Kannada News Now

1.8M Followers

BIGG NEWS : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಬಿಗ್ ಶಾಕ್ : ವರ್ಗಾವಣೆಗೆ ಚುನಾವಣಾ ಆಯೋಗ `ರೆಡ್ ಸಿಗ್ನಲ್'!

18 Apr 2023.06:29 AM

ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಬಿಗ್ ಶಾಕ್, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆಗೆ ಚುನಾವಣಾ ಆಯೋಗ ಅನುಮತಿ ನೀಡಲು ನಿರಾಕರಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ, ಶಿಕ್ಷಕರ ವರ್ಗಾವಣೆಗೆ ಆಯೋಗದ ಅನುಮತಿ ಕೋರಿ ಅನಂತರ ಪ್ರಕ್ರಿಯೆ ನಡೆಸಲು ತೀರ್ಮಾನಿಸಿತ್ತು.

ಆದರೆ ಚುನಾವಣಾ ಆಯೋಗ ನೀತಿ ಸಂಹಿತೆ ಪ್ರಸ್ತಾಪಿಸಿ ಶಿಕ್ಷಕರ ವರ್ಗಾವಣೆಗೆ ಅನುಮತಿ ನಿರಾಕರಿಸಿ ಮೌಖಿಕವಾಗಿ ಸೂಚಿಸಿದೆ ಹೀಗಾಗಿ ಹೊಸ ಸರ್ಕಾರ ರಚನೆಯಾಗುವವರಿಗೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಇಲ್ಲ ಎನ್ನಲಾಗುತ್ತಿದೆ.

ಇನ್ನು ನೇಮಕಾತಿ ಆದೇಶ ಪಡೆಯಲು ಕಾಯುತ್ತಿರುವ ಭಾವೀ ಶಿಕ್ಷಕರಿಗೂ ನೀತಿ ಸಂಹಿತೆ ಸಂಕಷ್ಟ ತಂದಿದೆ. 15 ಸಾವಿರ ಶಿಕ್ಷಕರ ನೇಮಕಾತಿ ವಿಚಾರ ಕೋರ್ಟ್ ನಲ್ಲಿದ್ದರೂ, ಈ ವಿಚಾರದ ಹೊರತಾಗಿ ನೇಮಕಗೊಡಿರುವ ಇತರೆ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲು ಶಿಕ್ಷಣ ಇಲಾಖೆ ಯೋಚಿಸಿತ್ತು. ಆದೇಶ ನೀಡಿದ ಮೇಲೆ ಅವರಿಗೆ ತರಬೇತಿ ನೀಡಿ ಶಿಕ್ಷಕರ ವರ್ಗಾವಣೆ ನಂತರ ಉಳಿಕೆಯಾಗುವ ಸ್ಥಳಗಳಿಗೆ ಸ್ಥಳ ನಿಯುಕ್ತಿ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ ವರ್ಗಾವಣೆ ಪ್ರಕ್ರಿಯೆ ನಡೆಯದ ಕಾರಣ ಸ್ಥಳ ನಿಯುಕ್ತಿ ಮಾಡುವುದೂ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

Rain in Karnataka : ರಾಜ್ಯದ ಹಲವು ಜಿಲ್ಲೆಗಳಲ್ಲಿ 2 ದಿನ ಗುಡುಗು ಸಹಿತ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

BIGG NEWS : ರಾಜ್ಯದಲ್ಲಿ ರಂಗೇರಿದ ಚುನಾವಣಾ ಕಣ : ಒಂದೇ ದಿನ ಭರ್ಜರಿ 842 ನಾಮಪತ್ರ ಸಲ್ಲಿಕೆ| Karnataka Assembly Elections


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags