Kannada News Now

1.8M Followers

ಮತದಾರರಿಗೆ 'ಮಹತ್ವದ ಮಾಹಿತಿ' : ಮನೆಯಲ್ಲೇ ಕುಳಿತು 'ವೋಟರ್ ಐಡಿ'ಗಾಗಿ 'ಆನ್ ಲೈನ್ ನಲ್ಲಿ' ಈ ರೀತಿ ಅರ್ಜಿ ಸಲ್ಲಿಸಿ

24 Oct 2020.06:32 AM

ಡಿಜಿಟಲ್‌ಡೆಸ್ಕ್‌: ನಾವು ಪ್ರತಿ ಸಾರಿ ಕೂಡ ಮತದಾನ ಮಾಡೋವಾಗ ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಇರೋದು ಹಾಗೂ ಕೆಲವು ದಾಖಲಾತಿಗಳನ್ನು ಓಟು ಹಾಕೋವಾಗ ತರೋದಕ್ಕೆ ಹೇಳುತ್ತದೆ, ಅದರಲ್ಲೂ ಅನೇಕ ಸಂದರ್ಭದಲ್ಲಿ ನಮ್ಮಲ್ಲಿ ವೋಟರ್ ಐಡಿ ಕಾರ್ಡ್ ಬೇಕು ಅಲ್ವಾ? ಈ ಸಂದರ್ಭದಲ್ಲಿ, ನೀವು ಇನ್ನೂ ವೋಟರ್ ಐಡಿ ಕಾರ್ಡ್ (ವೋಟರ್ ಐಡಿ) ಮಾಡಿಲ್ಲಎಂದಾದಲ್ಲಿ, ನಂತರ ಅರ್ಜಿ ಸಲ್ಲಿಸಿ. ನಿಮ್ಮ ವೋಟರ್ ಐಡಿ ಪಡೆಯಲು ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲೇ ನಿಮ್ಮ ವೋಟರ್ ಐಡಿಗಾಗಿ ನೀವು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ವೋಟರ್ ಐಡಿ ಕಾರ್ಡ್ ಅಥವಾ ವೋಟರ್ ಐಡಿ ಯನ್ನು ಹೇಗೆ ಪಡೆಯುವುದು ಅನ್ನೊಂದನ್ನ ನಾವು ನಿಮಗೆ ತಿಳಿಸಿಕೊಡ್ತಾ ಇದ್ದೀವಿ. ನೋಡಿ.

ಆನ್ ಲೈನ್ ನಲ್ಲಿ ವೋಟರ್ ಐಡಿ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್, ರಾಷ್ಟ್ರೀಯ ವೋಟರ್ ಸರ್ವೀಸ್ ಪೋರ್ಟಲ್ www.nvsp.in ಹೋಗಿ ಮತ್ತು ನ್ಯೂ ರಿಜಿಸ್ಟ್ರೇಷನ್ ಮೇಲೆ .
ಹಂತ 2: ನಿಮ್ಮ ಇಮೇಲ್ ಐಡಿ, ಫೋನ್ ನಂಬರ್ ಮತ್ತು ಪಾಸ್ ವರ್ಡ್ ಅನ್ನು ಇಲ್ಲಿ ತುಂಬಿ. ಇದಾದ ನಂತರ ನಿಮ್ಮ ಲಾಗಿನ್ ಅನ್ನು ರಚಿಸಲಾಗುತ್ತದೆ.
ಹಂತ 4: ಹೆಸರು, ಜನ್ಮ ದಿನಾಂಕ, ವಿಳಾಸ ಮುಂತಾದ ಅಗತ್ಯ ವಿವರಗಳನ್ನು ನಮೂದಿಸಿ, ವಿಳಾಸ ಮತ್ತು ಜನ್ಮ ದಿನಾಂಕದಂತಹ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
ಹಂತ 5: 'ಸಬ್ ಮಿಟ್' ಮೇಲೆ .

ನಿಮ್ಮ ಇಮೇಲ್ ಐಡಿಯಲ್ಲಿ ವೋಟರ್ ಐಡಿ ಕಾರ್ಡ್ ನೊಂದಿಗೆ ಈ ಲಿಂಕ್ ಬರುತ್ತದೆ. ಈ ಲಿಂಕ್ ಮೂಲಕ ವೋಟರ್ ಐಡಿ ಕಾರ್ಡ್ ಅನ್ನು ಟ್ರ್ಯಾಕ್ ಮಾಡಬಹುದು ಮತ್ತು ಅರ್ಜಿ ಹಾಕಿದ ಒಂದು ತಿಂಗಳೊಳಗೆ ವೋಟರ್ ಐಡಿ ಕಾರ್ಡ್ ಅನ್ನು ಕಂಡುಹಿಡಿಯಬಹುದು. ವೋಟರ್ ಐಡಿ ಕಾರ್ಡ್ ಪಡೆಯದಿದ್ದರೆ, ಅಭ್ಯರ್ಥಿಯು ಅಧಿಕೃತ ವೆಬ್ ಸೈಟ್ ಅನ್ನು ಪರಿಶೀಲಿಸಬಹುದು ಮತ್ತು ಹತ್ತಿರದ ಚುನಾವಣಾ ಕಚೇರಿ ಅಥವಾ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags