Kannada News Now

1.8M Followers

ʼಕೇಂದ್ರ ಸರ್ಕಾರಿ ನೌಕರʼರಿಗೆ ಗುಡ್‌ ನ್ಯೂಸ್: ಇದೇ ತಿಂಗಳು ʼಡಿಎ, ಡಿಆರ್ʼ ಹೆಚ್ಚಳ?

18 Jan 2021.5:56 PM

ನವದೆಹಲಿ: 1 ಕೋಟಿಗೂ ಹೆಚ್ಚು ಕೇಂದ್ರ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಈ ತಿಂಗಳ ಅಂತ್ಯದಲ್ಲಿ ನೌಕರರ ಡಿಎ ಮತ್ತು ಡಿಆರ್ ಅನ್ನ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಜುಲೈನಿಂದ ಸರ್ಕಾರ ಇದನ್ನ ನಿಷೇಧಿಸಿತ್ತು. ಆದ್ರೆ, ಸಧ್ಯ ಸರ್ಕಾರ ಅವರಿಗೆ ಪರಿಹಾರ ನೀಡಲು ಸಿದ್ಧತೆ ನಡೆಸಿದೆ.

ಡಿಆರ್ ಹೆಚ್ಚಳದ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ..!
ಇತ್ತೀಚಿನ ವರದಿ ಪ್ರಕಾರ, ಕೇಂದ್ರ ನೌಕರನ ಡಿಎಯನ್ನ ಶೇಕಡಾ 4ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಎಲ್ಲವೂ ಸರಿಯಾಗಿದ್ದರೆ ಜನವರಿ ಕೊನೆಯ ವಾರದಲ್ಲಿ ಸರಕಾರ ಘೋಷಣೆ ಮಾಡಬಹುದು. ಮತ್ತೊಂದೆಡೆ, ಸರ್ಕಾರ ಡಿಆರ್ ಅನ್ನ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

1 ಕೋಟಿಗೂ ಹೆಚ್ಚು ಉದ್ಯೋಗಿಗಳು..!

ದೇಶಾದ್ಯಂತ 1 ಕೋಟಿಗೂ ಹೆಚ್ಚು ಪಿಂಚಣಿದಾರರು ಮತ್ತು ಉದ್ಯೋಗಿಗಳಿದ್ದಾರೆ ಎಂದು ಹೇಳಲಾಗ್ತಿದೆ. ಪ್ರಸ್ತುತ ಭಾರತದಲ್ಲಿ 48 ಲಕ್ಷ ಪಿಂಚಣಿದಾರರು ಮತ್ತು 65 ಲಕ್ಷ ಉದ್ಯೋಗಿಗಳಿದ್ದಾರೆ. ಸರ್ಕಾರ ಅವರೆಲ್ಲರ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಲಿದೆ. ಆದರೆ, ಅಧಿಕೃತ ದಿನಾಂಕ ಇನ್ನೂ ಪ್ರಕಟಿಸಿಲ್ಲ.

ಕೊರೊನಾ ತಂದಿಟ್ಟ ಸಂಕಷ್ಟದಿಂದಾಗಿ ಈ ನಿರ್ಣಾಯ..!
ಕೊರೊನಾ ತಂದಿಟ್ಟ ಸಂಕಷ್ಟದಿಂದಾಗಿ ತುಟ್ಟಿಭತ್ಯೆ ಹೆಚ್ಚಳದ ನಿರ್ಧಾರವನ್ನ ಸ್ಥಗಿತವಾಗಿದ್ದು, ಜುಲೈನಿಂದ ನಿಲ್ಲಿಸಲಾಗಿದೆ. ಈಗ ಕೊರೊನಾ ಕದನ ಅಂತಿಮ ಘಟ್ಟ ತಲುಪಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಡಿಎ ಮತ್ತು ಡಿಆರ್ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/3qpeEBB



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags