ಒನ್ ಇಂಡಿಯಾ ಎಕ್ಸ್ಕ್ಲೂಸಿವ್

34k Followers

ಕೇಂದ್ರ ಸರ್ಕಾರ ಯಾವುದೇ ತುಟ್ಟಿ ಭತ್ಯೆ ಏರಿಕೆಯನ್ನೂ ಘೋಷಿಸಿಲ್ಲ, ಹಣಕಾಸು ಸಚಿವಾಲಯ ಸ್ಪಷ್ಟನೆ

02 Dec 2020.12:17 PM

ಇತ್ತೀಚೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಕೇಂದ್ರ ಸರ್ಕಾರ 24%ದಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ ಜೊತೆಗೆ ಬಾಕಿ ಹಣವನ್ನುಕೂಡ ನೌಕರರಿಗೆ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಿರ್ಧರಿಸಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು . ಈಗ ಈ ಗಾಳಿ ಸುದ್ದಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು. ಇದು ಸುಳ್ಳು ಸುದ್ದಿ, ಕೇಂದ್ರ ಹಣಕಾಸು ಸಚಿವಾಲಯ ತುಟ್ಟಿ ಭತ್ಯೆ ಹೆಚ್ಚಳದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದೆ.

ಹೆಚ್ಚುವರಿ ತುಟ್ಟಿ ಭತ್ಯೆ ಇಲ್ಲ

ಕೋವಿಡ್‌- 19 ಕಾರಣದಿಂದ ಕೇಂದ್ರ ಸರ್ಕಾರ 50 ಲಕ್ಷ ಕೆಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳವನ್ನು ತಡೆಹಿಡಿದಿತ್ತು. ಈ ಕುರಿತು ಎಪ್ರೀಲ್‌ ತಿಂಗಳಿನಲ್ಲಿ ಘೋಷಣೆ ಕೂಡ ಮಾಡಿತ್ತು ಆದರೆ, ಈಗಿರುವ ದರದಲ್ಲೇ ತುಟ್ಟಿ ಭತ್ಯೆಯನ್ನು ನೌಕರರಿಗೆ ಪಾವತಿ ಮಾಡುವುದನ್ನು ಮುಂದುವರೆಸಲಾಗುವುದು ಎಂದು ಸ್ಪಷ್ಟನೆ ಕೂಡ ನೀಡಿತ್ತು. ಕೊರೊನಾ ಕಾರಣದಿಂದ ಜನೆವರಿ 1, 2020 ರಿಂದ ಬಾಕಿ ಉಳಿದಿರುವ ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರ ಹೆಚ್ಚುವರಿ ತುಟ್ಟಿ ಭತ್ಯೆ ಕಂತುಗಳು ತಡೆಹಿಡಿಯಲು ನಿರ್ಧರಿಸಿದೆ, ಎಂದು ಹಣಕಾಸು ಸಚಿವಾಲಯ ಎಪ್ರಿಲ್‌ನಲ್ಲೇ ಪ್ರಕಟಣೆ ಹೊರಡಿಸಿದೆ.

ಕೇಂದ್ರ ಸರ್ಕಾರ ದ ನಿರ್ಧಾರವನ್ನು ಕೆಲವು ರಾಜ್ಯಗಳು ಸ್ವಾಗತಿಸಿ, ತಾವೂ ರಾಜ್ಯಗಳ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳವನ್ನು ತಡೆಹಿಡಿದಿದೆ.ಸದ್ಯ ಕೇಂದ್ರ ಸರ್ಕಾರದಿಂದ ಈಗಿನ ದರದಲ್ಲಿ ಮಾತ್ರ ತುಟ್ಟಿ ಭತ್ಯೆಯನ್ನು ನೌಕರರಿಗೆ ನೀಡಲಾಗುತ್ತಿದೆ, ಹೆಚ್ಚುವರಿ ತುಟ್ಟಿಭತ್ಯೆ ಪಾವತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Exclusive Kannada

#Hashtags