ವಿಜಯವಾಣಿ

505k Followers

ಫೇಸ್​ಬುಕ್​ನಲ್ಲಿ ಕಪಲ್​ ಚಾಲೆಂಜ್.​ ಎಚ್ಚರ ಎಚ್ಚರ. ಪೊಲೀಸರು ಬಿಚ್ಚಿಟ್ಟಿದ್ದಾರೆ ಭಯಾನಕ ಮಾಹಿತಿ

27 Sep 2020.10:22 AM

ಪುಣೆ: ಇದೀಗ ಫೇಸ್​ಬುಕ್​ನಲ್ಲಿ ಕಪಲ್​ ಚಾಲೆಂಜ್​, ಸಿಂಗಲ್​ ಚಾಲೆಂಜ್​, ಫ್ಯಾಮಿಲಿ ಚಾಲೆಂಜ್​ ಎಂಬ ಟ್ರೆಂಡ್​ಗಳು ಶುರುವಾಗಿದೆ. ತಾವು ಒಂಟಿಯಾಗಿರುವ, ಸಂಗಾತಿ ಜತೆಗಿರುವ, ಕುಟುಂಬದ ಜತೆಗಿರುವ ಫೋಟೋಗಳನ್ನು ಅಪ್​ಲೋಡ್​ ಮಾಡಲಾಗುತ್ತಿದೆ. ಇದಾಗಲೇ ಲಕ್ಷಾಂತರ ಮಂದಿ ತಮ್ಮ ಫೋಟೋಗಳನ್ನು ಅಪ್​ಲೋಡ್​ ಮಾಡಿದ್ದಾರೆ.

ಆದರೆ ಈ ಚಾಲೆಂಜ್​ ಹೆಸರಿನಲ್ಲಿ ಆಗುತ್ತಿರುವ ಭಯಾನಕ ಸತ್ಯವನ್ನು ಪುಣೆ ಪೊಲೀಸರು ಬಿಚ್ಚಿಟ್ಟಿದ್ದಾರೆ. ಟ್ವೀಟರ್​ ಮೂಲಕ ಮಾಹಿತಿ ನೀಡಿರುವ ಪೊಲೀಸರು, ದಯವಿಟ್ಟು ಇಂಥ ಚಾಲೆಂಜ್​ಗಳನ್ನು ಸ್ವೀಕರಿಸುವ ಮುನ್ನ ಬಹಳ ಜಾಗರೂಕರಾಗಿ ಇರಬೇಕು ಎಂದು ಹೇಳಿದ್ದಾರೆ.

ಇದಾಗಲೇ ತಮಗೆ ದೂರುಗಳು ಬಂದಿರುವ ಮಾಹಿತಿಯನ್ನು ಆಧರಿಸಿ ಈ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

ಅದರಲ್ಲಿಯೂ ಹೆಚ್ಚಾಗಿ ಕಪಲ್​ ಚಾಲೆಂಜ್​ನಲ್ಲಿ ಹಾಕಿರುವ ಫೋಟೋಗಳನ್ನು ತಿರುಚಿ, ಅದನ್ನು ಪೋರ್ನ್​ ವೆಬ್​ಸೈಟ್​ಗಳಿಗೆ ಅಪ್​ಲೋಡ್​ ಮಾಡುವ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಫೋಟೋಗಳನ್ನು ದುರುಪಯೋಗ ಪಡಿಸಿಕೊಂಡಿರುವ ಹಲವಾರು ಕಂಪ್ಲೇಂಟ್​ಗಳು ತಮಗೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಾಮಾನ್ಯವಾಗಿ ಫೇಸ್​ಬುಕ್​ಗೆ ಹಾಕುವ ವೈಯಕ್ತಿಯ ಫೋಟೋಗಳ ಬಗ್ಗೆ ಇದಾಗಲೇ ಸಾಕಷ್ಟು ಎಚ್ಚರಿಕೆ ಸಂದೇಶಗಳು ಬರುತ್ತಿರುವ ನಡುವೆಯೇ ಕಪಲ್​ ಚಾಲೆಂಜ್​ ಹೆಸರಿನಲ್ಲಿ ಆಗುತ್ತಿರುವ ದುರ್ಬಳಕೆ ಕುರಿತಂತೆ ತುಂಬಾ ಜಾಗರೂಕರಾಗಿ ಇರಬೇಕು. ಇಂಥ ಚಾಲೆಂಜ್​ಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ವಹಿಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್​ಲೋಡ್​ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಎಂದು ಟ್ವಿಟ್ಟರ್ ಖಾತೆಯ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ಯಾವುದೇ ಅನುಮಾನ ಮೂಡಿದರೂ ಕೂಡಲೇ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದೂ ಪುಣೆ ಪೊಲೀಸರು ತಿಳಿಸಿದ್ದಾರೆ.

ಇಲಿಗೆ ಸಿಕ್ಕಿತು ಪ್ರತಿಷ್ಠಿತ ಚಿನ್ನದ ಪದಕ, ಶೌರ್ಯ ಪ್ರಶಸ್ತಿ- ಇದರ ಸಾಹಸ ಏನು ಗೊತ್ತಾ?

ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು ಬ್ಲ್ಯಾಕ್​ಮೇಲ್​- ಸಂಬಳವಿಲ್ಲದೇ ಶಿಕ್ಷಕಿಯರ ದುಡಿತ!

ವಿರಾಟ್​ ಕೊಹ್ಲಿ ಕುರಿತು ಅಸಭ್ಯ ಕಮೆಂಟ್​: ಸುನಿಲ್​ ಗಾವಸ್ಕರ್​ ವಿರುದ್ಧ ಭುಗಿಲೆದ್ದ ಆಕ್ರೋಶ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags