Oneindia

1.1M Followers

ಗ್ರಾಮ ಪಂಚಾಯಿತಿ ಚುನಾವಣೆ: ಚುನಾವಣಾ ಆಯೋಗಕ್ಕೆ ಶಿಕ್ಷಕರ ಮನವಿ

04 Dec 2020.7:40 PM

ಬೆಂಗಳೂರು, ಡಿಸೆಂಬರ್ 4: ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 50 ವರ್ಷ ಮೇಲ್ಪಟ್ಟ ಮತ್ತು ಅನಾರೋಗ್ಯದ ಸಮಸ್ಯೆಗಳುಳ್ಳ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಮನವಿ ಮಾಡಿದ್ದಾರೆ.

'ಚುನಾವಣೆಗೆ ಬಳಸಿಕೊಳ್ಳುವ ಸರ್ಕಾರಿ ಸಿಬ್ಬಂದಿಗಳ ಪೈಕಿ ಶೇ 50ರಷ್ಟು ಮಂದಿ ಶಿಕ್ಷಕರೇ ಆಗಿದ್ದು, ಅವರಲ್ಲಿ ಬಹುಪಾಲು ಮಂದಿ 50 ವರ್ಷ ದಾಟಿದವರಾಗಿದ್ದಾರೆ' ಎಂದು ಶಿಕ್ಷಕರ ಸಂಘಗಳು ತಿಳಿಸಿವೆ.

ಪಂಚಾಯಿತಿ ಚುನಾವಣೆ; ನೇಮಕಾತಿಗೆ ನೀತಿ ಸಂಹಿತೆ ಅಡ್ಡಿ ಇದೆಯೇ?

'ಡಿಸೆಂಬರ್ 22 ಮತ್ತು 27ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯ ವೇಳೆ 50 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳದಂತೆ ಶೀಘ್ರದಲ್ಲಿಯೇ ನಾವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದ್ದೇವೆ' ಎಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಸಹಾಯಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌ಕೆ ಮಂಜುನಾಥ್ ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಕೋವಿಡ್ ಸಂಬಂಧಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸಂದರ್ಭದಲ್ಲಿ ಅನೇಕ ಶಿಕ್ಷಕರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರು ಎಂಬ ಬಗ್ಗೆ ಕೂಡ ಶಿಕ್ಷಕರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಅಂತಹ ಕಾರ್ಯಗಳಿಗೆ ತೆರಳುವಾಗ ನಮಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ. ಈ ಬಾರಕ ವೈರಸ್‌ನಿಂದಾಗಿ ನಮ್ಮ ಅನೇಕ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ನಾಳೆ ಬಂದ್ ಮಾಡುವವರಿಗೆ ಕಿವಿ ಮಾತು ಹೇಳಿದ ಮುಖ್ಯಮಂತ್ರಿಗಳು | Oneindia Kannada

ರಾಜ್ಯದ ಒಟ್ಟು 5,762 ಗ್ರಾಮ ಪಂಚಾಯಿತಿಗಳಿಗೆ ಡಿ. 22 ಮತ್ತು 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags