Oneindia

1.1M Followers

ಹಿತ್ತಲ ಗಿಡವೇ ಮದ್ದು: ಡಾ. ಗಿರಿಧರ್ ಕಜೆ ಔಷಧಿಗೆ ಸರಕಾರದಿಂದ ಗ್ರೀನ್ ಸಿಗ್ನಲ್?

18 Jul 2020.9:07 PM

ಬೆಂಗಳೂರು, ಜುಲೈ 18: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ, ಕೊರೊನಾ ಸೋಂಕಿತರ ಮೇಲಿನ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾದ ನಂತರ, ಭಾರೀ ನಿರೀಕ್ಷೆಯ, ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ನ ಲಸಿಕೆಗೆ ಸರಕಾರದಿಂದ, 'ರೋಗ ನಿರೋಧಕ ಶಕ್ತಿ ವೃದ್ದಿಸಿಕೊಳ್ಳಲು' ಬಳಸುವುದಕ್ಕೆ ಅನುಮತಿ ಲಭ್ಯವಾಗಿದೆ.

BBMP commissioner Anil Kumar transferred | Oneindia Kannada

"ಸರಕಾರದಿಂದ ಈಗಾಗಲೇ ಅನುಮತಿ ಸಿಕ್ಕಿದೆ. ಲಸಿಕೆ ಈಗ ಪ್ರೊಡಕ್ಷನ್ ಹಂತದಲ್ಲಿದೆ. ಮುಂದಿನ ಕೆಲವು ದಿನಗಳಲ್ಲಿ ಈ ಲಸಿಕೆಯನ್ನು ಸರಕಾರಕ್ಕೆ ನೀಡುವುದಾಗಿ" ಎಂದು ಖ್ಯಾತ ವೈದ್ಯ ಡಾ.ಗಿರಿಧರ ಕಜೆ ಸ್ಪಷ್ಟ ಪಡಿಸಿದ್ದಾರೆ.

ಕೊರೊನಾ 'ದುರ್ಬಲ' ವೈರಸ್: ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದ ಡಾ.ಗಿರಿಧರ ಕಜೆ ಸಂದರ್ಶನ

ಎಲ್ಲಾ ರೀತಿಯ ವೈರಾಣುಗಳಿಗೆ ಪರಿಹಾರ ಇರುವುದು ಆಯುರ್ವೇದದಲ್ಲೇ ಎಂದು ಹೇಳಿರುವ, ಡಾ.ಕಜೆ, ಆರೋಗ್ಯಕ್ಕಾಗಿ ಹತ್ತು ದಿನ ಎನ್ನುವ ಅಭಿಯಾನವನ್ನು ನಡೆಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.

ಯಾವುದೇ ರೀತಿಯ ಡಯಟ್ ಸಿಸ್ಟಂ ಅನ್ನು ಬಳಸದೇ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹತ್ತು ಕೊರೊನಾ ಸೋಂಕಿತರ ಮೇಲೆ ಆಯುರ್ವೇದ ಮೆಡಿಸಿನ್ ಅನ್ನು ಪ್ರಯೋಗಿಸಲಾಗಿತ್ತು. ಎಲ್ಲರೂ ಹತ್ತು ದಿನಗಳಲ್ಲಿ ಗುಣಮುಖರಾಗಿದ್ದರು.

ಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ: ಖ್ಯಾತ ಆಯುರ್ವೇದ ತಜ್ಞ, ಡಾ.ಕಜೆ


ಸರಕಾರದಿಂದ ಅನುಮತಿ ಸಿಕ್ಕಿದೆ

ಈಗಾಗಾಲೇ ಸರಕಾರದಿಂದ ಅನುಮತಿ ಸಿಕ್ಕಿದೆ. ಹಾಗಾಗಿ, ಲಸಿಕೆ ಪ್ರೊಡಕ್ಷನ್ ಹಂತದಲ್ಲಿದೆ. ದೊಡ್ಡ ಮಟ್ಟದಲ್ಲಿ ಇದು ಬೇಕಾಗಿರುವುದರಿಂದ, ಮುಂದಿನ ಕೆಲವು ದಿನಗಳಲ್ಲಿ ಈ ಲಸಿಕೆ ಸಿದ್ದವಾಗಲಿದೆ. ಮುಂದಿನ ಹತ್ತು ದಿನಗಳಲ್ಲಿ ಇದು ಮಾರ್ಕೆಟ್ ನಲ್ಲಿ ಲಭ್ಯವಾಗಲಿದೆ.


ಖ್ಯಾತ ವೈದ್ಯ ಡಾ.ಗಿರಿಧರ ಕಜೆ

"ನಾವು ಈ ಔಷಧಿಯನ್ನು ಡೈರೆಕ್ಟಾಗಿ ಮಾರ್ಕೆಟಿಂಗ್ ಮಾಡುವುದಿಲ್ಲ. ಸರಕಾರಕ್ಕೆ ನಾನು ಈಗಾಗಲೇ ಎಪ್ಪತ್ತು ಸಾವಿರ ಲಸಿಕೆ ಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದೇನೆ. ಲಸಿಕೆಯ ಪೇಟೇಂಟ್ ಅನ್ನು ಸರಕಾರಕ್ಕೆ ನೀಡುತ್ತೇನೆ. ಹತ್ತು ದಿನದ ಕೋರ್ಸಿನ ಲಸಿಕೆಗೆ ಟ್ಯಾಕ್ಸ್ ಸೇರಿ 180 ರೂಪಾಯಿ ಆಗುತ್ತದೆ" ಎಂದು ಡಾ. ಕಜೆ ಹೇಳಿದ್ದಾರೆ.


ಓಪನ್ ಫಾರ್ಮುಲಾದ ಅಡಿಯಲ್ಲಿ ಬಿಟ್ಟು ಕೊಡುತ್ತೇನೆ

"ಸರಕಾರಕ್ಕೆ ಇನ್ನೊಂದು ಮನವಿಯನ್ನು ಮಾಡಿದ್ದೇನೆ. ನಾವು ಸಿದ್ದ ಪಡಿಸಿರುವ ಲಸಿಕೆಯನ್ನು ಓಪನ್ ಫಾರ್ಮುಲಾದ ಅಡಿಯಲ್ಲಿ ಬಿಟ್ಟು ಕೊಡುತ್ತೇನೆ. ಇದರಿಂದ, ದೇಶದ ಎಲ್ಲಾ ಆಯುರ್ವೇದ ಲಸಿಕೆ ತಯಾರಿಕಾ ಸಂಸ್ಥೆಗಳು ಇದನ್ನು ಸಿದ್ದ ಪಡಿಸಿದರೆ, ಏಕ ಕಾಲದಲ್ಲಿ ಎಲ್ಲರಿಗೂ ಈ ಲಸಿಕೆ ಸಿಗುವಂತಾಗುತ್ತದೆ"ಎಂದು ಡಾ.ಕಜೆ ಅಭಿಪ್ರಾಯ ಪಟ್ಟಿದ್ದಾರೆ.


ಪ್ರೈಮರಿ ಮತ್ತು ಸೆಕೆಂಡರಿ ಕ್ಯಾಂಟ್ಯಾಕ್ಟ್ ನಲ್ಲಿರುವವರು

"ನಮ್ಮ ಮೊದಲ ಆದ್ಯತೆ, ಸೋಂಕಿತರಲ್ಲದೇ, ಪ್ರೈಮರಿ ಮತ್ತು ಸೆಕೆಂಡರಿ ಕ್ಯಾಂಟ್ಯಾಕ್ಟ್ ನಲ್ಲಿರುವವರಿಗೆ ಈ ಲಸಿಕೆ ಸಿಗುವಂತಾಗಬೇಕು. ಇದರಿಂದ, ಸಕ್ರಿಯ ಪ್ರಕರಣಗಳು ಕಮ್ಮಿಯಾಗಲಿವೆ. ಸರಕಾರ ದಿಟ್ಟ ನಿರ್ಧಾರ ತೆಗೆದುಕೊಂಡರೆ, ಜನ ಔಷಧಿ ಕೇಂದ್ರ ಮುಂತಾದ ಕಡೆ ಈ ಲಸಿಕೆ ಸಿಗುವಂತಾಗುತ್ತದೆ" ಎಂದು ಡಾ.ಕಜೆ ಹೇಳಿದ್ದಾರೆ.


ಕಷಾಯವನ್ನು ಕುಡಿಯುವುದೇ ಸೂಕ್ತ

"ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ಇದು ಎಲ್ಲರಿಗೂ ಲಭ್ಯವಾಗುವುದಿಲ್ಲ. ನಮ್ಮ ಮೊದಲ ಆದ್ಯತೆ ಈ ಸೋಂಕಿಗೆ ಒಳಗಾದವರು ಮತ್ತು ಪ್ರೈಮರಿ ಮತ್ತು ಸೆಕೆಂಡರಿ ಕ್ಯಾಂಟ್ಯಾಕ್ಟ್ ನವರು. ಇಲ್ಲದಿದ್ದರೆ, ಎಲ್ಲರೂ ಇದನ್ನು ತೆಗೆದುಕೊಂಡರೆ, ಸಿಗಬೇಕಾದವರಿಗೆ ಇದು ಸಿಗುವುದಿಲ್ಲ. ಶೀತ,ಜ್ವರ,ಕೆಮ್ಮು ಮುಂತಾದ ಲಕ್ಷಣಗಳು ಇರುವವರು, ನಾವು ಈ ಹಿಂದೆ ಹೇಳಿದ ಕಷಾಯವನ್ನು ಕುಡಿಯುವುದೇ ಸೂಕ್ತ" ಎಂದು ಡಾ.ಗಿರಿಧರ ಕಜೆ ಹೇಳಿದ್ದಾರೆ.


source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags