ವಿಜಯವಾಣಿ

503k Followers

18ರಿಂದ ಬದಲಾಗಿದೆ ಎಟಿಎಂ ವಿತ್​ಡ್ರಾ ರೂಲ್ಸ್​: ಇಲ್ಲಿದೆ ಮಾಹಿತಿ

19 Sep 2020.1:12 PM

ನವದೆಹಲಿ: ಗ್ರಾಹಕರ ಸುರಕ್ಷತೆಯೇ ಮುಖ್ಯಧ್ಯೇಯ ಎಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಹಣವನ್ನು ವಿತ್​ಡ್ರಾ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ರೂಪಿಸಿದೆ.

ಇನ್ನು ಮುಂದೆ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ವಿತ್​ಡ್ರಾ ಮಾಡಿಕೊಳ್ಳಬಯಸಿದರೆ, ನಿಮ್ಮ ಫೋನ್​ಗೆ ಓಟಿಪಿ (ಒನ್​ಟೈಂ ಪಾಸ್​ವರ್ಡ್​) ಬರುತ್ತದೆ. ನೀವು ಬ್ಯಾಂಕ್​ಗೆ ನೋಂದಣಿ ಮಾಡಿರುವ ಮೊಬೈಲ್​ ಸಂಖ್ಯೆಗೆ ಈ ಓಟಿಪಿ ಬರುತ್ತದೆ. ಅದನ್ನು ಎಟಿಎಂ ಮಷಿನ್​ ಮೇಲೆ ನಮೂದು ಮಾಡಿದ ಮೇಲಷ್ಟೇ ಹಣವನ್ನು ಪಡೆಯಲು ಸಾಧ್ಯ.

ಗ್ರಾಹಕರ ಬ್ಯಾಂಕ್​ ಖಾತೆಗೆ ಬರಲ್ಲ ಎಲ್​ಪಿಜಿ ಸಬ್ಸಿಡಿ ಹಣ; ಕಾರಣವೇನು ಗೊತ್ತೆ?

ಆದ್ದರಿಂದ ಇನ್ನುಮುಂದೆ ಎಸ್​ಬಿಐನ ಯಾವುದೇ ಎಟಿಎಂಗೆ ಹೋಗಬೇಕಿದ್ದಲ್ಲಿ, 10 ಸಾವಿರ ರೂಪಾಯಿಗಿಂತ ಅಧಿಕ ಹಣವನ್ನು ವಿತ್​ಡ್ರಾ ಮಾಡುವುದೇ ಆಗಿದ್ದಲ್ಲಿ ಮೊಬೈಲ್​ ಫೋನ್​ ಅನ್ನು ಕಡ್ಡಾಯವಾಗಿ ಒಯ್ಯಲೇಬೇಕು.

ಎಟಿಎಂಗೆ ಕನ್ನ ಹಾಕಿ ಹಣವನ್ನು ವಿತ್​ಡ್ರಾ ಮಾಡುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಬ್ಯಾಂಕ್​ ಮಾಡಿದೆ.

ಆದರೆ ಈ ನಿಯಮ ಎಸ್​ಬಿಐನ ಎಟಿಎಂ ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್​ಗಳ ಎಟಿಎಂನಿಂದ ಹಣವನ್ನು ವಿತ್​ಡ್ರಾ ಮಾಡುವಾಗಿ ಅನ್ವಯ ಆಗುವುದಿಲ್ಲ. ಇದರ ಅರ್ಥ ಒಂದು ವೇಳೆ ನೀವು ಎಸ್​ಬಿಐ ಕಾರ್ಡ್​ ಹೊಂದಿದ್ದು, ಬೇರೆ ಬ್ಯಾಂಕ್​ನ ಎಟಿಎಂನಿಂದ ಹಣವನ್ನು ಡ್ರಾ ಮಾಡುವುದಿದ್ದರೆ, ಓಟಿಪಿ ಬರುವುದಿಲ್ಲ. 10 ಸಾವಿರ ರೂಪಾಯಿಗಿಂತಲೂ ಅಧಿಕ ಹಣ ವಿತ್​ಡ್ರಾ ಮಾಡಿದರೂ ಓಪಿಟಿ ಬರುವುದಿಲ್ಲ. ಏಕೆಂದರೆ ಈ ನಿಯಮ ಸದ್ಯ ಬೇರೆ ಬ್ಯಾಂಕ್​ಗಳಿಗೆ ಅನ್ವಯ ಆಗಿಲ್ಲ.

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ 'ಅಟಲ್' ಇಂದು​ ಸಂಪೂರ್ಣ: ಏನಿದರ ವಿಶೇಷತೆ?

ಭಾರ ತಾಳದೇ ಚಂಬಲ್​ ನದಿಯಲ್ಲಿ ಮಗುಚಿದ ದೋಣಿ: 11 ಮಂದಿ ಸಾವು

ಗಂಡ-ಮಗನನ್ನು ಬದುಕಿಸಲು ಪ್ರಾಣತೆಗೆದ ಹಾವನ್ನು ತಂದು ಪೂಜಿಸಿದಳು: ಮುಂದೇನಾಯ್ತು ನೋಡಿ…

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags