ಈ ಸಂಜೆ

803k Followers

BIG NEWS : ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರಿಯರಿಗೂ ಸಮಪಾಲು : ಸುಪ್ರೀಂ ಐತಿಹಾಸಿಕ ತೀರ್ಪು

11 Aug 2020.2:34 PM

ನವದೆಹಲಿ,ಆ.11-ಗಂಡು ಮಕ್ಕಳಂತೆ ಹೆಣ್ಣು ಮಕ್ಕಳು ಕೂಡ ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸಮಾನ ಅರ್ಹರು ಎಂದು ಸುಪ್ರೀಂಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ.

ಒಂದು ವೇಳೆ ಪೋಷಕರು ಮೃತಪಟ್ಟಿದ್ದರೂ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್‍ನ ಮೂವರು ಸದಸ್ಯರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

2005ರಲ್ಲಿ ತಿದ್ದುಪಡಿಯಾಗಿದ್ದ ಹಿಂದೂ ಉತ್ತರ ಅಕಾರಾತ್ವ(ತಿದ್ದುಪಡಿ) ಕಾಯ್ದೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್‍ನ ಅರುಣ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠ ತಂದೆ ಅಥವಾ ತಾಯಿ ಮೃತಪಟ್ಟಿದ್ದರೂ ಹೆಣ್ಣುಮಗಳು ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕುದಾರಳಾಗಿರುತ್ತಾಳೆ ಎಂದು ತೀರ್ಪು ಕೊಟ್ಟಿದೆ.

ಗಂಡುಮಕ್ಕಳಂತೆ ಹೆಣ್ಣು ಮಕ್ಕಳಿಗೆ ಸರಿಸಮಾನಾದ ಹಕ್ಕುಗಳನ್ನು ಕೊಡಬೇಕು.

ಮಗಳು ಜೀವನದುದ್ದಕ್ಕೂ ಪ್ರೀತಿಯ ಮಗಳಾಗೇ ಇರುತ್ತಾಳೆ. ಯಾವುದೋ ಒಂದು ಕಾರಣ ಇಟ್ಟುಕೊಂಡು ಆಸ್ತಿ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ ಅವಿಭಜಿತ ಕುಟುಂಬ ಹಾಗೂ 2005ರ ಹಿಂದೂ ಉತ್ತರಾದಿತ್ವ ಕಾಯ್ದೆಯ ತಿದ್ದುಪಡಿಗೆ ಅನುಗುಣವಾಗಿ ಹೆಣ್ಣುಮಕ್ಕಳು ಪೋಷಕರ ಆಸ್ತಿಯನ್ನು ಪಡೆಯಲು ಸರಿಸಮಾನರು.

ಈ ಕಾಯ್ದೆ ತಿದ್ದುಪಡಿ ಆಗುವ ಮುನ್ನ ತಂದೆ ಜೀವಂತವಾಗಿದ್ದಾರೋ ಇಲ್ಲವೋ ಮೃತಪಟ್ಟಿದ್ದಾರೆ ಎಂಬುದನ್ನು ಲೆಕ್ಕಿಸದೆ ಹೆಣ್ಣುಮಕ್ಕಳು ಅನುವಂಶಿಕವಾಗಿ ಆಸ್ತಿ ಪಡೆಯಬಹುದಾಗಿದೆ ಎಂದು ಹೇಳಿದೆ.

2005ರ ಸೆಪ್ಟೆಂಬರ್ 9ರಂದು ಕಾಯ್ದೆಗೆ ತಿದ್ದುಪಡಿ ಮಾಡಿದ ವೇಳೆ, ತಂದೆ ಮತ್ತು ಮಗಳು ಜೀವಂತವಾಗಿದ್ದರೆ ಮಾತ್ರ ಆಸ್ತಿ ಪಡೆಯಲು ಅರ್ಹಳಾಗಿರುತ್ತಾಳೆ ಎಂಬ ಕೆಳಹಂತದ ನ್ಯಾಯಾಲಯದ ಆದೇಶವನ್ನು ಕೋರ್ಟ್ ಬದಿಗೊತ್ತಿದೆ.

ಹಿಂದೂ ಅವಿಭಜಿತ ಕುಟುಂಬದಲ್ಲಿ ಗಂಡುಮಕ್ಕಳು ಮಾತ್ರ ತನ್ನ ತಂದೆಯ ಆಸ್ತಿಯನ್ನು ಪಡೆಯಲು ಅರ್ಹರು ಎಂಬ ಮಾತನ್ನು ಒಪ್ಪಲು ಸಾಧ್ಯವೇ ಇಲ್ಲ. ಪುತ್ರರಂತೆ ಹೆಣ್ಣು ಮಕ್ಕಳು ಸಹ ಆಸ್ತಿಯನ್ನು ಪಡೆಯಬಹುದಾಗಿದೆ. ಈ ತೀರ್ಪಿನಲ್ಲಿ ನಮಗೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿತು.

ತಂದೆಯ ಆಸ್ತಿಯಲ್ಲಿ ಈವರೆಗೂ ಹಿಂದೂ ಉತ್ತರದಾಯಿತ್ವ ಕಾಯ್ದೆ ಪ್ರಕಾರ ಗಂಡುಮಕ್ಕಳು ಮಾತ್ರ ಆಸ್ತಿ ಪಡೆಯಬಹುದೆಂಬ ನಿಯಮವಿತ್ತು. ಈಗ ನ್ಯಾಯಾಲಯ ಈ ತೀರ್ಪು ಕೊಟ್ಟಿರುವುದರಿಂದ ಇನ್ನು ಮುಂದೆ ಹೆಣ್ಣುಮಕ್ಕಳು ಸಹ ತಂದೆ ಆಸ್ತಿಯನ್ನು ಪಡೆಯಬಹುದಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags