ವಿಜಯವಾಣಿ

505k Followers

ಸ್ಕೂಲ್​ ಬ್ಯಾಗ್​ ತೂಕ ಮತ್ತಷ್ಟು ಇಳಿಕೆ, ಹೋಂ ವರ್ಕ್​ಗೂ ಬಿತ್ತು ಕತ್ತರಿ! ಈ ಕ್ಲಾಸಿನ ಮಕ್ಕಳಿಗೆ ಹೋಂ ವರ್ಕ್​ ಇಲ್ಲವೇ ಇಲ್ಲ!

09 Dec 2020.3:19 PM

ನವದೆಹಲಿ: ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು (ಎನ್​ಇಪಿ) ತರಲಾಗಿದೆ. ಈ ನೀತಿಯ ಅನುಸಾರ ಶಾಲೆಗೆ ಮಕ್ಕಳು ತೆಗೆದುಕೊಂಡು ಹೋಗುವ ಬ್ಯಾಗಿನ ತೂಕವೂ ಇಳಿಯಲಿದೆ. ಅದರ ಜತೆ ಹೋಂ ವರ್ಕ್​ನಲ್ಲೂ ಸಾಕಷ್ಟು ಸಡಿಲಿಕೆ ಮಾಡಲಾಗಿದೆ. ಈ ಕುರಿತಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಸರ್ಕಾರಕ್ಕೆ ಶಿಫಾರಸು ಮಾಡಿದೆ.

1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಚೀಲಗಳ ತೂಕವನ್ನು ವಿದ್ಯಾರ್ಥಿಗಳ ತೂಕದ ಶೇಕಡಾ 10 ಕ್ಕೆ ನಿಗದಿಪಡಿಸಲಾಗಿದೆ. ಪ್ರತಿ ಶಾಲೆಯಲ್ಲಿ ಬ್ಯಾಗ್​ ತೂಕ ಮಾಡಲೆಂದೇ ಡಿಜಿಟಲ್​ ತಕ್ಕಡಿ ಇಡಲಾಗುವುದು. ಹಾಗೆಯೇ 2 ತರಗತಿವರೆಗಿನ ಮಕ್ಕಳಿಗೆ ಹೋಂ ವರ್ಕ್​ ಕೊಡುವಂತಿಲ್ಲ. ಆ ಮಕ್ಕಳು ಶಾಲೆಯಲ್ಲಿ ಮಾತ್ರ ಕಲಿಯಲಿದ್ದಾರೆ ಎಂದು ತಿಳಿಸಲಾಗಿದೆ.

ಶಾಲಾ ಆವರಣದಲ್ಲಿ ಲಾಕರ್​ಗಳು, ಡಿಜಿಟಲ್​ ತಕ್ಕಡಿ, ಕುಡಿಯುವ ನೀರನ್ನು ಇಡುವುದು ಅತ್ಯಗತ್ಯ.

ಟ್ರಾಲಿ ಬ್ಯಾಗ್​ ಬಳಕೆಗೆ ನಿಷೇಧ ಹೇರಲಾಗಿದೆ. ಎರಡು ಬಗಲಿಗೆ ಹಾಕುವಂತ ಬ್ಯಾಗ್​ಗಳನ್ನು ಮಾತ್ರವೇ ಅವಕಾಶ. ಟ್ರಾಲಿ ಬ್ಯಾಗ್​ಗಳನ್ನು ಮೆಟ್ಟಿಲಿನಲ್ಲಿ ಎತ್ತಿಕೊಂಡು ಹೋಗುವಾಗ ವಿದ್ಯಾರ್ಥಿಗಳಿಗೆ ಹಾನಿ ಆಗಬಹುದು ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಸಂಸ್ಥೆಗಳ ಶಿಫಾರಸುಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇದರ ಜತೆಗೆ ಮಕ್ಕಳಿಗೆ ನೀಡಲಾಗುವ ಪುಸ್ತಕದ ತೂಕವನ್ನು ಪರಿಗಣಿಸಬೇಕಿದೆ. ಪ್ರತಿ ಪುಸ್ತಕದ ತೂಕವನ್ನು ಪ್ರತಿ ಚದರ ಮೀಟರ್‌ (ಜಿಎಸ್‌ಎಂ) ಲೆಕ್ಕದಲ್ಲಿ ಪ್ರಕಾಶಕರು ಪುಸ್ತಕದಲ್ಲಿ ಮುದ್ರಿಸಬೇಕು ಎಂದು ಹೇಳಲಾಗಿದೆ. (ಏಜೆನ್ಸೀಸ್​)

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags