಗೆದುಕೊಂಡು ಮಗ: ಸರ್ಕಾರಿ ಶಾಲೆಯ ಅವ್ಯವಸ್ಥೆಗೆ ಗ್ರಾಮಸ್ಥರ ಆಕ್ರೋಶ

01 Mar 2023.2:23 PM

ಭುವನೇಶ್ವರ್​:​ ಮುಖ್ಯಶಿಕ್ಷಕಿಯ ಅನುಪಸ್ಥಿತಿಯಲ್ಲಿ ಅವರ ಮಗ ಶಾಲೆಗೆ ಆಗಮಿಸಿ ತರಗತಿ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆಕ್ರೋಶಕ್ಕೆ ಗುರಿಯಾಗಿದೆ.

ಈ ಘಟನೆ ಒಡಿಶಾದ ಭದ್ರಕ್​ ಜಿಲ್ಲೆಯ ಗೋಪಾಲಪುರ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮುಖ್ಯಶಿಕ್ಷಕಿಯ ಹೆಸರನ್ನು ಮಮತಾ ದಾಸ್​ ಎಂದು ಗುರುತಿಸಲಾಗಿದೆ. ಅವರ ಗೈರು ಹಾಜರಿಯ ವೇಳೆ ಅವರ ಬದಲಾಗಿ ಪುತ್ರ ತರಗತಿ ನಡೆಸಿದ್ದಾರೆ. ಈ ಪ್ರಕರಣ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಮೊಬೈಲ್​​ ಚಾರ್ಜ್​​ಗೆ ಹಾಕಿ ಮಾತನಾಡುವಾಗ ಸ್ಫೋಟ: ಸ್ಥಳದಲ್ಲೇ ಪ್ರಾಣ ಬಿಟ್ಟ ವೃದ್ಧ

ತರಗತಿಯಲ್ಲಿನ ಅವ್ಯವಸ್ಥೆಯ ಬಗ್ಗೆ ಕೇಳಿ ನಾನು ಶಾಲೆಗೆ ಹೋದೆ. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿಯ ಮಗ ತರಗತಿ ತೆಗೆದುಕೊಳ್ಳುತ್ತಿದ್ದನು. ನಾನು ವಿಚಾರಿಸಿದಾಗ ಶಿಕ್ಷಕಿಯೊಬ್ಬರು ರಜೆಯಲ್ಲಿರುವುದು ಕಂಡು ಬಂದಿದ್ದು, ಮುಖ್ಯೋಪಾಧ್ಯಾಯಿನಿಯು ಸಹ ಹಾಜರಿರಲಿಲ್ಲ ಎಂದು ಗ್ರಾಮಸ್ಥ ರಮಾಕಾಂತ್​ ಬ್ಯಾರಿಕ್ ತಿಳಿಸಿದರು.

ಮುಖ್ಯಶಿಕ್ಷಕಿ ಏಕೆ ಬಂದಿಲ್ಲ ಎಂದು ನಾನು ಪ್ರಶ್ನೆ ಮಾಡಿದಾಗ ಅವರಿಗೆ ಬೇರೆ ಕೆಲಸ ಇರುವುದರಿಂದ ಬರಲು ಆಗಿಲ್ಲ ಎಂದು ಆಕೆಯ ಪುತ್ರ ಸಮಜಾಯಿಷಿ ನೀಡಿದರು ಎಂದು ಬ್ಯಾರಿಕ್​ ಹೇಳಿದರು.

ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಮುಖ್ಯೋಪಾಧ್ಯಾಯಿನಿ, ಅಪಘಾತಕ್ಕೀಡಾದ ನಂತರ ಚಿಕಿತ್ಸೆ ಪಡೆಯುತ್ತಿರುವ ತನ್ನ ಇನ್ನೊಬ್ಬ ಮಗನ ಜೊತೆಯಲ್ಲಿದ್ದ ಕಾರಣ ತನ್ನ ಮಗನನ್ನು ಶಾಲೆ ತೆರೆಯಲು ಕಳುಹಿಸಿದ್ದೆ ಎಂದು ಹೇಳಿದರು.

ನನ್ನು ಹಿರಿಯ ಮಗ ಅಪಘಾತದಿಂದ ಗಾಯಗೊಂಡು ಭದ್ರಕ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾನು ಆತನೊಂದಿಗೆ ಇದ್ದೆ. ನಾನು ಶಾಲೆಗೆ ಹೋಗುವುದು ತಡವಾಗಬಹುದು ಅಂತ ನನ್ನ ಇನ್ನೊಬ್ಬ ಮಗನ ಕೈಯಲ್ಲಿ ಶಾಲೆ ತೆರೆಯಲೆಂದು ಬೀಗ ಕೊಟ್ಟು ಕಳುಹಿಸಿದ್ದೆ. ನನ್ನ ಮಗ ಯಾವುದೇ ತರಗತಿಯನ್ನು ತೆಗೆದುಕೊಂಡಿಲ್ಲ ಎಂದು ಮುಖ್ಯಶಿಕ್ಷಕಿ ಮಮತಾ ದಾಸ್​ ಸಮರ್ಥನೆ ನೀಡಿದರು.

ಬಸ್​ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಬಾರಿಸಿದ ಯುವಕ! ನಂತರ ನಡೆದಿದ್ದು ಮತ್ತೊಂದು ಎಡವಟ್ಟು

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪ್ರಣಯ್​ ನಾಯಕ್​ ಮಾತನಾಡಿ, ತಪ್ಪು ಎಸಗಿರುವುದು ಸಾಬೀತಾದರೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು. ಅಲ್ಲದೆ, ಆರೋಪದ ಸತ್ಯಾಸತ್ಯತೆ ಅರಿಯಲು ತನಿಖೆ ನಡೆಸುವುದಾಗಿ ಹೇಳಿದರು. (ಏಜೆನ್ಸೀಸ್​)

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags