Kannada News Now

1.8M Followers

'ಉದ್ಯೋಗಿನಿ ಯೋಜನೆ'ಯ ಅಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

30 Sep 2020.6:27 PM

ಮೈಸೂರು: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2020-21ನೇ ಸಾಲಿನಲ್ಲಿ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಲು ರಾಜ್ಯ ಸರ್ಕಾರ ಒದಗಿಸಿರುವ ಸಹಾಯಧನ ಮತ್ತು ಬ್ಯಾಂಕುಗಳಿಂದ ಸಾಲವನ್ನು ಒದಗಿಸುವುದು ಅರ್ಜಿ ಆಹ್ವಾನಿಸಿದೆ.

ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿ 1 ಲಕ್ಷ ರೂ.ಗಳಿಂದ 3.00 ಲಕ್ಷ ರೂ.ಗಳಿಗೆ, ಸಹಾಯಧನದ ಮೊತ್ತವನ್ನು ಸಾಲದ ಮೊತ್ತದ ಶೇ.50 ರಷ್ಟಕ್ಕೆ ಅದರಂತೆ ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿ 1 ಲಕ್ಷ ರೂ. ಗಳಿಂದ 3 ಲಕ್ಷ ರೂ.ಗಳಿಗೆ, ಸಹಾಯಧನದ ಮೊತ್ತವನ್ನು ಸಾಲದ ಮೊತ್ತದ ಶೇ.30ರಷ್ಟಕ್ಕೆ ನಿಗದಿಪಡಿಸಲಾಗಿರುತ್ತದೆ.

18 ರಿಂದ 55 ವರ್ಷದ ಮಹಿಳೆಯರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅಕ್ಟೋಬರ್ 10 ರೊಳಗೆ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 20 ರೊಳಗೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೈಸೂರು ನಗರ (0821-2491962), ಮೈಸೂರು ಗ್ರಾಮಾಂತರ (0821-2567940), ತಿ.ನರಸೀಪುರ (08227-261267), ಬಿಳಿಗೆರೆ ಯೋಜನೆ (8221297171), ನಂಜನಗೂಡು (08221-226168), ಹುಣಸೂರು(08222-252254), ಹೆಚ್.ಡಿ ಕೋಟೆ(08228-255320), ಕೃಷ್ಣರಾಜನಗರ(08223-262714), ಪಿರಿಯಾಪಟ್ಟಣ(08223-27474)ಗಳಿಗೆ 3 ಪ್ರತಿಗಳನ್ನು ಸಲ್ಲಿಸುವುದು.

ಹೆಚ್ಚಿನ ವಿವರಗಳಿಗೆ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ತಾಲ್ಲೂಕು ಕಛೇರಿಗಳಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರು ಹಾಗೂ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags