Boldsky

136k Followers

ಫಿಲ್ಟರ್‌ ನೀರು (RO Water) ಆರೋಗ್ಯಕರ ಅಲ್ವೇ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

07 Mar 2023.7:17 PM

ನಾವೆಲ್ಲಾ ಈಗ RO(Osmosis)ವಾಟರ್‌ ಕುಡಿಯಲು ಬಯಸುತ್ತೇವೆ, ಏಕೆಂದರೆ ಈ ನೀರು ತುಂಬಾ ಪ್ಯೂರ್‌ಫೈ ಅಂದರೆ ಶುದ್ಧವಾಗಿದೆ ಎಂಬುವುದು ನಮ್ಮ ಕಲ್ಪನೆ. ಈ ನೀರು ಕುಡಿದರೆ ಕಾಯಿಲೆ ಬರಲ್ಲ ಆರೋಗ್ಯ ಚೆನ್ನಾಗಿರುತ್ತದೆ ಎಂದೆಲ್ಲಾ ನಮ್ಮ ಕಲ್ಪನೆ, ಆದರೆ ವಿಶ್ವ ಆರೋಗ್ಯ ಸಂಸ್ಥೆಈ ನೀರು ಕುರಿತು ಹೇಳಿರುವ ವಿಷಯ ತಿಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರಂಟಿ.

ಹೌದು ಆರ್‌ಒ ವಾಟರ್‌ನಲ್ಲಿ ಯಾವುದೇ ಖನಿಜಾಂಶಗಳಿರುವುದಿಲ್ಲ, ಈ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆರ್‌ಒ ನೀರಿನಲ್ಲಿ ಶೆ. 92-99ರಷ್ಟು ಕ್ಯಾಲ್ಸಿಯಂ ಮತ್ತು ಮೆಗ್ನಿಷ್ಯಿಯಂ ಇರುವುದಿಲ್ಲ , ನೀರಿನಲ್ಲಿರುವ ಯಾವುದೇ ಖನಿಜಾಂಶಗಳು ಈ ನೀರಿನಲ್ಲಿ ಇರಲ್ಲ.


ಆರ್‌ಒ ನೀರು ಮನುಷ್ಯ ಹಾಗೂ ಪ್ರಾಣಿಗಳ ಅಂಗಾಂಗಗಳಿಗೆ ಒಳ್ಳೆಯದಲ್ಲ

ಆರ್‌ಒ ನೀರು ಆರೋಗ್ಯಕ್ಕೆ ಒಳ್ಳೆಯದೇ ಎಂಬುವುದರ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸಲಾಗಿತ್ತು, ಪ್ರತಿತೊಂದು ಸಂಶೋಧನೆ ವರದಿಯು ಆರ್‌ಒ ನೀರು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ, ಏಕೆಂದರೆ ಇದರಲ್ಲಿ ಖನಿಜಾಂಶಗಳು ಇರುವುದಿಲ್ಲ, ಈ ಕಾರಣಕ್ಕೆ ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿತ್ತು. ಇದೀಗ ವಿಶ್ವ ಶರೋಗ್ಯ ಸಂಸ್ಥೆ ಮತ್ತೊಮ್ಮೆ ಆರ್‌ಒ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಿದ್ದಾರೆ.

ಈ ನೀರು ಕುಡಿಯುವುದರಿಂದ ಮನುಷ್ಯ ಹಾಗೂ ಪ್ರಾಣಿಗಳ ಅಂಗಾಂಗಗಳಿಗೆ ಒಳ್ಳೆಯದಲ್ಲ, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದೆ.

ಆರ್‌ಒ ನೀರು ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳು

ಆರ್‌ಒ ನೀರು ಕೆಲವು ತಿಂಗಳುಗಳು ಕುಡಿದರೆ ಸಾಕು ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ. ಈ ನೀರಿನಲ್ಲಿ ಕ್ಯಾಲ್ಸಿಯಂ ಹಾಗೂ ಮೆಗ್ನಿಷ್ಯಿಯಂ ತುಂಬಾನೇ ಕಡಿಮೆ ಇರುತ್ತದೆ.

ಕಲುಷಿತ ನೀರು ತಡೆಗಟ್ಟಲು ಆರ್‌ ಬಳಕೆ, ಇದರಿಂದಲೂ ತಪ್ಪಿಲ್ಲ ಆರೋಗ್ಯ ಸಮಸ್ಯೆ

2002-2003ರಲ್ಲಿ ಜೆಕ್ ಮತ್ತು ಸ್ಲೋವಾಕ್‌ನನಲ್ಲಿ ಕಲುಷಿತ ನೀರು ತಡೆಗಟ್ಟಲು ಅಲ್ಲಿಯ ಸರ್ಕಾರ ಪ್ರತಿ ಮನೆಯ ನಲ್ಲಿಗೆ ಆರ್‌ ಅಳವಡಿಸಿತ್ತು. ನಂತರ ಅವರ ಆರೋಗ್ಯ ಸ್ಥಿತಿಯ ಮೇಲೆ ಗಮನ ಇರಿಸಲಾಯಿತು. ಆರ್‌ಒ ಅಳವಡಿಸಿದ ಕೆಲವೇ ತಿಂಗಳುಗಳಲ್ಲಿ ಹಲವಾರು ಆರೊಗ್ಯ ಸಮಸ್ಯೆಗಳು ಕಂಡು ಬಂದೆವು. ಕೆಲವರಲ್ಲಿ ಸುಸ್ತು, ಇನ್ನು ಕೆಲವರಲ್ಲಿ ಸ್ನಾಯು ಸೆಳೆತ ಈ ಬಗೆಯ ಸಮಸ್ಯೆ ಕಂಡ ಬರಲಾರಂಬಿಸಿತು.

ದೇಹದಲ್ಲಿ ಖನಿಜಾಂಶಗಳು ಕಡಿಮೆಯಾಗುತ್ತೆ

ಆರ್‌ಒ ನೀರು ಕುಡಿದರೆ ದೇಹಕ್ಕೆ ಖನಿಜಾಂಶಗಳು ದೊರೆಯುವುದಿಲ್ಲ, ಆಹಾರದಲ್ಲಿ ಸಿಗುವ ಖನಿಜಾಂಶಗಳು ಮೂತ್ರದಲ್ಲಿ ದೇಹದಿಂದ ಹೊರ ಹೋಗುತ್ತದೆ. ನೀರಿನಲ್ಲಿ ಖಣಿಜಾಂಶ ಕಡಿಮೆಯಾದರೆ ಅದನ್ನು ಆಹಾರದ ಮೂಲಕ ಸಮತೋಲನ ಮಾಡಲು ಸಾಧ್ಯವಿಲ್ಲ.. ದೇಹದಲ್ಲಿ ಖನುಜಾಂಶಗಳು ಕಡಿಮೆಯಾಗಲು ಆರ್‌ಒ ನೀರು ಕಾರಣವಾಗಿದೆ.

ಖನಿಜಾಂಶಗಳನ್ನು ಉಳಿಸುತ್ತೆ ಎಂದು ಜಾಹೀರಾತಿನಲ್ಲಿ ಹೇಳುವ ಆರ್‌ಒ ಫಿಲ್ಟರ್ ಬಳಸಬಹುದೇ?

ಕೆಲವು ಫಿಲ್ಟರ್‌ ಬ್ರ್ಯಾಂಡ್‌ಗಳು ನಮ್ಮಲ್ಲಿ ಖನಿಜಾಂಶಗಳು ನಾಶವಾಗುವುದಿಲ್ಲ ಎಂದು ಹೇಳುತ್ತವೆ. ಆದರೆ ಯಾವುದೇ ಫಿಲ್ಟರ್ ನೀರಿನಲ್ಲಿ ಎಲ್ಲಾ ಖನಿಜಾಂಶಗಳು ಇರಲು ಸಾಧ್ಯವಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ
* ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ ಎರಡೂ ಅವಶ್ಯಕವಾದ ಖನಿಜಾಂಶಗಳಾಗಿವೆ. ಇದು ಮೂಳೆ ಹಾಗೂ ಹಲ್ಲುಗಳ ಆರೋಗ್ಯಕ್ಕೆ ಅವಶ್ಯಕ.
* ಇನ್ನು ಹೃದಯ ಹಾಗೂ ಸ್ನಾಯುಗಳ ಆರೋಗ್ಯಕ್ಕೆ ಕೂಡ ಖನಿಜಾಂಶಗಳು ಅವಶ್ಯಕ.

ನೀರನ್ನು ಹೇಗೆ ಕುಡಿದರೆ ಸುರಕ್ಷಿತ?
ನೀರನ್ನು ಚೆನ್ನಾಗಿ ಕುದಿಸಿ ಆರಿಸಿ ಕುಡಿಯುವುದರಿಂದ ಯಾವುದೇ ಬ್ಯಾಕ್ಟಿರಿಯಾಗಳ ಭಯವಿಲ್ಲದೆ ಖನಿಜಾಂಶಗಳಿರುವ ನೀರನ್ನು ಕುಡಿಯಬಹುದಾಗಿದೆ.

By Reena TK Boldsky

source: boldsky.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Boldsky Kannada

#Hashtags