Kannada News Now

1.8M Followers

ಸುಭಾಷ್ ಚಂದ್ರ ಬೋಸ್ ಜನ್ಮ ದಿನವನ್ನು 'ಪರಾಕ್ರಮ ದಿವಸ್' ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ

19 Jan 2021.11:20 AM

ನವದೆಹಲಿ: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನ ಜನವರಿ 23 ಅನ್ನು ಪ್ರತಿ ವರ್ಷ 'ಪರಾಕ್ರಮ ದಿವಸ್' ಎಂದು ಆಚರಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರಕಟಿಸಿದೆ.

ಈ ತಿಂಗಳ ಆರಂಭದಲ್ಲಿ, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ಸಂಸ್ಕೃತಿ ಸಚಿವಾಲಯವು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.

85 ಸದಸ್ಯರ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ಹಿರಿಯ ನಾಯಕರು, ಕೇಂದ್ರ ಸಚಿವರು ಸೇರಿದಂತೆ ನೇತಾಜಿ ಕುಟುಂಬದ ಸದಸ್ಯರು ಸೇರಿದ್ದಾರೆ. ನೇತಾಜಿ ಅವರ ಜಯಂತಿ ಜನವರಿ 23ರಂದು ನೇತಾಜಿ ಅವರ ಕಾರ್ಯಕ್ರಮಗಳು ಆರಂಭವಾಗಲಿವೆ.

ಈ ಕಾರ್ಯಕ್ರಮಗಳು ವಿಶ್ವದಾದ್ಯಂತ ನಡೆಯಲಿವೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 23ರಂದು ಕೋಲ್ಕತ್ತಾದ ಐತಿಹಾಸಿಕ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಿಂದ ಆರಂಭಮಾಡಲಿದ್ದಾರೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/3p3Rf8E



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags