ನ್ಯೂಸ್ ಕಡಬ

38k Followers

ರಾಜ್ಯದಲ್ಲಿ ಡಿಸೆಂಬರ್ 2ನೇ ವಾರದಲ್ಲಿ ಶಾಲೆ ಆರಂಭ.!

03 Nov 2020.12:15 PM

( ನ್ಯೂಸ್ ಕಡಬ) newskadaba.com ಬೆಂಗಳೂರು ನ. 03: ಕೋವಿಡ್ 19 ಕಾರಣದಿಂದಾಗಿ ಕಳೆದ ಏಳು -ಎಂಟು ತಿಂಗಳಿನಿಂದ ಶಾಲಾ ಕಾಲೇಜು ತೆರೆದಿಲ್ಲ. ಇದೀಗಾ ಕೊರೋನಾ ಕೊಂಚ ಮಟ್ಟಿಗೆ ಇಳಿಮುಖದತ್ತ ಮುಖ ಮಾಡಿದೆ. ಆದ್ದರಿಂದ ಮತ್ತೆ ಶಾಲಾ ಕಾಲೇಜು ಓಪನ್ ಮಾಡಲು ಮಹತ್ವದ ಸಭೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ವಾರಾಂತ್ಯದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ನವೆಂಬರ್ 17ರಂದು ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಶಾಲಾ ಕಾಲೇಜುಗಳ ಆರಂಭದ ಕುರಿತಾಗಿ ಚರ್ಚಿಸಲು ನ.4 ರಿಂದ ಸತತ ಮೂರು ದಿನಗಳ ಕಾಲ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳು ತಾಲೂಕು ಶಿಕ್ಷಣಾಧಿಗಳ ಜೊತೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.ಡಿಸೆಂಬರ್ 2ನೇ ವಾರದಲ್ಲಿ ಶಾಲೆ ಆರಂಬಿಸುವ ಸಾಧ್ಯತೆಗಳಿವೆ .ಈಗಾಗಲೇ ಆಂಧ್ರ ಪ್ರದೇಶದಲ್ಲಿ ಶಾಲಾ ಕಾಲೇಜು ಗಳು ಆರಂಭಗೊಂಡಿದ್ದೆ.

ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದಲೇ ಶಾಲೆಗಳಿಗೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಹಂತ ಹಂತವಾಗಿ ಶಾಲಾ ಕಾಲೇಜು ಆರಂಭಿಸಲು ಶಿಕ್ಷಣ ತಜ್ಞರು ಸೂಚನೆ ನೀಡಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: newskadaba.com

#Hashtags