Kannada News Now

1.8M Followers

ವಾಹನಸವಾರರಿಗೆ ಸಿಹಿಸುದ್ದಿ : ಸೆ.30ರವರೆಗೆ 'ವಾಹನ ತೆರಿಗೆ ಪಾವತಿ'ಗೆ ಅವಧಿ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ

29 Aug 2020.06:12 AM

ಬೆಂಗಳೂರು : ಈಗಾಗಲೇ ಕೇಂದ್ರ ಸರ್ಕಾರ ವಾಹನ ಸಿಂಧುತ್ವದ ವ್ಯಾಲಿಡಿಟಿ ಅವಧಿಯನ್ನು ಡಿಸೆಂಬರ್ 30, 2020ರವರೆಗೆ ವಿಸ್ತರಣೆ ಮಾಡಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ವಾಹನ ತೆರಿಗೆ ಪಾವತಿಗೆ ಅವಧಿಯನ್ನು 30-09-2020ರವರೆಗೆ ವಿಸ್ತರಣೆ ಮಾಡಿದೆ. ಈ ಮೂಲಕ ವಾಹನ ಸವಾರರಿಗೆ ಸಿಹಿಸುದ್ದಿಯನ್ನು ನೀಡಿದೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರು, ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 4(1) ರ ನಿಯಮಗಳನ್ನು ಸಡಿಲಗೊಳಿಸಿ, ಕರ್ನಾಟಕ ರಾಜ್ಯದ ಎಲ್ಲ ನೊಂದಾಯಿತ ವಾಹನಗಳಿಗೆ (ಹೊಸ ವಾಹನಗಳ ನೊಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ದಿನಾಂಕ 15.8.2020 ಮತ್ತು15.9.2020 ರ ಒಳಗಾಗಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು 30.9.2020 ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags