Kannada News Now

1.8M Followers

BREAKING: ಪದವಿ ಅಂತಿಮ ಪರೀಕ್ಷೆ ನಡೆಸದೇ ಪಾಸ್‌ ಮಾಡುವಂತಿಲ್ಲ: ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು..!

28 Aug 2020.11:16 AM

ನವದೆಹಲಿ: ಸುಪ್ರಿಂಕೋರ್ಟ್‌ನಿಂದ ಮಹತ್ವದ ತೀರ್ಪು ಹೊರ ಬಿದ್ದಿದ್ದು, ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನ ಯಾವುದೇ ಕಾರಣಕ್ಕೂ ಮುಂದುಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಆದೇಶ ನೀಡಿದೆ.

ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದಿಂದ ಈ ತೀರ್ಪು ಹೊರಡಿಸಿದ್ದು, ಅಂತಿಮ ವರ್ಷದ ಪದವಿ ಪರೀಕ್ಷೆ ಆಗಿರುವುದ್ರಿಂದ ಯಾವುದೇ ಕಾರಣಕ್ಕೂ ಪರೀಕ್ಷೆಗಳನ್ನ ಮುಂದುಡಲು ಸಾಧ್ಯವಿಲ್ಲ. ಹಾಗಂತ, ಯುಜಿಸಿ ತೀರ್ಪಿನಂತೆ ಸೆಪ್ಟಂಬರ್‌ 30ರೊಳಗೆ ಪರೀಕ್ಷೆ ನಡೆಸಬೇಕು ಎಂದೆನಿಲ್ಲ. ಪರೀಕ್ಷೆಗಳನ್ನ ಕಡ್ಡಾಯವಾಗಿ ನಡೆಸಬೇಕು ಆದ್ರೆ, ಯಾವಾಗ ನಡೆಸಬೇಕು ಎಂಬುದು ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಹೇಳಿರುವ ಸುಪ್ರೀಂಕೋರ್ಟ್‌ ಯುಜಿಸಿಯ ತೀರ್ಪನ್ನ ಎತ್ತಿ ಹಿಡಿದಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags