Kannada News Now

1.8M Followers

Good News: 'BMTC ಸಿಬ್ಬಂದಿ'ಗಳಿಗೆ ಗುಡ್ ನ್ಯೂಸ್: ಡಿಪೋಗಳಲ್ಲೇ ಊಟ, ತಿಂಡಿ ಒದಗಿಸುವ 'ಗಾಂಧಿ ಪಾಯಿಂಟ್ ಕ್ಯಾಂಟಿನ್' ಆರಂಭ

02 Oct 2023.2:32 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾರಿಗೆ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ತಿಂಡಿ, ಊಟ ಒದಗಿಸೋ ಕ್ಯಾಂಟಿನ್ ತೆರೆಯೋದಾಗಿ ತಿಳಿಸಿದ್ದರು. ಅದರಂತೆ ಇಂದು ಬೆಂಗಳೂರಿನ ಬಿಎಂಟಿಸಿಯ 4ನೇ ಘಟಕದಲ್ಲಿ ಉತ್ತಮ ದರ್ಜೆಯ, ರಿಯಾಯಿತಿ ದರದಲ್ಲಿ ಊಟ, ತಿಂಡಿ ಒದಗಿಸುೋ ಗಾಂಧಿ ಪಾಯಿಂಟ್ ಕ್ಯಾಂಟಿನ್ ಆರಂಭಗೊಂಡಿದೆ.

ಇಂದು ಬಿಎಂಟಿಸಿಯ 4ನೇ ಘಟಕದಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಸರಳ‌ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಸಿಬ್ಬಂದಿಗಳಿಗೆ ರಿಯಾಯಿತಿ ದರದಲ್ಲಿ ಉತ್ತಮ‌ ದರ್ಜೆಯ ತಿಂಡಿ ಮತ್ತು ಊಟವನ್ನು ಒದಗಿಸಲು ಗಾಂಧೀ ಪಾಯಿಂಟ್ ಹೆಸರಿನ ಕ್ಯಾಂಟಿನ್ ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಬಿ ಎಂ ಟಿ ಸಿ‌ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ. ನಗರದ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವುದರಿಂದ ನಾಲ್ಕು ಸಾರಿಗೆ ಸಂಸ್ಥೆಗಳ‌ ಚಾಲನಾ ಸಿಬ್ಬಂದಿಗಳಿಗೆ ಬಹಳ ಅನುಕೂಲವಾಗಲಿದೆ. ಉತ್ತಮ ಗುಣಮಟ್ಟದ ಆಹಾರವು ರಿಯಾಯಿತಿ ದರದಲ್ಲಿ ದೊರಕಲಿದೆ. ಇದೇ ರೀತಿ ಇತರೆ ಘಟಕಗಳಲ್ಲಿಯೂ ಕ್ಯಾಂಟೀನ್ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಕೀರ್ತಿಚಂದ್ರ, ವಿಭಾಗೀಯ ನಿಯಂತ್ರಣಾಧಿಕಾರಿ, ಬಿಎಂಟಿಸಿ ದಕ್ಷಿಣ ವಿಭಾಗ, ರವೀಂದ್ರ ಘಟಕ ವ್ಯವಸ್ಥಾಪಕರು, ಜಯನಗರ ಘಟಕ -4 ಹಾಗೂ ಘಟಕದ ಸಿಬ್ಬಂದಿಗಳು ಹಾಜರಿದ್ದರು.

BIG NEWS: 'ಶಿವಮೊಗ್ಗ ಗಲಾಟೆ ಕೇಸ್'ಗೆ ಬಿಗ್ ಟ್ವಿಸ್ಟ್: ಎರಡು 'ಒಮಿನಿ' ಕಾರಿನಲ್ಲಿ ಬಂದಿದ್ದವರಿಂದ 'ಕಲ್ಲು ತೂರಾಟ'?

BREAKING:ವಿವಾದಾತ್ಮಕ ಬಿಹಾರದ ಜಾತಿ ಗಣತಿಯ ಫಲಿತಾಂಶ ಪ್ರಕಟ: OBC ಗಳು 63%, 'ಸವರ್ಣರು' 16% | Caste Census

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags