News18 ಕನ್ನಡ

400k Followers

Railway Recruitment: 1.40 ಲಕ್ಷ ಹುದ್ದೆಗಳನ್ನು ತುಂಬಲು ಮುಂದಾದ ರೈಲ್ವೆ; ಯಾವ ಹುದ್ದೆ, ಪರೀಕ್ಷೆ ಯಾವಾಗ?, ಇಲ್ಲಿದೆ ಮಾಹಿತಿ

06 Sep 2020.08:16 AM

ನವದೆಹಲಿ: ಖಾಲಿ ಇರುವ 1.40 ಲಕ್ಷ ಹುದ್ದೆಗಳನ್ನು ತುಂಬಲು ರೈಲ್ವೆ ಇಲಾಖೆ ಮುಂದಾಗಿದೆ. ಡಿಸೆಂಬರ್​ 15ರಂದು ಪರೀಕ್ಷೆ ಕರೆದಿದ್ದು, ಅರ್ಹ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯಬಹದು ಎಂದು ರಾಷ್ಟ್ರೀಯ ಸಾರಿಗೆ ಮಂಡಳಿಯ ಮುಖ್ಯಸ್ಥ ವಿಕೆ ಯಾದವ್​ ಶನಿವಾರ ಹೇಳಿದ್ದಾರೆ. ಈ ಮೂಲಕ 1.40 ಲಕ್ಷ ಜನರನ್ನು ತೆಗೆದುಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ. ಗಾರ್ಡ್​, ಕ್ಲರ್ಕ್​, ಟ್ರ್ಯಾಕ್​ ನಿರ್ವಹಣಕಾರ, ಪಾಯಿಂಟ್ಸ್​ಮೆನ್​ಗ ಹುದ್ದೆಗಳಿಗೆ ರೈಲ್ವೆ ಇಲಾಖೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ. ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಪರೀಕ್ಷಾ ದಿನಾಂಕವನ್ನು ಟ್ವಿಟ್ಟರ್​ನಲ್ಲಿ ಘೋಷಣೆ ಮಾಡಿದ್ದಾರೆ.

ಈಗಾಗಲೇ ಈ ಹುದ್ದೆಗಳಿಗೆ ಪರೀಕ್ಷೆ ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ದೇಶದ ಆರ್ಥಿಕ ಚಟುವಟಿಕೆಗಳು ನಿಂತಿದ್ದವು. ಅಷ್ಟೇ ಅಲ್ಲ, ರೈಲ್ವೆ ಕೂಡ ಸಂಚಾರ ನಿಲ್ಲಿಸಿತ್ತು. ಅಲ್ಲದೆ, ಪರೀಕ್ಷೆಗಳನ್ನು ನಡೆಸಲು ಭಾರೀ ವಿರೋಧಗಳು ಕೇಳಿ ಬರುತ್ತಿವೆ. ಈ ಎಲ್ಲ ಕಾರಣಕ್ಕೆ ಪರೀಕ್ಷೆಯನ್ನು ನಡೆಸಿರಲಿಲ್ಲ.

ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಪಿಯೂಷ್​ ಗೋಯಲ್​, 1,49,640 ಹುದ್ದೆಗಳಿಗೆ ನಾವು ಕಂಪ್ಯೂಟರ್​ ಆಧಾರಿತ ಪರೀಕ್ಷೆ ಕರೆದಿದ್ದೇವೆ ಎಂದು ಹುದ್ದೆಗಳ ಮಾಹಿತಿ ನೀಡಿದ್ದಾರೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags