Saaksha TV

76k Followers

ತನ್ನ ಗಡಿಪ್ರದೇಶಗಳಿಗೆ ನೇಪಾಳಿಗರ ಅಕ್ರಮ ಪ್ರವೇಶ ತಡೆಯಲು ನೇಪಾಳ ಸರ್ಕಾರವನ್ನು ಕೋರಿದ ಭಾರತ

30 Jul 2020.09:35 AM

ತನ್ನ ಗಡಿಪ್ರದೇಶಗಳಿಗೆ ನೇಪಾಳಿಗರ ಅಕ್ರಮ ಪ್ರವೇಶ ತಡೆಯಲು ನೇಪಾಳ ಸರ್ಕಾರವನ್ನು ಕೋರಿದ ಭಾರತ

ಹೊಸದಿಲ್ಲಿ, ಜುಲೈ 30: ಸ್ಥಳೀಯ ಪ್ರಾಂತ್ಯಗಳಾದ ಕಲಾಪಣಿ, ಲಿಂಪಿಯಾಧುರಾ, ಲಿಪುಲೆಖ್ ಮತ್ತು ಗುಂಜಿಗಳಿಗೆ ನೇಪಾಳಿ ನಾಗರಿಕರು ಅಕ್ರಮವಾಗಿ ಭೇಟಿ ನೀಡುವುದನ್ನು ತಡೆಯಲು ಭಾರತ ನೇಪಾಳವನ್ನು ಕೇಳಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿವೆ.
ಜುಲೈ ತಿಂಗಳ ಆರಂಭದಲ್ಲಿ ಭಾರತೀಯ ಅಧಿಕಾರಿಯೊಬ್ಬರು ಈ ಭಾರತೀಯ ಪ್ರದೇಶಗಳಿಗೆ ಅಕ್ರಮವಾಗಿ ಪ್ರವೇಶಿಸಲು ಬಯಸುವ ಗುಂಪುಗಳಲ್ಲಿರುವ ನೇಪಾಳಿ ಜನರು ಎರಡೂ ದೇಶಗಳಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ ಎಂದು ನೇಪಾಳಿ ಆಡಳಿತಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಉತ್ತರಾಖಂಡದ ಪಿಥೋರಗ ಜಿಲ್ಲೆಯ ಧಾರ್ಚುಲಾದ ಜಿಲ್ಲಾಧಿಕಾರಿ ಅನಿಲ್ ಶುಕ್ಲಾ ಅವರು ಜುಲೈ 14 ರಂದು ಬರೆದ ಪತ್ರದಲ್ಲಿ ನೇಪಾಳಿ ಅಧಿಕಾರಿಗಳಿಗೆ ಇಂತಹ ಚಟುವಟಿಕೆಗಳ ಬಗ್ಗೆ ಭಾರತೀಯ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ವರದಿಗಳು ‌ತಿಳಿಸಿವೆ.

ನೇಪಾಳಿಗಳನ್ನು ಪ್ರದೇಶಗಳಿಗೆ ಪ್ರವೇಶಿಸುವುದನ್ನು ನಿಷೇಧಿಸುವ ಭಾರತದ ನಿರ್ಧಾರಕ್ಕೆ ಸಂಬಂಧಿಸಿದಂತೆ ನಮಗೆ ಪತ್ರ ಮತ್ತು ದೂರವಾಣಿ ಕರೆ ಬಂದಿದೆ ಎಂದು ನೇಪಾಳದ ಡಾರ್ಚುಲಾದ ಮುಖ್ಯ ಜಿಲ್ಲಾ ಅಧಿಕಾರಿ ಶರದ್ ಕುಮಾರ್ ಪೋಖ್ರೆಲ್ ಅವರು ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಆದಾಗ್ಯೂ, ಮೇಲೆ ತಿಳಿಸಿದ ಪ್ರದೇಶಗಳಿಗೆ ಪ್ರವೇಶಿಸುವಾಗ ಅವರನ್ನು ತಡೆಯಲಾಗಿಲ್ಲ ಎಂದು ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ ಎಂದು ಪೋಖ್ರೆಲ್ ಹೇಳಿದ್ದಾರೆ.
ನೇಪಾಳದ ಅಧಿಕಾರಿಗಳು ಕಲಾಪಣಿ, ಲಿಂಪಿಯಾಡುರಾ ಮತ್ತು ಗುಂಜಿ ಪ್ರದೇಶಗಳು ತಮ್ಮ ದೇಶಕ್ಕೆ ಸೇರಿದ ಕಾರಣ ತನ್ನ ನಾಗರಿಕರ ಚಲನವಲನ ಸ್ವಾಭಾವಿಕ ಎಂದು ಉತ್ತರಿಸಿದ್ದಾರೆ
ಈ ಪ್ರದೇಶಗಳಲ್ಲಿ ನೇಪಾಳಿ ಪ್ರಜೆಗಳ ಚಲನವಲನ ಸ್ವಾಭಾವಿಕವಾಗಿದೆ ಎಂದು ನೇಪಾಳದ ಡಾರ್ಚುಲಾದ ಸಹಾಯಕ ಜಿಲ್ಲಾ ಆಡಳಿತಾಧಿಕಾರಿ ಟೆಕ್ ಸಿಂಗ್ ಕುನ್ವಾರ್ ಅವರು ಸಹಿ ಮಾಡಿದ್ದು, ನೇಪಾಳದ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಈ ಪತ್ರವನ್ನು ಭಾರತೀಯ ಅಧಿಕಾರಿಗೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ನೇಪಾಳವು ಕಳೆದ ತಿಂಗಳು ದೇಶದ ರಾಜಕೀಯ ನಕ್ಷೆಯನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪೂರ್ಣಗೊಳಿಸಿದ್ದು, ಆಯಕಟ್ಟಿನ ಮಹತ್ವದ ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ತನ್ನದಾಗಿಸಿಕೊಂಡಿದೆ.
ಆದರೆ ನೇಪಾಳದ ಪ್ರಾದೇಶಿಕ ಹಕ್ಕುಗಳ ವಿಸ್ತರಣೆಯನ್ನು ಭಾರತವು ಒಪ್ಪಲಾಗದು ಎಂದು ಹೇಳಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೇ 8 ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಪಾಸ್ ಅನ್ನು ಸಂಪರ್ಕಿಸುವ 80 ಕಿ.ಮೀ ಉದ್ದದ ಕಾರ್ಯತಂತ್ರದ ನಿರ್ಣಾಯಕ ರಸ್ತೆಯನ್ನು ಉದ್ಘಾಟಿಸಿದ ನಂತರ ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧಗಳು ಬಿಗಡಾಯಿಸಿದವು.
ರಸ್ತೆಯು ನೇಪಾಳ ಪ್ರದೇಶದ ಮೂಲಕ ಹಾದುಹೋಗಿದೆ ಎಂದು ನೇಪಾಳ ಪ್ರತಿಕ್ರಿಯಿಸಿತ್ತು ಮತ್ತು ರಸ್ತೆ ಸಂಪೂರ್ಣವಾಗಿ ತನ್ನ ಭೂಪ್ರದೇಶದಲ್ಲಿದೆ ಎಂಬ‌ ಭಾರತದ ಪ್ರತಿಪಾದನೆಯನ್ನು ತಿರಸ್ಕರಿಸಿತ್ತು.‌

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Saaksha TV