Kannada News Now

1.8M Followers

SBI ಬ್ಯಾಂಕ್‌ ಗ್ರಾಹಕರಿಗೆ 'ಮಹತ್ವದ ಮಾಹಿತಿ' : ATM ನಗದು ಹಿಂತೆಗೆದುಕೊಳ್ಳುವ ನಿಯಮದಲ್ಲಿ ಆಗಿದೆ ಈ ಬದಲಾವಣೆ

23 Oct 2020.3:05 PM

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಟಿಎಂಗಳಿಂದ ನಗದು ಹಿಂಪಡೆಯುವದಕ್ಕೆ ಸಂಬಂಧಿಸಿದ ತನ್ನ ನಿಯಮವನ್ನು ಈಗಾಗಲೇ ಬದಲಿಸಿದೆ. ಸೆಪ್ಟೆಂಬರ್ 18 ರಿಂದ ಜಾರಿಗೆ ಬಂದ ಎಸ್ ಬಿಐ, ಎಟಿಎಂಗಳಿಂದ ಒಟಿಪಿ ಆಧಾರಿತ ನಗದು ಹಿಂತೆಗೆತಕ್ಕೆ ಕಾಲಾವಕಾಶ ವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಎಸ್ ಬಿಐ ಗ್ರಾಹಕರು ಈಗ ದಿನವಿಡೀ ಒಟಿಪಿ ಪರಿಶೀಲನೆ ಯ ನಂತರ 10,000 ಮತ್ತು ಅದಕ್ಕಿಂತ ಹೆಚ್ಚಿನ ರುಪಾಯಿಗಳ ಎಟಿಎಂ ವಿತ್ ಡ್ರಾ ಮಾಡಬಹುದಾಗಿದೆ.

ಎಸ್ ಬಿಐ ತನ್ನ ಗ್ರಾಹಕರಿಗಾಗಿ ಇತ್ತೀಚೆಗೆ ನಿಯಮಗಳ ಬಗ್ಗೆ ಮತ್ತೊಮ್ಮೆ ಟ್ವೀಟ್ ಮಾಡಿದೆ. ಗ್ರಾಹಕರು ಎಚ್ಚರಿಕೆಯಿಂದ ಇರುವಂತೆ, ಸುರಕ್ಷಿತವಾಗಿ ವ್ಯವಹಾರ ನಡೆಸುವಂತೆ ಬ್ಯಾಂಕ್ ಸೂಚಿಸಿದೆ. 'ನಮ್ಮ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಎಸ್ ಬಿಐ ಎಟಿಎಂಗಳಲ್ಲಿ ರೂ.10,000 ಮತ್ತು ಅದಕ್ಕಿಂತ ಹೆಚ್ಚಿನ ನಗದು ಹಿಂತೆಗೆತಕ್ಕಾಗಿ ಒಟಿಪಿ ಆಧಾರಿತ ದೃಢೀಕರಣವನ್ನು 24×7 ಗೆ ವಿಸ್ತರಿಸಿದೆ.

ಹುಷಾರಾಗಿರಿ, ಸುರಕ್ಷಿತವಾಗಿ ವ್ಯವಹಾರ ಮಾಡಿ' ಎಂದು ಎಸ್ ಬಿಐ ಟ್ವೀಟ್ ಮಾಡಿದೆ. ಜನವರಿ ತಿಂಗಳಲ್ಲಿ 8 PM ನಿಂದ 8 AM ವರೆಗೆ ಗ್ರಾಹಕರಿಗೆ ಈ ಸೌಲಭ್ಯವನ್ನು ಬ್ಯಾಂಕ್ ಅನುಮತಿನೀಡಿತ್ತು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags