Kannada News Now

1.8M Followers

BIG NEWS : ಅತ್ತೆ-ಮಾವನ ಮನೆಯಲ್ಲೂ ಮಹಿಳೆಗೆ ಹಕ್ಕಿದೆ : ಸುಪ್ರೀಂಕೋರ್ಟ್ ನಿಂದ ಮಹತ್ವದ ಆದೇಶ

16 Oct 2020.10:53 AM

ನವದೆಹಲಿ : ಕೌಟುಂಬಿಕ ಕಲಹದಿಂದಾಗಿ ಅತ್ತೆ-ಮಾನವ ಮನೆಯಿಂದ ಹೊರ ಹಾಕಲ್ಪಟ್ಟ ಮಹಿಳೆಯರಿಗೆ ಗಂಡನ ಮನೆ ಜೊತೆಗೆ ಅತ್ತೆ-ಮಾವನ ಮನೆಯಲ್ಲೂ ಮಹಿಳೆಗೆ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಹಿಳೆಯು ಅತ್ತೆ-ಮಾವನ ಅಥವಾ ತಮ್ಮ ಪತಿಯ ಜೊತೆ ವಾಸವಿದ್ದ ಸಂಬಂಧಿಕರ ಮನೆಯ ಭಾಗವಾಗಿ ಮಹಿಳೆ ಆ ಮನೆಯಲ್ಲೇ ಉಳಿದುಕೊಳ್ಳಬಹುದು. ಅವರು ಮನೆಯ ಪಾಲುದಾರಿಕೆ ಪಡೆಯುವ ಮೂಲಕ ತಮ್ಮ ಹಕ್ಕು ಸಾಧಿಸಲು ಅರ್ಹರು, ಆ ಮನೆ ಅತ್ತೆ ಮಾವನ ಅಥವಾ ಪತಿಯ ರಕ್ತ ಸಂಬಂಧಿಕರ ಹೆಸರಿನಲ್ಲಿದ್ದರೂ ಸಹ ಸೊಸೆಗೆ ಹಕ್ಕು ಸಾಧಿಸುವ ಅರ್ಹತೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠವು ಈ ಹಿಂದೆ ಮಹಿಳೆಯರ ಹಕ್ಕುಗಳ ಕುರಿತಂತೆ 2007 ರಲ್ಲಿ ಸುಪ್ರೀಂಕೋರ್ಟ್ ನೀಡಿದ ಗೃಹ ಹಿಂಸಾಚಾರ ಸಂತ್ರಸ್ತರಿಗೆ ಹಂಚಿಕೆಯ ಮನೆಯ ಹಕ್ಕುಗಳನ್ನು ನೀಡುವ ಹಿಂದಿನ ತೀರ್ಪನ್ನು ರದ್ದುಗೊಳಿಸಲಾಗಿದೆ. ಗಂಡನ ಸಂಬಂಧಿಕರ ಒಡೆತನದಲ್ಲಿದ್ದ ಮನೆ ಕೂಡ ವಾಸಿಸುವ ಹಕ್ಕನ್ನು ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags